KGF 2: ಸೀರೆಯಲ್ಲಿ ಕಂಗೊಳಿಸಿದ ಶ್ರೀನಿಧಿ ಶೆಟ್ಟಿ, ಇವ್ರ ಮುಂದಿನ ಸಿನಿಮಾ ಈ ಸೂಪರ್ ಸ್ಟಾರ್ ಜೊತೆ!
KGF 2 Actress Srinidhi Shetty : ಇದೀಗ ಕೆಜಿಎಫ್ 1 ಹಾಗೂ 2 ನ್ನು ಮುಗಿಸಿರುವ ಶ್ರೀನಿಧಿ ಶೆಟ್ಟಿ ತಮಿಳಿನಲ್ಲಿ ಸೂರ್ಯ ಜೊತೆ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಅನೇಕ ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ಆದರೆ, ಶ್ರೀನಿಧಿ ಮಾತ್ರ ಅವಕಾಶಗಳನ್ನು ಯೋಚಿಸಿ ಒಪ್ಪಿಕೊಳ್ಳುತ್ತಿದ್ದಾರೆ.
ಕೆಜಿಎಫ್ ಎಂಬ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶ್ರೀನಿಧಿ ಶೆಟ್ಟಿ ಅವರು ಇದೀಗ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
2/ 6
ಕರ್ನಾಟಕದ ಮಂಗಳೂರು ಮೂಲದ ಈ ಚೆಲುವೆ ತಮ್ಮ ಮೊದಲ ಚಿತ್ರವೇ ಬ್ಲಾಕ್ ಬಸ್ಟರ್ ಸಿನಿಮಾ ಆಗುವ ಮೂಲಕ ತಮ್ಮದು ಗೋಲ್ಡನ್ ಲೆಗ್ ಎನ್ನುವ ಸಂದೇಶವನ್ನು ಸಾರಿದ್ದರು. ಇದೀಗ ಕೆಜಿಎಫ್ 2 ಕೂಡ ಸೂಪರ್ ಡೂಪ್ ಹಿಟ್ ಆಗಿದೆ.
3/ 6
ವಿಶ್ವದ ಮೂಲೆ ಮೂಲೆಯಲ್ಲೂ ಕೆಜಿಎಫ್ 2(KGF 2) ಅಬ್ಬರ ಜೋರಾಗಿದೆ. ಬಾಕ್ಸ್ ಆಫೀಸ್(Box Office)ನಲ್ಲಿ ರಾಕಿ ಭಾಯ್ ಧೂಳೆಬ್ಬಿಸುತ್ತಿದ್ದಾರೆ. ಯಾರೂ ಊಹಿಸಿರದ ರೀತಿಯಲ್ಲಿ ಕಮಾಲ್ ಕೆಜಿಎಫ್ ಮಾಡುತ್ತಿದೆ.
4/ 6
ಈ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ಪಾತ್ರ ಕೂಡ ಅದ್ಭುತವಾಗಿ ಮೂಡಿಬಂದಿದೆ. ರೀನಾ ಪಾತ್ರದಲ್ಲಿ ಶ್ರೀನಿಧಿ ಶೆಟ್ಟಿ ಮಿಂಚಿದ್ದಾರೆ. ರಾಕಿ ಭಾಯ್ ಪತ್ನಿಯಾಗಿ ಗಮನ ಸೆಳೆದಿದ್ದಾರೆ. ಚಾಪ್ಟರ್ 3ನಲ್ಲೂ ರೀನಾ ಪಾತ್ರದ ದೃಶ್ಯಗಳು ಇರಲಿದೆ ಎಂದು ಹೇಳಲಾಗುತ್ತಿದೆ.
5/ 6
ಇದೀಗ ಕೆಜಿಎಫ್ 1 ಹಾಗೂ 2 ನ್ನು ಮುಗಿಸಿರುವ ಶ್ರೀನಿಧಿ ಶೆಟ್ಟಿ ತಮಿಳಿನಲ್ಲಿ ಸೂರ್ಯ ಜೊತೆ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಅನೇಕ ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ಆದರೆ, ಶ್ರೀನಿಧಿ ಮಾತ್ರ ಅವಕಾಶಗಳನ್ನು ಯೋಚಿಸಿ ಒಪ್ಪಿಕೊಳ್ಳುತ್ತಿದ್ದಾರೆ.
6/ 6
ಕೆಜಿಎಫ್' ನಂತರ ಶ್ರೀನಿಧಿ ಯಾವ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆಗೆ 'ಕೋಬ್ರಾ' ಅನ್ನೋ ಉತ್ತರ ಸಿಕ್ಕಿತ್ತು. 'ಚಿಯಾನ್' ವಿಕ್ರಮ್ ನಾಯಕರಾಗಿರುವ ಆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಶ್ರೀನಿಧಿಗೆ ಒಲಿದಿತ್ತು. 'ಕೆಜಿಎಫ್'ನಿಂದ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ ಅವರಿಗೆ 'ಕೋಬ್ರಾ' ಚಿತ್ರವು ಮತ್ತೊಂದು ದೊಡ್ಡ ಅವಕಾಶವೇ ಆಗಿದೆ.