The Kerala Story: ರೂಲಿಂಗ್ ಪಾರ್ಟಿಯಿಂದ ಸಪೋರ್ಟ್ ಇಲ್ಲ! ಪ್ರತಿಭಟನೆ ಭಯ, ಸಿನಿಮಾ ರಿಲೀಸ್​​ಗೆ ಹಿಂದೇಟು

The Kerala Story: ವಿವಾದ ಹುಟ್ಟಿಸಿರುವ ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್​ಗೆ ಕೇರಳದಲ್ಲಿ ಹಲವಾರು ಥಿಯೇಟರ್​ಗಳು ಹಿಂದೇಟು ಹಾಕುತ್ತಿದೆ. ರೂಲಿಂಗ್ ಪಾರ್ಟಿಯಿಂದ ಸಪೋರ್ಟ್ ಸಿಗದ ಹಿನ್ನೆಲೆಯಲ್ಲಿ ಪ್ರತಿಭಟನೆ ಭಯ ಹೆಚ್ಚಾಗಿದೆ.

First published:

  • 110

    The Kerala Story: ರೂಲಿಂಗ್ ಪಾರ್ಟಿಯಿಂದ ಸಪೋರ್ಟ್ ಇಲ್ಲ! ಪ್ರತಿಭಟನೆ ಭಯ, ಸಿನಿಮಾ ರಿಲೀಸ್​​ಗೆ ಹಿಂದೇಟು

    ಹಲವಾರು ಕೇರಳ ಥಿಯೇಟರ್​ಗಳು ದಿ ಕೇರಳ ಸ್ಟೋರಿ ಸಿನಿಮಾವನ್ನು ರಿಲೀಸ್ ಮಾಡಲು ಹಿಂದೇಟು ಹಾಕುತ್ತಿವೆ. ಸಿನಿಮಾ ವಿರುದ್ಧ ಪ್ರತಿಭಟನೆ ಭಯ ಇರುವುದರಿಂದ ಸಿನಿಮಾ ಪ್ರದರ್ಶನಕ್ಕೆ ಚಿತ್ರಮಂದಿರಗಳು ಮನಸು ಮಾಡುತ್ತಿಲ್ಲ.

    MORE
    GALLERIES

  • 210

    The Kerala Story: ರೂಲಿಂಗ್ ಪಾರ್ಟಿಯಿಂದ ಸಪೋರ್ಟ್ ಇಲ್ಲ! ಪ್ರತಿಭಟನೆ ಭಯ, ಸಿನಿಮಾ ರಿಲೀಸ್​​ಗೆ ಹಿಂದೇಟು

    ಮುಖ್ಯವಾಗಿ ರೂಲಿಂಗ್ ಪಾರ್ಟಿಯಿಂದ ಸಿನಿಮಾಗೆ ಬೆಂಬಲ ಸಿಗದೆ ಇರುವ ಕಾರಣ ಪ್ರಮುಖ ಚಿತ್ರಮಂದಿರಗಳು ಸಿನಿಮಾ ರಿಲೀಸ್ ಮಾಡುವ ಬಗ್ಗೆ ಯೋಚನೆ ಮಾಡುತ್ತಿವೆ. ಕೇವಲ ಒಂದೇ ಥಿಯೇಟರ್​ ಸಿನಿಮಾ ರಿಲೀಸ್​ ಖಚಿತಪಡಿಸಿದ್ದು ಉಳಿದ ಥಿಯೇಟರ್​ ಇನ್ನೂ ಯಾವುದೇ ಅಪ್ಡೇಟ್ ಕೊಟ್ಟಿಲ್ಲ.

    MORE
    GALLERIES

  • 310

    The Kerala Story: ರೂಲಿಂಗ್ ಪಾರ್ಟಿಯಿಂದ ಸಪೋರ್ಟ್ ಇಲ್ಲ! ಪ್ರತಿಭಟನೆ ಭಯ, ಸಿನಿಮಾ ರಿಲೀಸ್​​ಗೆ ಹಿಂದೇಟು

    ಹೆಚ್ಚಿನ ಥಿಯೇಟರ್ ಮಾಲೀಕರು ಸಿನಿಮಾ ರಿಲೀಸ್ ಮಾಡುವ ಬಗ್ಗೆ ಸ್ವಲ್ಪ ಭಯಹೊಂದಿದ್ದಾರೆ. ಪ್ರತಿಭಟನೆ ಭಯ ಇರುವುದು ಮಾತ್ರವಲ್ಲದೆ ರಾಜ್ಯ ಸರ್ಕಾರದಿಂದ ಬೆಂಬಲದ ಕೊರತೆ ಇದೆ ಎನ್ನುತ್ತಿದ್ದಾರೆ ಥಿಯೇಟರ್ ಓನರ್ಸ್.

    MORE
    GALLERIES

  • 410

    The Kerala Story: ರೂಲಿಂಗ್ ಪಾರ್ಟಿಯಿಂದ ಸಪೋರ್ಟ್ ಇಲ್ಲ! ಪ್ರತಿಭಟನೆ ಭಯ, ಸಿನಿಮಾ ರಿಲೀಸ್​​ಗೆ ಹಿಂದೇಟು

    ಆಡಳಿತ ಪಕ್ಷ ಸಿಪಿಎಂ ಕೂಡಾ ಸಿನಿಮಾ ಬಿಡುಗಡೆಯನ್ನು ವಿರೋಧಿಸುತ್ತಿದೆ. ಅಂತೂ ಕೇರಳದಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಡಲ್ ಆಗಿದೆ. ಆದರೆ ಉಳಿದ ರಾಜ್ಯಗಳಲ್ಲಿ ಸಿನಿಮಾ ಮಾಮೂಲಿಯಾಗಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

    MORE
    GALLERIES

  • 510

    The Kerala Story: ರೂಲಿಂಗ್ ಪಾರ್ಟಿಯಿಂದ ಸಪೋರ್ಟ್ ಇಲ್ಲ! ಪ್ರತಿಭಟನೆ ಭಯ, ಸಿನಿಮಾ ರಿಲೀಸ್​​ಗೆ ಹಿಂದೇಟು

    ಇದೇ ವೇಳೆ ಪೊಲೀಸರು ಕೂಡ ಸಾಕಷ್ಟು ಕಟ್ಟೆಚ್ಚರ ವಹಿಸಿದ್ದರು. ಕೇರಳ ಪೊಲೀಸ್ ಹಲವು ಥಿಯೇಟರ್​ ಮಾಲೀಕರ ಜೊತೆ ಸಂಪರ್ಕದಲ್ಲಿದ್ದು ಸಿನಿಮಾ ರಿಲೀಸ್ ಆಗಿ ಭದ್ರತೆ ಅಗತ್ಯತೆಯನ್ನು ನೋಡಿಕೊಳ್ಳುತ್ತಿದ್ದರು.

    MORE
    GALLERIES

  • 610

    The Kerala Story: ರೂಲಿಂಗ್ ಪಾರ್ಟಿಯಿಂದ ಸಪೋರ್ಟ್ ಇಲ್ಲ! ಪ್ರತಿಭಟನೆ ಭಯ, ಸಿನಿಮಾ ರಿಲೀಸ್​​ಗೆ ಹಿಂದೇಟು

    ಸತ್ಯಾಸತ್ಯತೆಯ ಕುರಿತು ದಿ ಕೇರಳ ಸ್ಟೋರಿ ಸಿಕ್ಕಾಪಟ್ಟೆ ವಿರೋಧ ಎದುರಿಸಿದ ನಂತರ ಟ್ರೈಲರ್​ನಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ದಿ ಕೇರಳ ಸ್ಟೋರಿ ಟ್ರೈಲರ್ ಬಿಡುಗಡೆಯಾಗ್ತಿದ್ದಂತೆ ಅದರಲ್ಲಿ ಎಲ್ಲವನ್ನೂ ಉತ್ಪ್ರೇಕ್ಷೆ ಮಾಡಲಾಗಿದೆ ಎಂದು ವಿರೋಧ ವ್ಯಕ್ತವಾಗಿತ್ತು.

    MORE
    GALLERIES

  • 710

    The Kerala Story: ರೂಲಿಂಗ್ ಪಾರ್ಟಿಯಿಂದ ಸಪೋರ್ಟ್ ಇಲ್ಲ! ಪ್ರತಿಭಟನೆ ಭಯ, ಸಿನಿಮಾ ರಿಲೀಸ್​​ಗೆ ಹಿಂದೇಟು

    32 ಸಾವಿರ ಯುವತಿಯರು ಇಸ್ಲಾಂಗೆ ಮತಾಂತರವಾಗಿಲ್ಲ. ಇದು ಸುಳ್ಳು ಎಂದು ಬಹಳಷ್ಟು ಜನರು ಸಿನಿಮಾದ ಟ್ರೈಲರ್ ನೋಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ 32 ಸಾವಿರ ಯುವತಿಯರ ನಿಜ ಕಥೆ ಎಂದು ಟ್ರೈಲರ್​ನಲ್ಲಿ ಹೇಳಲಾಗಿತ್ತು.

    MORE
    GALLERIES

  • 810

    The Kerala Story: ರೂಲಿಂಗ್ ಪಾರ್ಟಿಯಿಂದ ಸಪೋರ್ಟ್ ಇಲ್ಲ! ಪ್ರತಿಭಟನೆ ಭಯ, ಸಿನಿಮಾ ರಿಲೀಸ್​​ಗೆ ಹಿಂದೇಟು

    ನಿರ್ದೇಶಕ ಸುದಿಪ್ಟೋ ಸೆನ್ ಹಾಗೂ ಕ್ರಿಯೇಟಿವ್ ಡೈರೆಕ್ಟರ್, ನಿರ್ಮಾಪಕ ವಿಪುಲ್ ಅಮೃತ್​ಲಾಲ್ ಶಾ ಅವರು ಸಿನಿಮಾದಲ್ಲಿ ಸುಳ್ಳು ಸುಳ್ಳೇ ಮಾಹಿತಿ ಕೊಟ್ಟಿದ್ದಾರೆ ಎಂದು ಸಂಸದ ಶಶಿ ತರೂರ್ ಸೇರಿದಂತೆ ಬಹಳಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದ ಮೇಲೆ ಈ ಬದಲಾವಣೆ ಬಂದಿದೆ.

    MORE
    GALLERIES

  • 910

    The Kerala Story: ರೂಲಿಂಗ್ ಪಾರ್ಟಿಯಿಂದ ಸಪೋರ್ಟ್ ಇಲ್ಲ! ಪ್ರತಿಭಟನೆ ಭಯ, ಸಿನಿಮಾ ರಿಲೀಸ್​​ಗೆ ಹಿಂದೇಟು

    ಈಗ ಹೊಸ ಬದಲಾವಣೆ ಮಾಡಿದ ನಂತರ ತರೂರ್ ಟ್ವೀಟ್ ಮಾಡಿ ಕಥಾವಸ್ತು ಬೋಲ್ಡ್ ಆಗಿದೆ. ಚಲನಚಿತ್ರ ನಿರ್ಮಾಪಕರು ಯೂಟ್ಯೂಬ್‌ನಲ್ಲಿ ಚಿತ್ರದ ವಿವರಣೆಯನ್ನು ಅಪ್ಡೇಟ್ ಮಾಡಿದ್ದಾರೆ. '32,000 ಮಹಿಳೆಯರನ್ನು' '3 ಮಹಿಳೆಯರು' ಎಂದು ಬದಲಾಯಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    MORE
    GALLERIES

  • 1010

    The Kerala Story: ರೂಲಿಂಗ್ ಪಾರ್ಟಿಯಿಂದ ಸಪೋರ್ಟ್ ಇಲ್ಲ! ಪ್ರತಿಭಟನೆ ಭಯ, ಸಿನಿಮಾ ರಿಲೀಸ್​​ಗೆ ಹಿಂದೇಟು

    ಈ ಸಿನಿಮಾ ರಾಜಕೀಯದಲ್ಲಿಯೂ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್ ಈ ಸಿನಿಮಾ ತೋರಿಸಬಾರದು, ನಿಷೇಧ ಮಾಡಬೇಕೆಂದು ಒತ್ತಾಯಿಸಿದೆ. ಕೇರಳ ಕಾಂಗ್ರೆಸ್ ಮುಖಂಡ ಎಂಎಂ ಹಸ್ಸನ್ ಸಿನಿಮಾ ಬ್ಯಾನ್​​ಗೆ ಕರೆ ನೀಡಿದ್ದರು. ಇದು ಸಮುದಾಯಗಳ ಮಧ್ಯೆ ದ್ವೇಷ ಹುಟ್ಟಿಸಬಹುದು ಎಂದಿದ್ದರು.

    MORE
    GALLERIES