Keerthy Suresh : ರಾಮ್ ಪೋತಿನೇನಿ ಹೀರೋ ಆಗಿ ಕಿಶೋರ್ ತಿರುಮಲ ನಿರ್ದೇಶನದ 'ನೇನು ಶೈಲಜಾ' ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಕೀರ್ತಿ ಸುರೇಶ್. ತೆಲುಗಿನ ಮೊದಲ ಸಿನಿಮಾದಲ್ಲೇ ತಾನು ಎಂಥ ನಟಿ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಆ ನಂತರ ಮಹಾನಟಿ ಸಿನಿಮಾದಿಂದ ಕೀರ್ತಿ ಸುರೇಶ್ ರೇಂಜ್ ಬದಲಾಯಿತು.
ರಾಮ್ ಪೋತಿನೇನಿ ಹೀರೋ ಆಗಿ ಕಿಶೋರ್ ತಿರುಮಲ ನಿರ್ದೇಶನದ 'ನೇನು ಶೈಲಜಾ' ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಕೀರ್ತಿ ಸುರೇಶ್. ತೆಲುಗಿನ ಮೊದಲ ಸಿನಿಮಾದಲ್ಲೇ ತಾನು ಎಂಥ ನಟಿ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಆ ನಂತರ ಮಹಾನಟಿ ಸಿನಿಮಾದಿಂದ ಕೀರ್ತಿ ಸುರೇಶ್ ರೇಂಜ್ ಬದಲಾಯಿತು.
2/ 8
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಇತ್ತೀಚಿನ ಚಿತ್ರ ಸರ್ಕಾರ ವಾರಿ ಪಟ ಮೇ 12 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡಿತ್ತು. ಯುವ ನಿರ್ದೇಶಕ ಪರುಶುರಾಮ್ ಪೆಟ್ಲ ನಿರ್ದೇಶನ ಮಾಡಿದ್ದು, ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದಾರೆ. ತಮನ್ ಸಂಗೀತ ನೀಡಿದ್ದಾರೆ.
3/ 8
ಈ ಸಿನಿಮಾವನ್ನು ಮೈತ್ರೀ ಮೂವೀ ಮೇಕರ್ಸ್ ನಿರ್ಮಿಸಿದೆ. ಈ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ ಕೀರ್ತಿ ಸುರೇಶ್. ಇತ್ತೀಚೆಗಷ್ಟೇ ಆಕೆ ತನ್ನ ಕುಟುಂಬ ಸದಸ್ಯರೊಂದಿಗೆ ಕೇರಳಕ್ಕೆ ತೆರಳಿದ್ದರು.
4/ 8
ಭೋಲಾ ಶಂಕರ್ ಚಿತ್ರದಲ್ಲಿ ಕೀರ್ತಿ ಸುರೇಶ್ ಚಿರಂಜೀವಿ ಅವರ ತಂಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನ ವೇದಲಂ ಚಿತ್ರದ ತೆಲುಗು ರಿಮೇಕ್ ಆಗಿ ಈ ಚಿತ್ರ ಬರುತ್ತಿದೆ. ಮೆಹರ್ ರಮೇಶ್ ನಿರ್ದೇಶಕರು. ರಾಖಿ ಹಬ್ಬದಂದು ಚಿತ್ರತಂಡ ಫಸ್ಟ್ ಲುಕ್ ಜೊತೆಗೆ ಟೈಟಲ್ ರಿವೀಲ್ ಮಾಡಿದೆ.
5/ 8
ಹಿಂದಿಯ ಹಿಟ್ ಚಿತ್ರ ಮಿಮಿ ತೆಲುಗು ಮತ್ತು ತಮಿಳಿಗೆ ರಿಮೇಕ್ ಆಗಲಿದೆ. ಈ ಸಿನಿಮಾದಲ್ಲಿ ಕೀರ್ತಿ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹಿಂದಿ ಮಿಮಿಯಲ್ಲಿ ಕೃತಿ ಸನೋನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕಥೆ ಇಷ್ಟಪಟ್ಟ ಕೀರ್ತಿ ಸುರೇಶ್ ಸಿನಿಮಾದ ರಿಮೇಕ್ ಗೆ ಓಕೆ ಅಂದಿದ್ದಾರೆ.
6/ 8
ಇನ್ನು ಈ ಸಿನಿಮಾದ ಕಥೆಯ ವಿಚಾರಕ್ಕೆ ಬಂದರೆ.. ಮಕ್ಕಳಾಗದ ವಿದೇಶಿ ದಂಪತಿಗೆ ಬಾಡಿಗೆ ತಾಯ್ತನ ಎಂಬ ವಿಧಾನದ ಮೂಲಕ ಮಗುವಿಗೆ ಜನ್ಮ ನೀಡುವ ಪರಿಕಲ್ಪನೆ.. ಮದುವೆಯಾಗದೇ ಗರ್ಭಿಣಿಯಾದ ಅವಿವಾಹಿತ ಯುವತಿಯ ಕಥೆಯೆ ಮಿಮಿ ಸಿನಿಮಾ.
7/ 8
ಇನ್ನೂ ಕೀರ್ತಿ ಸುರೇಶ್ ನಟಿಸಿದ ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗಿವೆ. ಹೀಗಾಗಿ ಕೀರ್ತಿ ಸುರೇಶ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ನೀನು ಪೂಜಾ ಹೆಗ್ಡೆ ತಂಗಿ ಎಂದು ಕಾಲೆಳೆದಿದ್ದಾರೆ.
8/ 8
ಪೂಜಾ ಹೆಗ್ಡೆ ನಟಿಸಿ ರಾಧೆ-ಶ್ಯಾಮ್, ಬೀಸ್ಟ್, ಆಚಾರ್ಯ ಮೂರು ಸಿನಿಮಾಗಳು ಮಕಾಡೆ ಮಲಗಿತ್ತು. ಅವರ ಹಾದಿಯಲ್ಲೇ ಕೀರ್ತಿ ಸುರೇಶ್ ಹೋಗುತ್ತಿದ್ದಾರೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.