ಸಾಲು ಸಾಲು ಚಿತ್ರಗಳಿಂದ ಮನಸೆಳೆಯುತ್ತಿರುವ ಕೀರ್ತಿ ಸುರೇಶ್ಗೆ ಈಗ ಖ್ಯಾತ ನಟರ ಸಿನಿಮಾಗಳಲ್ಲೂ ಅವಕಾಶ ಸಿಕ್ಕಿದೆಯಂತೆ. ಯಂಗ್ ಟೈಗರ್ ಎನ್ ಟಿಆರ್ ನಾಯಕನಾಗಿ ಅದ್ಧೂರಿ ಪ್ರಾಜೆಕ್ಟ್ ಬರುತ್ತಿದ್ದು ಕೊರಟಾಲ ಶಿವ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬರುತ್ತಿದೆ. ಪ್ರಸ್ತುತ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಆರ್ಆರ್ಆರ್ನಂತಹ ಬ್ಲಾಕ್ಬಸ್ಟರ್ ಚಿತ್ರದ ನಂತರ ಈ ಸಿನಿಮಾ ಬಗ್ಗೆ ಹೈ ರೇಂಜ್ನಲ್ಲಿ ನಿರೀಕ್ಷೆಗಳಿವೆ.