Rishi Marriage Photos: ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಆಪರೇಷನ್ ಅಲಮೇಲಮ್ಮ' ನಟ ರಿಷಿ; ಹೇಗಿತ್ತು ಗೊತ್ತಾ ಮದುವೆ ಸಂಭ್ರಮ?
Actor Rishi Marriage: ಸ್ಯಾಂಡಲ್ವುಡ್ನಲ್ಲಿ 'ಆಪರೇಷನ್ ಅಲಮೇಲಮ್ಮ', 'ಕವಲುದಾರಿ' ಸಿನಿಮಾ ಮೂಲಕ ಕನ್ನಡ ಸಿನಿಪ್ರಿಯರಿಗೆ ಮೋಡಿ ಮಾಡಿದ್ದ ನಟ ರಿಷಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಚೆನ್ನೈನಲ್ಲಿ ತಮ್ಮ ಗೆಳತಿ ಸ್ವಾತಿ ಜೊತೆ ರಿಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ತಿಂಗಳ 20ರಂದು ಬೆಂಗಳೂರಿನಲ್ಲಿ ಚಿತ್ರರಂಗದ ಆಪ್ತರು ಮತ್ತು ಕುಟುಂಬಸ್ಥರಿಗಾಗಿ ಆರತಕ್ಷತೆಯನ್ನು ಆಯೋಜಿಸಲಾಗಿದೆ. ರಿಷಿ ಮೆಹಂದಿ ಮತ್ತು ಹಳದಿ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ...
ಸ್ಯಾಂಡಲ್ವುಡ್ ನಟ ರಿಷಿ ಇಂದು ತಮ್ಮ ಗೆಳತಿ ಸ್ವಾತಿ ಜೊತೆ ಚೆನ್ನೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ
2/ 21
ಕಿರುತೆರೆಯಲ್ಲಿ ನಟನೆಯನ್ನು ಆರಂಭಿಸಿ ಬೆಳ್ಳಿತೆರೆಗೆ ಕಾಲಿಟ್ಟ ನಟ ರಿಷಿ ನಾಯಕನಾಗಿ ನಟಿಸಿದ ಮೊದಲ ಸಿನಿಮಾದಲ್ಲೇ ಸಿನಿಪ್ರೇಮಿಗಳ ಗಮನ ಸೆಳೆದವರು.
3/ 21
'ಮನಿ ಹನಿ ಶನಿ' ಎಂಬ ಬಹುತಾರಾಗಣದ ಸಿನಿಮಾದಲ್ಲಿ ಮೊದಲು ನಟಿಸಿದ್ದರೂ ಪೂರ್ಣ ಪ್ರಮಾಣದ ನಾಯಕನಾಗಿ ಗುರುತಿಸಿಕೊಂಡಿದ್ದು 'ಸಿಂಪಲ್ ಆಗೊಂದ್ ಲವ್ಸ್ಟೋರಿ' ಖ್ಯಾತಿಯ ನಿರ್ದೇಶನ ಸುನಿ ಅವರ 'ಆಪರೇಷನ್ ಅಲಮೇಲಮ್ಮ' ಸಿನಿಮಾದಲ್ಲೇ.
4/ 21
ರಿಷಿ ಇಂದು ಚೆನ್ನೈ ಮೂಲದ ಬರಹಗಾರ್ತಿ ಸ್ವಾತಿ ಜೊತೆಗೆ ಸಪ್ತಪದಿ ತುಳಿದಿದ್ದಾರೆ
5/ 21
ನಾಯಕನಾಗಿ ನಟಿಸಿದ ಎರಡೂ ಸಿನಿಮಾಗಳು ಹಿಟ್ ಆದ ಹಿನ್ನೆಲೆಯಲ್ಲಿ ರಿಷಿ ಕೈಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಜಾಕೋಬ್ ವರ್ಗೀಸ್ ನಿರ್ದೇಶನದ 'ಸಕಲಕಲಾವಲ್ಲಭ' ಸಿನಿಮಾ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಯ ಸಿದ್ಧತೆಗಳು ನಡೆದಿವೆ.
6/ 21
ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಸ್ವಾತಿ ಎಂಬ ಬರಹಗಾರ್ತಿ ಜೊತೆಗೆ ಹೈದರಾಬಾದ್ನಲ್ಲಿ ರಿಷಿ ನಿಶ್ಚಿತಾರ್ಥ ನೆರವೇರಿತ್ತು. ಕೇವಲ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಈ ಸಮಾರಂಭ ನಡೆದಿತ್ತು.
7/ 21
ಶುಕ್ರವಾರ ಹಳದಿ ಶಾಸ್ತ್ರ ಮತ್ತು ಸಂಗೀತ್ ಕಾರ್ಯಕ್ರಮ ನೆರವೇರಿದ್ದು, ಶನಿವಾರ ನಿಶ್ಚಿತಾರ್ಥ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳು ನೆರವೇರಿತ್ತು.
8/ 21
ಹಳದಿ ಸಂಭ್ರಮದಲ್ಲಿ ರಿಷಿ
9/ 21
ಮೂಲತಃ ಮೈಸೂರಿನವರಾದ ಇಂಜಿನಿಯರಿಂಗ್ ಪದವೀಧರ ರಿಷಿ ಮದುವೆಯಾಗುತ್ತಿರುವ ಸ್ವಾತಿ ಪರಶುರಾಮನ್ ಕೂಡ ಇಂಜಿನಿಯರಿಂಗ್ ಮಾಡಿದ್ದಾರೆ. ಆದರೆ, ಬರವಣಿಗೆಯತ್ತ ಆಸಕ್ತಿ ಇದ್ದಿದ್ದರಿಂದ ಅದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
10/ 21
ನ. 20ರಂದು ಚಿತ್ರಂಗದ ಗಣ್ಯರು, ಆಪ್ತರು, ಕುಟುಂಬದವರಿಗಾಗಿ ಬೆಂಗಳೂರಿನಲ್ಲಿ ರಿಷಿ ಆರತಕ್ಷತೆಯನ್ನು ಆಯೋಜಿಸಿದ್ದಾರೆ.
11/ 21
ರಿಷಿ ನಟಿಸುತ್ತಿರುವ 'ಸಾರ್ವಜನಿಕರಿಗೆ ಸುವರ್ಣಾವಕಾಶ' ಸಿನಿಮಾದ ಟೀಸರ್ ಮತ್ತು ಹಾಡು ಇತ್ತೀಚೆಗಷ್ಟೆ ಬಿಡುಗಡೆಯಾಗಿ ಮೆಚ್ಚುಗೆಯನ್ನೂ ಗಳಿಸಿದೆ. ಇದಾದ ನಂತರ 'ರಾಮನ ಅವತಾರ' ಎಂಬ ಸಿನಿಮಾಗೂ ರಿಷಿ ಸಹಿ ಹಾಕಿದ್ದಾರೆ.
12/ 21
ಚೆನ್ನೈನಲ್ಲಿ ನಡೆದಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ಸ್ವಾತಿ ಜೊತೆ ರಿಷಿ
13/ 21
ಪ್ರೀತಿಯ ಸಖಿ ಸ್ವಾತಿ ಜೊತೆ ರಿಷಿ ಮದುವೆ ಸಂಭ್ರಮ
14/ 21
ಚೆನ್ನೈನಲ್ಲಿ ನಡೆದಿದ್ದ ಸಂಗೀತ್ ಕಾರ್ಯಕ್ರಮದಲ್ಲಿ ಸ್ವಾತಿ ಜೊತೆ ರಿಷಿ
15/ 21
ಚೆನ್ನೈನಲ್ಲಿ ನಡೆದಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ಸ್ವಾತಿ ಜೊತೆ ರಿಷಿ