'ಕವಲುದಾರಿ' ನಾಯಕನ ಬದುಕಲ್ಲಿ ಹೊಸ ತಿರುವು; ನಟ ರಿಷಿ ಮದುವೆಯಾಗುವ ಹುಡುಗಿ ಯಾರು ಗೊತ್ತಾ?

Actor Rishi Marriage: ಈ ತಿಂಗಳು ಸ್ಯಾಂಡಲ್​ವುಡ್​ನ ಇಬ್ಬರು ನಟರಿಗೆ ವಿವಾಹಯೋಗ ಕೂಡಿಬಂದಿದೆ. ನಟ ಧ್ರುವ ಸರ್ಜಾ ಇದೇ ತಿಂಗಳು 23ರಂದು ತಮ್ಮ ಗೆಳತಿ ಪ್ರೇರಣಾ ಜೊತೆ ಹಸೆಮಣೆ ಏರಲಿದ್ದಾರೆ. ಅದಕ್ಕೂ ಮೊದಲೇ 'ಆಪರೇಷನ್ ಅಲಮೇಲಮ್ಮ', 'ಕವಲುದಾರಿ' ಸಿನಿಮಾ ಮೂಲಕ ಕನ್ನಡ ಸಿನಿಪ್ರಿಯರಿಗೆ ಮೋಡಿ ಮಾಡಿದ್ದ ನಟ ರಿಷಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಶುಕ್ರವಾರ ಹಳದಿ ಶಾಸ್ತ್ರ ಮತ್ತು ಸಂಗೀತ್ ಕಾರ್ಯಕ್ರಮ ನೆರವೇರಿದ್ದು, ಇಂದು ನಿಶ್ಚಿತಾರ್ಥ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳು ಇರಲಿವೆ. ನಾಳೆ ಬೆಳಗ್ಗೆ 7.30ಕ್ಕೆ ಚೆನ್ನೈನಲ್ಲಿ ತಮ್ಮ ಗೆಳತಿ ಸ್ವಾತಿ ಜೊತೆ ರಿಷಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದೇ ತಿಂಗಳ 20ರಂದು ಬೆಂಗಳೂರಿನಲ್ಲಿ ಚಿತ್ರರಂಗದ ಆಪ್ತರು ಮತ್ತು ಕುಟುಂಬಸ್ಥರಿಗಾಗಿ ಆರತಕ್ಷತೆಯನ್ನು ಆಯೋಜಿಸಲಾಗಿದೆ.

First published: