ಪತಿ ವಿಕ್ಕಿ ಕೌಶಲ್ ಜೊತೆ ಬಾಲಿವುಡ್ ನಟಿ ಕತ್ರೀನಾ ಕೈಫ್ ಮುಂಬೈನ ಸಿದ್ದಿ ವಿನಾಯಕನ ದರ್ಶನ ಪಡೆದಿದ್ದಾರೆ. ದೇವಸ್ಥಾನದಲ್ಲಿರುವ ದಂಪತಿ ಫೋಟೋಗಳು ಇದೀಗ ವೈರಲ್ ಆಗಿದೆ.
2/ 8
ಕತ್ರೀನಾ ಕೈಫ್ ಅವರು ಅತ್ತೆ ವೀಣಾ ಕೌಶಲ್ ಮತ್ತು ಪತಿ ವಿಕ್ಕಿ ಕೌಶಲ್ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ದೇಗುಲಕ್ಕೆ ಬಂದ ಕತ್ರೀನಾ ಕೈಫ್ ತನ್ನ ಹಣೆಗೆ ಬಿಂದಿ ಇಟ್ಟಿಲ್ಲ ಎಂದು ಫ್ಯಾನ್ಸ್ ಕೇಳ್ತಿದ್ದಾರೆ.
3/ 8
ಮತ್ತೆ ಕೆಲವರು ಅಭಿಮಾನಿಗಳು ಕತ್ರೀನಾ ಕೈಫ್ ಮುಖದ ಕಳೆ ನೋಡಿದ್ರೆ ಗರ್ಭಿಣಿ ಅನಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.
4/ 8
ಕತ್ರೀನಾ ಕೈಫ್ ಭಾರತೀಯ ಮಹಿಳೆಯಂತೆ ತಲೆಯ ಮೇಲೆ ದುಪ್ಪಟ್ಟ ಧರಿಸಿ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಆಗಮಿಸಿದಾಗ ಅಭಿಮಾನಿಗಳು ನಟಿ ಸರಳತೆಗೆ ಮನಸೋತಿದ್ದಾರೆ. ಈ ವೇಳೆ ಕತ್ರೀನಾ ಕೈಫ್ ಸಿಂಪಲ್ ಆಗಿರುವ ಗ್ರೀನ್ ಸಲ್ವಾರ್ ಸೂಟ್ ಧರಿಸಿದ್ದರು. ವಿಕ್ಕಿ ಕೌಶಲ್ ಬಿಳಿ ಶರ್ಟ್ ನಲ್ಲಿ ಕಾಣಿಸಿಕೊಂಡ್ರು.
5/ 8
ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತದೆ. ಫೋಟೋಗಳಿಗೆ ಕಾಮೆಂಟ್ ಮಾಡಿದ ಅಭಿಮಾನಿಗಳು ಅಣೆಗೆ ಬಿಂದಿ ಇಟ್ಟಿದ್ರೆ ಇನ್ನು ಚೆನ್ನಾಗಿ ಕಾಣ್ತಿದ್ರಿ ಎಂದು ಕಮೆಂಟ್ ಮಾಡಿದ್ದಾರೆ.
6/ 8
ಕತ್ರಿನಾ ಅತ್ತೆ ವೀಣಾ ಕೌಶಲ್ ಮತ್ತು ಪತಿ ವಿಕ್ಕಿ ಸಹ ದೇವರ ದರ್ಶನ ಪಡೆದ್ರು. ಅವರ ಸರಳತೆಯನ್ನು ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
7/ 8
ಭಾರತೀಯ ಸಂಪ್ರದಾಯದಂತೆ ಕತ್ರಿನಾ ಮತ್ತು ವಿಕ್ಕಿ 9 ಡಿಸೆಂಬರ್ 2021 ರಂದು ರಾಜಸ್ಥಾನದ ಸವಾಯಿ ಮಾಧೋಪುರದ ಬರ್ವಾಡ ಕೋಟೆಯಲ್ಲಿ ವಿವಾಹವಾದ್ರು.
8/ 8
ಸ್ಟಾರ್ ಸ್ಕ್ರೀನ್ ಅವಾರ್ಡ್ ಕಾರ್ಯಕ್ರಮದ ವೇಳೆ ವಿಕ್ಕಿ ಕೌಶಲ್ , ಕತ್ರೀನಾ ಕೈಫ್ಗೆ ಎಲ್ಲರ ಮುಂದೆ ಪ್ರಪೋಸ್ ಮಾಡಿದ್ದರು. ಕತ್ರೀನಾ ಅವರ ದೊಡ್ಡ ಅಭಿಮಾನಿ ಎಂದು ನಟ ಹೇಳಿದ್ದರು ಕತ್ರೀನಾಳನ್ನು ಮದುವೆ ಆಗುವಂತೆ ನೇರವಾಗಿ ಕೇಳಿದ್ದರು.