Katrina Kaif-Vicky Kaushal ಅರಿಶಿನ ಶಾಸ್ತ್ರದ ಫೋಟೋಗಳು ಸಿಕ್ಕಾಪಟ್ಟೆ ವೈರಲ್!
ವಿವಾಹ ಸಮಾರಂಭದ ಕೆಲವು ಫೋಟೋಗಳನ್ನು ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಇವರ ಹಳದಿ ಕಾರ್ಯಕ್ರಮದ ಫೋಟೋಗಳು ಇದೀಗ ವೈರಲ್ ಆಗುತ್ತಿವೆ.
ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ( Katrina Kaif and Vicky Kaushal) ಅಭಿಮಾನಿಗಳು ಅತ್ಯಂತ ಕೂತೂಹಲದಿಂದ ಕಾಯುತ್ತಿದ್ದ ಸಂಗತಿಗೆ ಕೊನೆಗೂ ತೆರೆ ಬಿದ್ದಿದೆ. ಬಾಲಿವುಡ್ನ ಈ ಜನಪ್ರಿಯ ತಾರೆಯರಿಬ್ಬರು ಗುರುವಾರ, ಡಿಸೆಂಬರ್ 9 ರಂದು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ
2/ 7
ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ನಲ್ಲಿ ಗುರುವಾರ (ಡಿ.9) ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಸಪ್ತಪದಿ ತುಳಿದರು. ಅದ್ದೂರಿಯಾಗಿ ಈ ಮದುವೆ ನಡೆಯಿತು.
3/ 7
ವಿವಾಹ ಸಮಾರಂಭದ ಕೆಲವು ಫೋಟೋಗಳನ್ನು ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಇವರ ಹಳದಿ ಕಾರ್ಯಕ್ರಮದ ಫೋಟೋಗಳು ಇದೀಗ ವೈರಲ್ ಆಗುತ್ತಿವೆ.
4/ 7
ಅದ್ದೂರಿಯಾಗಿ ಅರಿಶಿಣ ಶಾಸ್ತ್ರ ನಡೆದಿತ್ತು. ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಇದರಲ್ಲಿ ಭಾಗಿ ಆಗಿದ್ದರು. ಡಿ.7ರಿಂದಲೇ ವಿವಾಹಪೂರ್ವ ಶಾಸ್ತ್ರಗಳು ಆರಂಭ ಆಗಿದ್ದವು.
5/ 7
ತ್ರಿನಾ ಕೈಫ್ ಅಭಿಮಾನಿಗಳಿಗಂತೂ, ಆಕೆ ಧರಿಸಿದ್ದ ಡೈಮಂಡ್ ಮತ್ತು ಬ್ಲೂ ಸಫೈರ್ ಉಳ್ಳ ನಿಶ್ಚಿತಾರ್ಥದ ಉಂಗುರ ಸಿಕ್ಕಾಪಟ್ಟೆ ಮೆಚ್ಚುಗೆಯಾಗಿದೆಯಂತೆ. ಆ ಉಂಗುರ ನಿಜಕ್ಕೂ ಕಣ್ಮನ ಸೆಳೆಯುವಂತಿದೆ! ವರದಿಗಳ ಪ್ರಕಾರ, ಕತ್ರೀನಾ ಕೈಫ್, ಟಿಫ್ಯಾನಿ ಸೋಲೆಸ್ಟ್ನ ಪ್ಲಾಟಿನಂ ನಿಶ್ಚಿತಾರ್ಥದ ಉಂಗುವನ್ನು ಧರಿಸಿದ್ದರು. ಮತ್ತು ಅದರ ಬೆಲೆ 7.4 ಲಕ್ಷ ರೂ.
6/ 7
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯನ್ನು ಗುಟ್ಟಾಗಿ ಮಾಡಲಾಗಿದೆ. ಮದುವೆಯ ದೃಶ್ಯಗಳನ್ನು ಪ್ರಸಾರ ಮಾಡಲು ಓಟಿಟಿ ಸಂಸ್ಥೆಯೊಂದು 100 ಕೋಟಿ ರೂ. ಹಣ ನೀಡಿದೆ ಎನ್ನಲಾಗಿದೆ.
7/ 7
ಮದುವೆ ಬಳಿಕ ಬಾಲಿವುಡ್ ಸೆಲೆಬ್ರಿಟಿಗಳು ಕತ್ರಿನಾ ಮತ್ತು ವಿಕ್ಕಿಗೆ ಶುಭಾಶಯ ಕೋರುತ್ತಿದ್ದಾರೆ. ದೀಪಿಕಾ ಪಡುಕೋಣೆ, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್, ಪರಿಣೀತಿ ಚೋಪ್ರಾ, ಜಾನ್ವಿ ಕಪೂರ್ ಸೇರಿದಂತೆ ಅನೇಕರು ಅಭಿನಂದನೆ ತಿಳಿಸಿದ್ದಾರೆ.