Katrina kaif-Vicky Kaushal: ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ಕತ್ರಿನಾ-ವಿಕ್ಕಿ? ಮತ್ತೊಂದು ಬಾಲಿವುಡ್ ಜೋಡಿ ಮದುವೆ?
katrina kaif and vicky kaushal engagement: ಬಾಲಿವುಡ್ ನ ಬಳುಕುವ ಬಳ್ಳಿ ಕತ್ರಿನಾ ಕೈಫ್ ಹಾಗೂ ಟ್ಯಾಲೆಂಟೆಡ್ ಆ್ಯಕ್ಟರ್ ವಿಕ್ಕಿ ಕೌಶಲ್ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಲೇ ಇತ್ತು. ಇದೀಗ ಪ್ರೇಮದ ಹಕ್ಕಿಗಳ ಬಗ್ಗೆ ಕುತೂಹಲಕಾರಿ ಸುದ್ದಿ ಹೊರ ಬಿದ್ದಿದೆ. ಕ್ಯಾಟ್-ವಿಕ್ಕಿ ಗುಟ್ಟಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎನ್ನುತ್ತಿದೆ ಬಲ್ಲ ಮೂಲಗಳು. ಗುಟ್ಟಾಗಿ ಇಬ್ಬರು ರೋಕಾ(ನಿಶಿತಾರ್ಥ) ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಪ್ರಣಯದ ಹಕ್ಕಿಗಳು ತಮ್ಮ ಸಂಬಂಧದ ಬಗ್ಗೆ ಸಿರಿಯಸ್ ಆಗಿದ್ದಾರೆ, ಮದುವೆಯಾಗಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆ ಆಪ್ತರ ಸಮ್ಮುಖದಲ್ಲಿ ಎಂಗೇಜ್ ಆಗಿದ್ದಾರೆ ಎನ್ನಲಾಗುತ್ತಿದೆ.
2/ 11
ಕಳೆದ 2-3 ವರ್ಷಗಳಿಂದ ಕ್ಯಾಟ್-ವಿಕ್ಕಿ ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಎಂದೂ ತಮ್ಮ ಲವ್ಲೈಫ್ ಬಗ್ಗೆ ಇಬ್ಬರು ತುಟಿ ಬಿಚ್ಚಿಲ್ಲ.
3/ 11
ಕಾಫಿ ವಿತ್ ಕರಣ್ ಶೋನಲ್ಲಿ ಇಬ್ಬರು ನೀಡಿದ ಹೇಳಿಕೆಗಳು ಅವರನ್ನು ಹತ್ತಿರಕ್ಕೆ ತಂದಿದ್ದವು. ಗಾಸಿಪ್ಗೆ ಆಹಾರವೂ ಆಗಿದ್ದರು.
4/ 11
ನಾನು ವಿಕ್ಕಿ ಕೌಶಲ್ಗೆ ಜೋಡಿಯಾದರೆ ಚನ್ನಾಗಿರುತ್ತೆ ಎಂದು ಕೈಫ್ ಶೋನಲ್ಲಿ ಹೇಳಿಕೊಂಡಿದ್ದರು. ಇದಕ್ಕೆ ವಿಕ್ಕಿ ನಾಟಕೀಯವಾಗಿ ತಲೆ ಸುತ್ತಿ ಬಿದ್ದಂತೆ ನಟಿಸಿ ಖುಷಿ ವ್ಯಕ್ತಪಡಿಸಿದ್ದರು.
5/ 11
ನಂತರ ಟಾಕ್ ಶೋವೊಂದರಲ್ಲಿ ಇಬ್ಬರು ಒಬ್ಬರನ್ನೊಬ್ಬರು ಸಂದರ್ಶನ ಮಾಡಿದ್ದು, ಗಾಸಿಪ್ ಹೆಚ್ಚಾಗಲು ಕಾರಣವಾಗಿತ್ತು.
6/ 11
ಕತ್ರಿನಾ ಇನ್ ಸ್ಟಾಗ್ರಾಮ್ ನಲ್ಲಿ ಫೋಸ್ಟ್ ಮಾಡಿದ್ದ ಫೋಟೋವೊಂದು ಚರ್ಚೆಗೆ ಗ್ರಾಸವಾಗಿತ್ತು. ಕ್ಯಾಟ್ ಧರಿಸಿದ್ದ ಹಳಸಿ ಸ್ವೆಟ್ಟರ್ ವಿಕ್ಕಿದು ಎಂದು ನೆಟ್ಟಿಗರು ಕಮೆಂಟಿಸಿದ್ದರು. ವಿಕ್ಕಿ ಅದೇ ಸ್ವೆಟ್ಟರ್ ನ ಧರಿಸಿರುವ ಫೋಟೋ ಅಪ್ ಲೋಡ್ ಮಾಡಿ ಕಾಲೆಳೆದಿದ್ದರು.
7/ 11
ಸಲ್ಮಾನ್ ಖಾನ್, ರಣಬೀರ್ ಕಪೂರ್ ಜೊತೆ ಪ್ರೇಮ ಮುರಿದು ಬಿದ್ದ ಬಳಿಕ ಕತ್ರಿನಾ ವಿಕ್ಕಿ ವಿಷಯದಲ್ಲಿ ಸಿರಿಯಸ್ ಆಗಿದ್ದಾರೆ. ಅವರನ್ನೇ ವರಿಸುತ್ತಾರೆ ಎನ್ನಲಾಗುತ್ತಿದೆ.
8/ 11
ಇನ್ನು ವಿಕ್ಕಿ ಕೌಶಲ್ ಹಲವು ವರ್ಷಗಳ ಸ್ಟ್ರಗಲ್ ಬಳಿಕ ಬಾಲಿವುಡ್ ನಲ್ಲಿ ಈಗ ಒಳ್ಳೆಯ ಪಾತ್ರಗಳು, ಸಿನಿಮಾಗಳ ಮೂಲಕ ಮಿಂಚುತ್ತಿದ್ದಾರೆ.
9/ 11
ಕತ್ರಿನಾ-ವಿಕ್ಕಿ ಹೆಸರನ್ನು ಸೇರಿಸಿ ಅಭಿಮಾನಿಗಳು ಈಗಾಗಲೇ #Vickat ಎಂದು ಹ್ಯಾಷ್ಟ್ಯಾಗ್ ಕ್ರಿಯೇಟ್ ಮಾಡಿದ್ದಾರೆ.
10/ 11
ಇನ್ನು ಕತ್ರಿನಾಗಿಂತ ವಿಕ್ಕಿ 5 ವರ್ಷ ಚಿಕ್ಕವರು. ಆದರೆ ಇವರ ಪ್ರೀತಿಗೆ ವಯಸ್ಸು ಅಡ್ಡಿ ಬಂದಿಲ್ಲ. ಅದಕ್ಕಾಗಿಯೇ ಇಬ್ಬರು ಎಂಗೇಜ್ ಆಗಿದ್ದಾರೆ ಅಂದಿದ್ದಾರೆ ಅವರ ಅಭಿಮಾನಿಗಳು.
11/ 11
ಇಬ್ಬರಲ್ಲಿ ಒಬ್ಬರು ಎಂಗೇಜ್ ಮೆಂಟ್ ಬಗ್ಗೆ ಅಧಿಕೃತ ಹೇಳಿಕೆ ನೀಡಬೇಕು ಇಲ್ಲವೇ ನಿಶ್ಚಿತಾರ್ಥದ ಸುದ್ದಿಗೆ ಫುಲ್ ಸ್ಟಾಪ್ ಇಡಬೇಕು