Celebrity Couple: ವಯಸ್ಸಿನಲ್ಲಿ ತಮಗಿಂತ ಚಿಕ್ಕವರನ್ನು ಮದುವೆಯಾದ ಸ್ಟಾರ್ ನಟಿಯರು!
ಬಾಲಿವುಡ್ ಸೆಲೆಬ್ರಿಟಿ ಕಪಲ್ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕಳೆದ ವರ್ಷ ವಿವಾಹವಾದ್ರು. ಇವರಿಬ್ಬರ ನಡುವೆ 5 ವರ್ಷಗಳ ವಯಸ್ಸಿನ ಅಂತರವಿದೆ. ಜೊತೆಗೆ ಪ್ರಿಯಾಂಕಾ ಚೋಪ್ರಾ ಜೋನಾಸ್, ಐಶ್ವರ್ಯ ರೈ ಬಚ್ಚನ್ ಕೂಡ ಕಿರಿಯ ವಯಸ್ಸಿನವರನ್ನೇ ಮದುವೆಯಾಗಿದ್ದಾರೆ.
ಕತ್ರಿನಾ ಕೈಫ್ ಅವರಿಗೆ 38 ವರ್ಷ ಮತ್ತು ಅವರ ಪತ್ನಿ ವಿಕ್ಕಿ ಕೌಶಲ್ಗೆ 33 ವರ್ಷ ವಯಸ್ಸಾಗಿದೆ. ಇಬ್ಬರೂ ಕಳೆದ ವರ್ಷ ಡಿಸೆಂಬರ್ 9 ರಂದು ಅದ್ಧೂರಿಯಾಗಿ ವಿವಾಹವಾದ್ರು.
2/ 8
ನಮ್ರತಾ ಮಹೇಶ್ ಬಾಬುಗಿಂತ ಎರಡೂವರೆ ವರ್ಷ ದೊಡ್ಡವರು. ವಂಶಿ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ದಿವಂಗತ ಸೂಪರ್ ಸ್ಟಾರ್ ಕೃಷ್ಣ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ವೇಳೆ ಇಬ್ಬರ ನಡುವೆ ಪ್ರೀತಿ ಬೆಳೆಯಿತು ಬಳಿಕ ಇಬ್ಬರು ಮದುವೆಯಾದ್ರು.
3/ 8
ಪ್ರಿಯಾಂಕಾ ಚೋಪ್ರಾ ತನಗಿಂತ 11 ವರ್ಷ ಚಿಕ್ಕವನಾದ ನಿಕ್ ಜೋನಾಸ್ ಅವರನ್ನು ಪ್ರೀತಿಗಾಗಿ ವಿವಾಹವಾಗಿದ್ದಾರೆ.
4/ 8
ಐಶ್ವರ್ಯಾ ರೈ ಕೂಡ ತಮಗಿಂತ ಸಣ್ಣ ವಯಸ್ಸಿನ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದ್ರು. ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಗಿಂತ 2 ವರ್ಷ ದೊಡ್ಡವರು.
5/ 8
ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದ ಅಂಗದ್ ಬೇಡಿ ಮತ್ತು ನೇಹಾ ಧೂಪಿಯಾ ವಿವಾಹವಾಗಿದ್ದು, ಅಂಗದ್ ಬೇಡಿ ನೇಹಾ ಧೂಪಿಯಾ ಅವರಿಗಿಂತ ಎರಡು ವರ್ಷ ಚಿಕ್ಕವರು
6/ 8
ಬಿಪಾಶಾ ಬಸು ತನಗಿಂತ ಮೂರು ವರ್ಷ ಚಿಕ್ಕವರಾಗಿದ್ದ ಕರಣ್ ಸಿಂಗ್ ಗ್ರೋವರ್ ಅವರನ್ನು ವಿವಾಹವಾದರು
7/ 8
ಶಿಲ್ಪಾ ಶೆಟ್ಟಿ ಕೂಡ ತನಗಿಂತ ಚಿಕ್ಕವನಾಗಿದ್ದ ರಾಜ್ ಕುಂದ್ರಾ ಅವರನ್ನು ಮದುವೆಯಾಗಿದ್ದಾರೆ.
8/ 8
ಮಲೈಕಾ ಅರೋರಾ ,ಅರ್ಜುನ್ ಕಪೂರ್ ಕೂಡ ಅರ್ಜುನ್ ಕಪೂರ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಮಲೈಕಾ ಅರೋರಾ, ಅರ್ಜುನ್ ಕಪೂರ್ ಗಿಂತ 15 ವರ್ಷ ಹಿರಿಯರಾಗಿದ್ದಾರೆ.