ನಟಿ ಕತ್ರಿನಾ ಕೈಫ್ (Katrina Kaif) ಹಾಗೂ ಸಲ್ಮಾನ್ ಖಾನ್ (Salman Khan) ಟರ್ಕಿಯಲ್ಲಿದ್ದಾರೆ. ತಮ್ಮ ಸಿನಿಮಾ ಟೈಗರ್ 3 (Tiger 3) ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಟೈಗರ್ 3 ಚಿತ್ರೀಕರಣದ ಸೆಟ್ನಲ್ಲಿ ತೆಗೆದ ಕೆಲವು ಚಿತ್ರಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇನ್ನು ನಟಿ ಕತ್ರಿನಾ ಕೈಫ್ ಸಹ ಈ ಶೂಟಿಂಗ್ ಅನ್ನು ಎಂಜಾಯ್ ಮಾಡುತ್ತಿರುವಂತೆ ಕಾಣುತ್ತಿದೆ. ಕತ್ರಿನಾ ಕೈಫ್ ಮಾಡಿರುವ ಈ ಪೋಸ್ಟ್ ನೋಡಿದರೆ ಸಾಕು ಅದು ಅರ್ಥವಾಗುತ್ತದೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ಕತ್ರಿನಾ ಕೈಫ್ ವಿದೇಶದಲ್ಲಿದ್ದರೂ ಅಭಿಮಾನಿಗಳಿಗೆ ಮಾತ್ರ ಸಖತ್ ಟ್ರೀಟ್ ಕೊಡುತ್ತಲೇ ಇರುತ್ತಾರೆ. ಈಗಲೂ ಸಹ ನಟಿ ಕತ್ರಿನಾ ಟರ್ಕಿಯಲ್ಲಿ ತೆಗೆದ ಕೆಲವು ಫೋಟೋಗಳನ್ನು ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
2/ 10
ಆಫ್ ಶೋಲ್ಡರ್ ಫ್ರಾಕ್ನಲ್ಲಿ ಕತ್ರಿನಾ ಕಪೂರ್ ಸಖತ್ ಹಾಟ್ ಹಾಗೂ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಅಲ್ಲದೆ ಕತ್ರಿನಾ ಕೈಫ್ ಟರ್ಕಿಯಲ್ಲಿ ಸಲ್ಮಾನ್ ಖಾನ್ ಜತೆಗಿನ ಶೂಟಿಂಗ್ ಅನ್ನು ತುಂಬಾ ಎಂಜಾಯ್ ಮಾಡುತ್ತಿರುವಂತಿದೆ.
3/ 10
ಕತ್ರಿನಾರ ಈ ಫೋಟೋಗಳು ನೆಟ್ಟಿಗರ ಗಮನ ಸೆಳೆದಿದ್ದು, ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕತ್ರಿನಾ ಹಾಗೂ ಸಲ್ಮಾನ್ ಖಾನ್ ಕಾಂಬಿನೇಷನ್ನಲ್ಲಿ ಈ ಹಿಂದೆ ಮೂಡಿ ಬಂದಿರುವ ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ ಸಿನಿಮಾಗಳು ಬಾಕ್ಸಾಫಿಸ್ನಲ್ಲಿ ಧೂಳೆಬ್ಬಿಸಿದ್ದವು.
4/ 10
ಏಕ್ ಥಾ ಟೈಗರ್ ಮತ್ತು ಟೈಗರ್ ಜಿಂದಾ ಹೈ ಸಿನಿಮಾಗಳಲ್ಲಿ ಕತ್ರಿನಾ ಕೈಫ್ ಸಖತ್ ಆ್ಯಕ್ಷನ್ ಸೀಕ್ವೆನ್ಸ್ಗಳಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲೂ ಅವರ ಆ್ಯಕ್ಷನ್ ಕಹಾನಿ ಮುಂದುವರೆದಿದೆ.
5/ 10
ಮಹೇಶ್ ಶರ್ಮಾ ನಿರ್ದೇಶನದ ಟೈಗರ್ 3 ಸಿನಿಮಾಗಾಗಿ ಕತ್ರಿನಾ ಕಪೂರ್ ಈ ಹಿಂದೆ ಮಾರ್ಷಲ್ ಆರ್ಟ್ ಅನ್ನು ಅಭ್ಯಾಸ ಮಾಡಿದ್ದು ನೋಡಿದರೆ, ಈ ಸಿನಿಮಾದಲ್ಲಿ ಭರಪೂರ ಆ್ಯಕ್ಷನ್ ಸಿಗಲಿದೆ ಅನ್ನೋದು ಖಚಿತವಾಗುತ್ತದೆ.
6/ 10
ಸಲ್ಮಾನ್ ಅವರ ಟೈಗರ್ 3 ಸಿನಿಮಾವು ಏಕ್ ಥಾ ಟೈಗರ್ ಮತ್ತು ಟೈಗರ್ ಜಿಂದಾ ಹೈ ಸಿನಿಮಾಗಳ ಮುಂದುವರೆದ ಭಾಗವಾಗಿದೆ. ಮೊದಲ ಭಾಗ 2012ರಲ್ಲಿ ಬಿಡುಗಡೆಯಾಗಿ ಬಾಕ್ಸಾಫಿಸ್ನಲ್ಲಿ ಧೂಳೆಬ್ಬಿಸಿತ್ತು. ಮೊದಲ ಸಿನಿಮಾದಲ್ಲಿ 200 ಕೋಟಿ ಗಳಿಕೆ ತಂದುಕೊಟ್ಟಿತು.
7/ 10
ಇನ್ನು ಐದು ವರ್ಷಗಳ ನಂತರ ಟೈಗರ್ ಜಿಂದಾ ಹೈ ಸಿನಿಮಾದಲ್ಲಿ ಒಂದಾದ ಈ ಜೋಡಿ ಮತ್ತೊಮ್ಮೆ ಕಮಾಲ್ ಮಾಡಿತು. ಇಷ್ಟೊಂದು ಹಿಟ್ ಸಿನಿಮಾಗಳ ಮುಂದುವರೆದ ಭಾಗವಾಗಿರುವ ಟೈಗರ್ 3 ಸಿನಿಮಾದ ಬಗ್ಗೆ ಅಭಿಮಾನಿಗಳು ಕುತೂಹಲರಾಗಿದ್ದಾರೆ.
8/ 10
ಟೈಗರ್ 3 ಚಿತ್ರದ ಶೂಟಿಂಗ್ಗಾಗಿ ದುಬೈ ಮಾರುಕಟ್ಟೆಯ ಸೆಟ್ ನಿರ್ಮಿಸಾಲಗಿತ್ತು. ತೌಕ್ತೆ ಚಂಡಮಾರುತದಿಂದಾಗಿ ಫಿಲ್ಮ್ ಸಿಟಿ ಹೆಚ್ಚು ಹಾನಿಗೊಳಗಾಗಿತ್ತು. ಅದೃಷ್ಟವಶಾತ್ ಆಗ ಶೂಟಿಂಗ್ ಅನ್ನು ನಿಲ್ಲಿಸಲಾಗಿತ್ತು. ಇದರಿಂದಾಗಿ ಯಾವುದೇ ಜೀವ ಹಾನಿಯಾಗಲಿಲ್ಲ.
9/ 10
ಈ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಅಭಿನಯಿಸುತ್ತಿದ್ದು, ಈ ಸಿನಿಮಾದ ಟ್ರೇ ಲರ್ ಈಗಾಗಲೇ ಬಿಡುಗಡೆಯಾಗಿದೆ. ಇದರ ಜೊತೆಗೆ ಸಲ್ಮಾನ್ ಅವರ ಅಂತಿಮ್: ದ ಫೈನಲ್ ಟ್ರೂಥ್ ಸಿನಿಮಾ ಕೂಡ ತಯಾರಾಗಿದೆ. ಇನ್ನು ಕಭೀ ಈದ್, ಕಭೀ ದಿವಾಲಿ ಈ ಸಿನಿಮಾವನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡಿದ್ದಾರೆ.
10/ 10
ಇನ್ನು ಕತ್ರಿನಾ ಕೂಡ ಸೂರ್ಯವಂಶಿ, ಸೂಪರ್ ಹೀರೋ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಇದರ ಜೊತೆಗೆ ಫರ್ಹಾನ್ ಅಖ್ತರ್ ಅವರ ಜೀ ಲೆ ಜರಾ ಸಿನಿಮಾದಲ್ಲಿ ಕತ್ರಿನಾ ಅವರು ಆಲಿಯಾ ಭಟ್ ಹಾಗೂ ಪ್ರಿಯಾಂಕಾ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.