Katrina-Vicky Mehndi: ವಿಕ್ಕಿ-ಕ್ಯಾಟ್ ಮೆಹಂದಿ ಕಾರ್ಯಕ್ರಮದ ಝಲ್ಲಕ್.. ಕಣ್ಣಿಗೆ ನಿಜಕ್ಕೂ ಹಬ್ಬ!
Katrina Kaif-Vicky Kaushal mehendi: ಗುರುವಾರವಷ್ಟೇ ಮದುವೆಯಾದ ಬಾಲಿವುಡ್ ಸ್ಟಾರ್ ಜೋಡಿ ಕತ್ರಿನಾ ಕೈಫ್- ವಿಕ್ಕಿ ಕೌಶಲ್ ತಮ್ಮ ಮದುವೆಯ ಮತ್ತಷ್ಟು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಉತ್ತರ ಭಾರತದಲ್ಲಿ ಮೆಹಂದಿ ಶಾಸ್ತ್ರದ ಜೊತೆಜೊತೆಗೆ ಹಾಡು-ಕುಣಿತದ ಕಾರ್ಯಕ್ರಮವಿರುತ್ತದೆ. ಸ್ಟಾರ್ ಜೋಡಿಯ ಮೆಹಂದಿ ಕಾರ್ಯಕ್ರಮದಲ್ಲಂತೂ ಮಸ್ತಿಗೆ ಕಮ್ಮಿ ಇರಲಿಲ್ಲ.
2/ 7
ವಧು ಕತ್ರಿನಾ- ವರ ವಿಕ್ಕಿ ಇಬ್ಬರು ಕೈಗೆ ಮೆಹಂದಿ ಹಾಕಿಸಿಕೊಂಡು, ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಫಿಲ್ಮಿ ಜೋಡಿಯ ಡ್ಯಾನ್ಸ್ ಝಲ್ಲಕ್ ನೆರೆದಿದ್ದವರ ಕಣ್ಣಲ್ಲಿ ಮಿಂಚಿನಂತೆ ಕಂಡಿದೆ.
3/ 7
ವಿಕ್ಕಿ ಟಿಪಿಕಲ್ ಫಿಲ್ಮಿ ಸ್ಟೈಲ್ ನಲ್ಲಿ ಮಂಡಿ ಮೇಲೆ ಕುಳಿತು ವಧುವಿಗೆ ಹಾಡು ಹಾಡುತ್ತಿರುವ ಫೋಟೋ ನಿಜಕ್ಕೂ ರೊಮ್ಯಾಂಟಿಕ್ ಆಗಿ ಇದೆ.
4/ 7
ಮೆಹಂದಿ ಫೋಟೋಗಳನ್ನು ನೋಡಿದವರು ನಟಿ ಕತ್ರಿನಾ ಇಷ್ಟು ಖುಷಿಯಾಗಿರುವುದನ್ನು ನಾವು ಹಿಂದೆ ಎಂದೂ ನೋಡಿಯೇ ಇಲ್ಲ ಎಂದು ಉದ್ಘರಿಸಿದ್ದಾರೆ. ಎಲ್ಲಾ ಫೋಟೋಗಳಲ್ಲಿ ಶೀಲಾ ಕಿ ಬಿಗ್ ಸ್ಮೈಲ್ ನೋಡಬಹುದು.
5/ 7
ಮೆಹಂದಿ ಅಂದ ಮೇಲೆ ಬ್ರೈಡ್ ಗ್ಯಾಂಗ್ ಇರದಿದ್ದರೆ ಹೇಗೆ? ವಧುವಿನ ಸ್ನೇಹಿತೆಯrU ಮೆಹಂdi ಹಾಕಿಸಿಕೊಂಡು ಭರ್ಜರಿಯಾಗಿ ಪಾರ್ಟಿ ಮಾಡಿದ್ದಾರೆ. ಯಾವುದೇ ಕಾರ್ಯಕ್ರಮವಿರಲಿ ಗ್ರೂಪ್ ಸೆಲ್ಫಿ ಇಲ್ಲದೆ ಅಪೂರ್ಣ ಅಂತಲೇ ಹೇಳಬಹುದು.
6/ 7
ವರ ವಿಕ್ಕಿನೂ ಕಮ್ಮಿ ಇಲ್ಲ ತನ್ನ ಬಾಯ್ಸ್ ಗ್ಯಾಂಗ್ ಜೊತೆ ಪಕ್ಕಾ ಪಂಜಾಬಿ ಸ್ಟೈಲ್ ನೃತ್ಯ ಮಾಡಿ ಸಖತ್ ಎಂಜಾಯ್ ಮಾಡಿರೋದನ್ನು ಫೋಟೋಗಳಲ್ಲಿ ನೋಡಬಹುದು.