ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯಾದಾಗಿನಿಂದ ಅಭಿಮಾನಿಗಳು ಗುಡ್ ನ್ಯೂಸ್ ಗಾಗಿ ಕಾಯುತ್ತಿದ್ದಾರೆ. ಇತ್ತೀಚಿಗೆ ಕತ್ರಿನಾ ಕೈಫ್ ಗರ್ಭಿಣಿ ಎನ್ನುವ ಸುದ್ದಿ ಹರಿದಾಡುತ್ತಿದೆ. ನಟಿಯರು ಸಡಿಲವಾದ ಬಟ್ಟೆಯಲ್ಲಿ ಕಾಣಿಸಿಕೊಂಡಾಗಲೆಲ್ಲಾ ಅವರ ಗರ್ಭಧಾರಣೆಯ ಬಗ್ಗೆ ಪ್ರಶ್ನೆಗಳು ಮೂಡಿದೆ.
ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಪತಿ ವಿಕ್ಕಿ ಕೌಶಲ್ ಜೊತೆ ಆನಂದದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಅಭಿಮಾನಿಗಳು ನಟಿಯನ್ನು ಯಾವಾಗ ಗುಡ್ ನ್ಯೂಸ್ ಕೊಡ್ತೀರಾ ಎಂದು ಕೇಳುತ್ತಿದ್ದಾರೆ.
2/ 7
ಕತ್ರಿನಾ ಇತ್ತೀಚೆಗೆ ಪತಿ ವಿಕ್ಕಿ ಕೌಶಲ್ ಮತ್ತು ಅವರ ಅತ್ತೆಯೊಂದಿಗೆ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿದ್ರು.
3/ 7
ಈ ವೇಳೆ ಸಡಿಲವಾದ ಗ್ರೀನ್ ಸೂಟ್ ಧರಿಸಿದ್ದರು. ಕತ್ರಿನಾ ಅವರ ಈ ಲುಕ್ ನೋಡಿ ಅನೇಕ ನೆಟ್ಟಿಗರು ಆಕೆ ಗರ್ಭಿಣಿಯೇ ಎಂದು ಪ್ರಶ್ನಿಸಿದ್ದಾರೆ. (ಫೋಟೋ ಕೃಪೆ: Viral Bhayani)
4/ 7
ಕತ್ರಿನಾ ಕೈಫ್ ಅವರ ಕ್ರಿಸ್ಮಸ್ ಆಚರಣೆಯ ಫೋಟೋ ಕೂಡ ಆಕೆ ಗರ್ಭಿಣಿ ಎನ್ನುವ ಸುದ್ದಿಗೆ ಪುಷ್ಠಿ ನೀಡಿದೆ. ನಟಿ ತನ್ನ ಲೂಸ್ ನೈಟ್ ಸೂಟ್ ನಲ್ಲಿ ಕಾಣಿಸಿಕೊಂಡಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿ ಅತ್ತೆಯ ಹಿಂದೆ ನಿಂತು ತನ್ನ ಹೊಟ್ಟೆಯನ್ನು ಮರೆಮಾಡಲು ಪ್ರಯತ್ನಿಸುತ್ತಿದ್ದಾರಂತೆ. (ಫೋಟೋ ಕೃಪೆ: Instagram: @katrinakaif)
5/ 7
ಕೆಲವು ದಿನಗಳ ಹಿಂದೆ, ಕತ್ರಿನಾ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಗೌನ್ ಧರಿಸಿದ್ರು. ಈ ಗೌನ್ನಲ್ಲಿ ಕತ್ರಿನಾ ಅವರ ಹೊಟ್ಟೆ ಸ್ವಲ್ಪ ದೊಡ್ಡದಾಗಿ ಕಾಣುತ್ತಿದೆ. ಈ ಚಿತ್ರಗಳು ವೈರಲ್ ಆಗಿದ್ದು, ಫೋಟೋ ನೋಡಿದ ನೆಟ್ಟಿಗರು ಕ್ಯಾಟ್ ಪ್ರೆಗ್ನೆಂಟ್ ಎನ್ನುತ್ತಿದ್ದಾರೆ. (ಫೋಟೋ ಕೃಪೆ: Viral Bhayani)
6/ 7
ಕತ್ರಿನಾ ಕೈಫ್ ರೆಡ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು, ಫೋಟೋದಲ್ಲಿ ಕತ್ರಿನಾ ಕೈಫ್ ಹೊಟ್ಟೆ ಸ್ವಲ್ಪ ದೊಡ್ಡದಾಗಿ ಕಾಣಿಸಿಕೊಂಡಿದೆ. ನಟಿ ಕೂಡ ಹೆಚ್ಚಾಗಿ ಸಡಿಲವಾದ ಬಟ್ಟೆ ಧರಿಸುತ್ತಿದ್ದಾರೆ. (ಫೋಟೋ ಕೃಪೆ: Viral Bhayani)
7/ 7
ಕೆಲವು ದಿನಗಳ ಹಿಂದೆ ಕತ್ರಿನಾ ಅವರ ಮತ್ತೊಂದು ವಿಡಿಯೋ ವೈರಲ್ ಆಗಿತ್ತು. ಇದರಲ್ಲಿ ನಟಿ ಸಡಿಲವಾದ ಡ್ರೆಸ್ ನಲ್ಲಿ ಕಾಣಿಸಿಕೊಂಡರು. ಈ ಲುಕ್ ನೋಡಿದ ಫ್ಯಾನ್ಸ್, ಕತ್ರಿನಾ ಗುಡ್ ನ್ಯೂಸ್ ಕೊಡೋದು ಪಕ್ಕಾ ಅಂತಿದ್ದಾರೆ. (ಫೋಟೋ ಕೃಪೆ: Viral Bhayani)