Anupama Parameswaran: ಸ್ಕ್ರೀನ್​ ಮೇಲೆ ಮುದ್ದಾಗಿ ಕಾಣೋ ಈ ನಟಿ, ಮೇಕಪ್​ ಇಲ್ದೇ ಹೀಗೆ ಕಾಣ್ತಾರೆ

Anupama Parameswaran: ಅನುಪಮಾ ಪರಮೇಶ್ವರನ್ ಅವರು ಇತ್ತೀಚೆಗೆ ಬಿಡುಗಡೆಯಾದ 'ಕಾರ್ತಿಕೇಯ 2' (Karthikeya 2) ಚಿತ್ರದ ಮೂಲಕ ಸದ್ದು ಮಾಡುತ್ತಿದ್ದಾರೆ. ಅವರ ಸಿನಿಮಾ ಬಾಲಿವುಡ್​ನ 'ಲಾಲ್ ಸಿಂಗ್ ಚಡ್ಡಾ', 'ದೊಬಾರಾ' ಮತ್ತು 'ರಕ್ಷಾ ಬಂಧನ' ಹೀಗೆ ಮೂರು ಸಿನಿಮಾಗಳನ್ನು ಸೋಲಿಸಿದೆ. ಈ ವಿಚಾರವಾಗಿ ನಿಖಿಲ್ ಸಿದ್ಧಾರ್ಥ ಜೊತೆಗೆ ಅವರ ಸಹನಟಿಯಾಗಿ ನಟಿಸಿದ ಅನುಪಮಾ ಪರಮೇಶ್ವರನ್ ಬಗ್ಗೆಯೂ ಭಾರೀ ಹೊಗಳಿಕೆ ಕೇಳಿ ಬರುತ್ತಿದೆ. ಇನ್ನು ದಕ್ಷಿಣ ಭಾರತದ ಈ ನಟಿ ತಮ್ಮ ಸೌಂದರ್ಯ ಮತ್ತು ನಟನೆಗೆ ಬಹಳ ಫೇಮಸ್. ಹೀಗಿರುವಾಗಲೇ ಈ ಮುದ್ದುಮುಖದ ಚೆಲುವೆ ಮೇಕ್ಅಪ್ ಮಾಡದಿರುವ ತಮ್ಮ ಕೆಲ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಅಭಿಮಾನಿಗಳ ಮೆರಚ್ಚುಗೆಗೆ ಪಾತ್ರವಾಗಿವೆ.

First published: