ಸಾರಾ ಅಲಿ ಖಾನ್- ಕಾರ್ತಿಕ್ ಆರ್ಯನ್ ರಿಲೇಷನ್ಶಿಪ್ ಬಗ್ಗೆ ಕೊನೆಗೂ ಮೌನ ಮುರಿದ ಕರೀನಾ ಕಪೂರ್
ಬಾಲಿವುಡ್ನಲ್ಲಿ ಗಾಸಿಪ್ಗಳಿಗೇನೂ ಕಡಿಮೆಯಿಲ್ಲ. ಸ್ಟಾರ್ಗಳು ಒಂದೆರಡು ಬಾರಿ ಒಟ್ಟಿಗೆ ಕಾಣಿಸಿಕೊಂಡರೂ ಅದೇ ದೊಡ್ಡ ಸುದ್ದಿಯಾಗಿಬಿಡುತ್ತದೆ. ಅದೇರೀತಿ ನವಾಬ ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಬಗ್ಗೆಯೂ ಸುದ್ದಿಗಳು ಹರಿದಾಡಿದ್ದವು. ನಟ ಕಾರ್ತಿಕ್ ಆರ್ಯನ್ ಜೊತೆಗೆ ಸಾರಾ ಅಲಿ ಖಾನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ತಮ್ಮ ಗಂಡನ ಮೊದಲ ಹೆಂಡತಿಯ ಮಗಳ ಡೇಟಿಂಗ್ ಬಗ್ಗೆ ಕರೀನಾ ಕಪೂರ್ ತುಟಿ ಬಿಚ್ಚಿದ್ದಾರೆ.
News18 Kannada | January 8, 2020, 1:38 PM IST
1/ 30
ಬಾಲಿವುಡ್ನಲ್ಲಿ ಗಾಸಿಪ್ಗಳಿಗೇನೂ ಕಡಿಮೆಯಿಲ್ಲ. ಸ್ಟಾರ್ಗಳು ಒಂದೆರಡು ಬಾರಿ ಒಟ್ಟಿಗೆ ಕಾಣಿಸಿಕೊಂಡರೂ ಅದೇ ದೊಡ್ಡ ಸುದ್ದಿಯಾಗಿಬಿಡುತ್ತದೆ.
2/ 30
ಅದೇರೀತಿ ನವಾಬ ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಬಗ್ಗೆಯೂ ಸುದ್ದಿಗಳು ಹರಿದಾಡಿದ್ದವು.
3/ 30
ನಟ ಕಾರ್ತಿಕ್ ಆರ್ಯನ್ ಜೊತೆಗೆ ಸಾರಾ ಅಲಿ ಖಾನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.
4/ 30
ಕಾಫಿ ವಿಥ್ ಕರಣ್ ಶೋನಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ನಾನು ಕಾರ್ತಿಕ್ ಆರ್ಯನ್ ಜೊತೆ ಡೇಟಿಂಗ್ ಮಾಡಲು ಇಷ್ಟಪಡುತ್ತೇನೆ ಎಂದು ಸಾರಾ ಅಲಿ ಖಾನ್ ಹೇಳಿದ ನಂತರ ಗಾಸಿಪ್ಗಳು ಶುರುವಾಗಿತ್ತು.
5/ 30
ಆದರೆ, ಬಹಿರಂಗವಾಗಿ ಎಲ್ಲೂ ಆ ವದಂತಿಯನ್ನು ಅಲ್ಲಗಳೆಯದ ಸಾರಾ ತನ್ನ ಗೆಳೆಯ ಕಾರ್ತಿಕ್ ಆರ್ಯನ್ ಜೊತೆ ಸುತ್ತಾಟ ನಡೆಸಿದ್ದಳು.
ಈ ಸಿನಿಮಾದ ಶೂಟಿಂಗ್ ವೇಳೆಯಲ್ಲಿ ಸಾರಾ ಮತ್ತು ಕಾರ್ತಿಕ್ ಆರ್ಯನ್ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ ಎನ್ನಲಾಗಿತ್ತು.
8/ 30
ಈ ಇಬ್ಬರು ಸ್ಟಾರ್ಗಳ ಪ್ರೇಮ ಕಹಾನಿ ಅಂತ್ಯ ಕಂಡಿದೆ ಎಂಬ ಸುದ್ದಿಯೂ ಹರಿದಾಡಿತ್ತು.
9/ 30
ಆದರೆ, ಸಿನಿಮಾ ಪ್ರಮೋಷನ್ಗಾಗಿ ಮತ್ತೆ ಇಬ್ಬರೂ ಅನೇಕ ಕಡೆ ಒಟ್ಟಾಗಿ ಕಾಣಿಸಿಕೊಂಡಿದ್ದರು.
10/ 30
ಸಾರಾ ಬರ್ತಡೇಗೆ ಕೂಡ ಕಾರ್ತಿಕ್ ವಿಭಿನ್ನವಾಗಿ ವಿಶ್ ಮಾಡಿದ್ದರು.
11/ 30
ಇಬ್ಬರೂ ಒಟ್ಟಾಗಿರುವ ಹಾಟ್ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
12/ 30
ತಮ್ಮ ಮಗಳ ಪ್ರೇಮ್ ಕಹಾನಿ ಬಗ್ಗೆ ಮಾತನಾಡಿದ್ದ ಸೈಫ್ ಅಲಿ ಖಾನ್, ಸಾರಾ ಒಳ್ಳೆಯ ಹುಡುಗಿ. ಆಕೆ ಯಾರೊಂದಿಗೆ ಇರಬೇಕು, ಏನು ಮಾಡಬೇಕು ಎಂಬುದರ ಅರಿವು ಅವಳಿಗಿದೆ ಎಂದಿದ್ದರು.
13/ 30
ಅವಳು ಒಳ್ಳೆಯವರನ್ನೇ ಇಷ್ಟಪಡುತ್ತಾಳೆ. ಆ ಹುಡುಗ ಒಳ್ಳೆಯವನಾಗಿರುವುದರಿಂದಲೇ ಅವಳು ಅವನನ್ನು ಇಷ್ಟಪಡುತ್ತಿದ್ದಾಳೆ' ಎನ್ನುವ ಮೂಲಕ ಮಗಳ ಪ್ರೀತಿಗೆ ತಮ್ಮ ಒಪ್ಪಿಗೆಯಿದೆ ಎಂದು ಸೈಫ್ ಅಲಿ ಖಾನ್ ಪರೋಕ್ಷವಾಗಿ ತಿಳಿಸಿದ್ದರು.
14/ 30
ಇದೀಗ ಸೈಫ್ ಅಲಿ ಖಾನ್ ಪತ್ನಿ ಕರೀನಾ ಕಪೂರ್ ಖಾನ್ ಕೂಡ ಸಾರಾ ಅಲಿ ಖಾನ್ ಪ್ರೀತಿಯ ಬಗ್ಗೆ ಬಾಯಿ ಬಿಟ್ಟಿದ್ದಾರೆ.
15/ 30
ಸೈಫ್ ಮೊದಲ ಹೆಂಡತಿ ಅಮೃತಾ ಸಿಂಗ್ ಮಗಳಾಗಿರುವ ಸಾರಾ ಜೊತೆಗೆ ಕರೀನಾ ಉತ್ತಮ ಸಂಬಂಧ ಹೊಂದಿದ್ದಾರೆ.
16/ 30
ಸಾರಾ ಕೂಡ ಕರೀನಾಳನ್ನು ಮಲತಾಯಿ ಎಂಬಂತೆ ನೋಡುವುದಿಲ್ಲ. ಈ ಬಗ್ಗೆ ಆಕೆ ಹಲವು ಶೋಗಳಲ್ಲಿ ಸ್ಪಷ್ಟಪಡಿಸಿದ್ದೂ ಇದೆ.
17/ 30
ಕರೀನಾ ನನ್ನ ತಾಯಿ ಸ್ಥಾನವನ್ನು ತುಂಬಬೇಕೆಂದು ನಾನು ಬಯಸುವುದಿಲ್ಲ. ಆಕೆ ತುಂಬ ಒಳ್ಳೆಯವಳು. ಕರೀನಾ ನನ್ನ ಅಪ್ಪನ ಹೆಂಡತಿ ಎಂದಷ್ಟೇ ನಾನು ನೋಡುತ್ತೇನೆ. ನಮ್ಮಿಬ್ಬರ ಸಂಬಂಧ ಚೆನ್ನಾಗಿದೆ ಎಂದು ಸಾರಾ ಹೇಳಿದ್ದರು.
18/ 30
ಇತ್ತೀಚಿಗಿನ ಸಂದರ್ಶನವೊಂದರಲ್ಲಿ ರ್ಯಾಪಿಡ್ ರೌಂಡ್ ಸುತ್ತಿನಲ್ಲಿ ಕೇಳಲಾದ ಸಾರಾ ಅಲಿ ಖಾನ್ ಕುರಿತಾದ ಪ್ರಶ್ನೆಗೆ ಕರೀನಾ ಕಪೂರ್ ಜಾಣತನದಿಂದಲೇ ಉತ್ತರ ನೀಡಿದ್ದಾರೆ.
19/ 30
ಕಾರ್ತಿಕ್ ಆರ್ಯನ್ ಯಾರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ನಿಮಗೆ ಗೊತ್ತಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಕರೀನಾ 'ನನಗೂ ಆ ಪ್ರಶ್ನೆ ಕಾಡುತ್ತಿದೆ. ಬಹುಶಃ ಆತ ತನ್ನ ಕೆಲಸದ ಜೊತೆ ಡೇಟಿಂಗ್ ಮಾಡುತ್ತಿರಬಹುದು' ಎಂದಿದ್ದಾರೆ.
20/ 30
ಹಾಗಿದ್ದರೆ ನಿಮಗೆ ಸಾರಾ ಅಲಿ ಖಾನ್ ಮತ್ತು ಕಾರ್ತಿಕ್ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತಿಲ್ಲವೇ? ಎಂಬ ಮತ್ತೊಂದು ಪ್ರಶ್ನೆಗೆ ಅಷ್ಟೇ ಕೂಲ್ ಆಗಿ ಉತ್ತರಿಸಿರುವ ಕರೀನಾ 'ಸತ್ಯವಾಗಲೂ ಈ ಬಗ್ಗೆ ನನಗೆ ಗೊತ್ತಿಲ್ಲ. ಯಾಕೆಂದರೆ ಅವರಿಬ್ಬರೂ ಈ ವಿಚಾರವಾಗಿ ನನ್ನ ಬಳಿ ಏನೂ ಹೇಳಿಲ್ಲ. ನನಗೆ ಗೊತ್ತಿಲ್ಲದ ವಿಷಯದ ಬಗ್ಗೆ ನಾನೇನು ಹೇಳಲು ಸಾಧ್ಯ?' ಎಂದು ಪ್ರಶ್ನಿಸಿದ್ದಾರೆ.
21/ 30
ಕರೀನಾ ಕಪೂರ್ 'ಅಂಗ್ರೆಜಿ ಮೀಡಿಯಂ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಮಗ ತೈಮೂರ್ ಹುಟ್ಟಿದ ಮೇಲೆ ಬ್ರೇಕ್ ತೆಗೆದುಕೊಂಡಿದ್ದ ಕರೀನಾ ಮತ್ತೊಮ್ಮೆ ಸಿನಿ ಜೀವನಕ್ಕೆ ಕಾಲಿಡಲಿದ್ದಾರೆ.
22/ 30
ಸುಶಾಂತ್ ಸಿಂಗ್ ರಜಪೂತ್ ನಾಯಕನಾಗಿದ್ದ 'ಕೇದಾರನಾಥ್' ಸಿನಿಮಾದಿಂದ ಬಾಲಿವುಡ್ಗೆ ಕಾಲಿಟ್ಟ ಸಾರಾ ಅಲಿ ಖಾನ್ ಬಳಿಕ ರಣವೀರ್ ಸಿಂಗ್ ಜೊತೆಗೆ 'ಸಿಂಬ' ಸಿನಿಮಾದಲ್ಲಿ ನಟಿಸಿದರು.
23/ 30
ವರುಣ್ ಧವನ್ ಜೊತೆಗೆ 'ಕೂಲಿ ನಂಬರ್ 1' ಸಿನಿಮಾದಲ್ಲೂ ಸಾರಾ ಅಭಿನಯಿಸುತ್ತಿದ್ದಾರೆ. 1995ರಲ್ಲಿ ಇದೇ ಹೆಸರಿನಲ್ಲಿ ತೆರೆಕಂಡಿದ್ದ ಸಿನಿಮಾ ಮತ್ತೆ ಹೊಸ ರೂಪದಲ್ಲಿ ತೆರೆಕಾಣಲಿದೆ.
24/ 30
ಪ್ಯಾರ್ ಕಾ ಪಂಚನಾಮ, ಆಕಾಶ್ ವಾಣಿ, ಪ್ಯಾರ್ ಕಾ ಪಂಚನಾಮ 2, ಪತಿ ಪತ್ನಿ ಔರ್ ವೋ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಕಾರ್ತಿಕ್ ಆರ್ಯನ್ ತಮ್ಮ ಪ್ರೇಯಸಿ ಸಾರಾ ಅಲಿ ಖಾನ್ ಜೊತೆಗೆ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ.
25/ 30
ಇದರ ಜೊತೆಗೆ ಭೂಲ್ ಭುಲಯ್ಯ-2, ದೋಸ್ತಾನಾ-2 ಸಿನಿಮಾದಲ್ಲೂ ಕಾರ್ತಿಕ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ.