Kareena Kapoor: ಮತ್ತೆ ಸೈಜ್ ಝೀರೋ​ ಆದ ಬೇಬೊ; ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚುತ್ತಿರುವ ತೈಮೂರ್​ ಮಮ್ಮಿ

ಬಾಲಿವುಡ್​ನಲ್ಲಿ ಮೊದಲ ಬಾರಿ ಸೈಜ್ ಝೀರೋ ದೇಹ ಸಿರಿ ಪಡೆದು ಗಮನಸೆಳೆದ ನಟಿ ಎಂದರೇ ಕರೀನಾ ಕಪೂರ್​. ಸೈಜ್ ಝೀರೋ ದೇಹಕ್ಕೆ ಒಳ್ಳೆಯದಲ್ಲ ಎಂಬ ಮಾತುಗಳ ನಡುವೆಯೂ ಈ ಸಾಹಸ ಮಾಡಿ ಬೇಬೊ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಸೈಜ್ ಝೀರೋ ಆದರೂ ಉತ್ತಮ ಆರೋಗ್ಯಯುತ ಜೀವನ ಶೈಲಿ ನಿಮ್ಮದಾಗಿರಬೇಕು ಎಂಬುದು ಕರೀನಾ ಸಲಹೆ. ಇದಾದ ಬಳಿಕ ಮದುವೆ, ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿದ್ದ ಕರೀನಾ ಮತ್ತೆ ತಮ್ಮ ದೇಹವನ್ನು ಸೈಜ್ ಝೀರೋ ಆಗಿಸಿದ್ದಾರೆ. ಒಂದು ಮಗುವಿನ ತಾಯಿಯಾದ ಬಳಿಕವೂ ಬಳುಕುವ ಬಳ್ಳಿಯಂತೆ ಆಗಿರುವ ಕರೀನಾ ಪಡ್ಡೆಗಳ ನಿದ್ದೆ ಕದಿಯುತ್ತಿರುವುದು ಸುಳ್ಳಲ್ಲ

First published: