Kareena Kapoor: 3ಡಿ ಗೌನ್​ ತೊಟ್ಟು ಲ್ಯಾಕ್ಮೆ ಫ್ಯಾಷನ್​ ವೀಕ್​ನಲ್ಲಿ ಮಿಂಚಿದ ಬೇಬೊ ಕರೀನಾ ಕಪೂರ್​..!

Lakme Fashion week 2020: ಕರೀನಾ ಕಪೂರ್​ ವಿವಾಹವಾಗಿ ಒಂದು ಮಗುವಿನ ತಾಯಿಯಾದ ನಂತರವೂ ಬ್ಯುಸಿಯಾಗಿರುವ ಕೆಲವೆ ಕೆಲವು ನಟಿಯರಲ್ಲಿ ಒಬ್ಬರು. ಇಂತಹ ನಟಿ ಕರೀನಾ ಕಪೂರ್​ ಸದ್ಯ ಸಿನಿಮಾಗಳ ಜೊತೆಗೆ ಮಾಡೆಲಿಂಗ್​ ಸಹ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಮುಂಬೈನಲ್ಲಿ ನಡೆಯುತ್ತಿರುವ ಲ್ಯಾಕ್ಮೆ ಫ್ಯಾಷನ್​ ವೀಕ್​ನಲ್ಲಿ ಕರೀನಾ ಅಮಿತ್​ ಅಗರ್​ವಾಲ್​ ಅವರು ವಿನ್ಯಾಸ ಮಾಡಿರುವ ಕಡು ಹಸಿರು ಬಣ್ಣದ 3ಡಿ ಗೌನ್​ ತೊಟ್ಟು ಮಿಂಚಿದ್ದಾರೆ. (ಚಿತ್ರಗಳು ಕೃಪೆ: ಲ್ಯಾಕ್ಮೆಫ್ಯಾಷನ್​ವೀಕ್​ ಇನ್​ಸ್ಟಾಗ್ರಾಂ ಖಾತೆ, ಕರೀನಾ ಕಪೂರ್​ ಅಭಿಮಾನಿಗಳ ಟ್ವಿಟರ್​ ಪುಟ)

First published: