ಬಾಲಿವುಡ್ ಬಾಯ್ಕಾಟ್ ಟ್ರೆಂಡ್ನಿಂದಾಗಿ ನಟಿ ಕರೀನಾ ಕಪೂರ್ ಖಾನ್ ಅವರ ಚಿತ್ರ ಲಾಲ್ ಸಿಂಗ್ ಚಡ್ಡಾ ಬಾಕ್ಸ್ ಆಫೀಸ್ನಲ್ಲಿ ಫೇಲ್ ಆಯಿತು. ರಿಲೀಸ್ಗೂ ಮುನ್ನವೇ ಚೆನ್ನಾಗಿ ಪ್ರಚಾರ ಪಡೆದ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋತಿತು.
2/ 7
ಪ್ರಸ್ತುತ ಬಾಲಿವುಡ್ ಬಾಯ್ಕಾಟ್ ಟ್ರೆಂಡ್ ಜೋರಾಗುತ್ತಲೇ ಇದೆ. ಲಾಲ್ ಸಿಂಗ್ ಚಡ್ಡಾ, ಬ್ರಹ್ಮಾಸ್ತ್ರದಂತಹ ಸಿನಿಮಾ ತೀವ್ರ ಹೊಡೆತಗಳನ್ನು ತಿಂದಿದೆ.
3/ 7
ಕಳೆದ ವರ್ಷ ಬಾಲಿವುಡ್ ಬಾಯ್ಕಾಟ್ ಟ್ರೆಂಡ್ನಿಂದ ಅನೇಕ ಬಾಲಿವುಡ್ ಚಲನಚಿತ್ರಗಳು ತೀವ್ರವಾಗಿ ನಲುಗಿದವು. ಈಗ ಪಠಾಣ್ ಸಿನಿಮಾಗೂ ಇದೇ ಭೀತಿ ಆವರಿಸಿದೆ.
4/ 7
ಇದುವರೆಗೆ ಬಾಲಿವುಡ್ ಬಾಯ್ಕಾಟ್ ಟ್ರೆಂಡ್ ಬಗ್ಗೆ ಹಲವು ನಟರು ಕಮೆಂಟ್ ಮಾಡಿದ್ದಾರೆ. ಅದೇ ರೀತಿ ಬಾಲಿವುಡ್ ಬೆಬೋ ಕರೀನಾ ಕಪೂರ್ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
5/ 7
ಸದ್ಯ ಬೇಷರಮ್ ರಂಗ್ ಹಾಡಿನಿಂದಾಗಿ ಪಠಾಣ್ ಬಾಯ್ಕಾಟ್ ಟ್ರೆಂಡ್ ಶುರುವಾಗಿದೆ. ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾ ತುಂಬಾ ದೊಡ್ಡಮಟ್ಟದಲ್ಲಿ ಸಿದ್ಧವಾಗಿತ್ತು. ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ನಟಿ ಕರೀನಾ ಕಪೂರ್ ಕೂಡ ಇದ್ದರು.
6/ 7
ಬಾಲಿವುಡ್ ಬಾಯ್ಕಾಟ್ ಬಗ್ಗೆ ಪ್ರತಿಕ್ರಿಯಿಸಿದ ಕರೀನಾ, 'ಬಾಲಿವುಡ್ ಬಾಯ್ಕಾಟ್ ಟ್ರೆಂಡ್ ನಾನು ಒಪ್ಪುವುದಿಲ್ಲ. ವರ್ಷಗಳಿಂದ ನಾವು ನಿಮಗೆ ಮನರಂಜನೆ ನೀಡುತ್ತಿದ್ದೇವೆ. ಸಿನಿಮಾ ಇಲ್ಲದಿದ್ದರೆ ಹೇಗೆ ಮನರಂಜನೆ ಸಿಗುತ್ತದೆ ಎಂದು ಪ್ರಶ್ನಿಸಿದ್ದಾರೆ.
7/ 7
ಸದ್ಯ ನಟಿ ಕರೀನಾ ಅವರು ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾಗಿದ್ದು ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ತೈಮೂರ್ ಹಾಗೂ ಜೆಹ್ ಜೊತೆ ಸಮಯ ಕಳೆಯುತ್ತಿದ್ದಾರೆ.