Kareena Kapoor ಥರ ತೆಳ್ಳಗೆ ಕಾಣ್ಬೇಕು ಅನ್ನೋ ಆಸೆನಾ? ಹಾಗಿದ್ರೆ ಅವ್ರು ಮಾಡೋ ಯೋಗ ನೀವೂ ಪ್ರಾಕ್ಟೀಸ್ ಮಾಡಿ
Kareena Kapoor : ಹೆಚ್ಚಿನ ಸಿನಿ ನಟ ನಟಿಯರು ಇಂದು ಯೋಗವನ್ನು ತಮ್ಮ ಜೀವನ ಶೈಲಿಯನ್ನಾಗಿ (Lifestyle) ಮಾಡಿಕೊಂಡಿದ್ದಾರೆ. ಎರಡು ಮಕ್ಕಳ ತಾಯಿಯಾಗಿದ್ದರೂ (Mother) ಯೋಗದ ಮೂಲಕ ತಮ್ಮ ಫಿಟ್ನೆಸ್ ಜರ್ನಿಯನ್ನು ಕರೀನಾ ಮುಂದುವರಿಸಿದ್ದಾರೆ
ಬಾಲಿವುಡ್ ತಾರೆ ಕರೀನಾ ಕಪೂರ್ (Bollywood Actress Kareena Kapoor Khan) ಫಿಟ್ನೆಸ್ಗೆ (Fitness) ಹೆಸರುವಾಸಿಯಾದವರು. ಯೋಗದ (Yoga) ಕಡೆಗೆ ಹೆಚ್ಚಿನ ಒಲವು ತೋರುವ ನಟಿ 2006 ರಿಂದಲೇ ಯೋಗಾಭ್ಯಾಸ ಮಾಡಿಕೊಂಡು ಬರುತ್ತಿದ್ದಾರೆ.
2/ 8
ಹೆಚ್ಚಿನ ಸಿನಿ ನಟ ನಟಿಯರು ಇಂದು ಯೋಗವನ್ನು ತಮ್ಮ ಜೀವನ ಶೈಲಿಯನ್ನಾಗಿ (Lifestyle) ಮಾಡಿಕೊಂಡಿದ್ದಾರೆ. ಎರಡು ಮಕ್ಕಳ ತಾಯಿಯಾಗಿದ್ದರೂ (Mother) ಯೋಗದ ಮೂಲಕ ತಮ್ಮ ಫಿಟ್ನೆಸ್ ಜರ್ನಿಯನ್ನು ಕರೀನಾ ಮುಂದುವರಿಸಿದ್ದಾರೆ
3/ 8
ಮ್ಮ ಇನ್ಸ್ಟಾದಲ್ಲಿ 108 ಸೂರ್ಯನಮಸ್ಕಾರಗಳನ್ನು (108 Surya Namaskars) ಮಾಡಿ ತಾಯಂದಿರಿಗೆ ಫಿಟ್ನೆಸ್ ಕಾಳಜಿಯ ಕುರಿತು ಆಕರ್ಷಣೆಯನ್ನುಂಟು ಮಾಡಿರುವ ಕರೀನಾ ಬೇರೆ ಬೇರೆ ಯೋಗ ಭಂಗಿಗಳಲ್ಲಿ ಕಣ್ಮನ ಸೆಳೆಯುತ್ತಿದ್ದಾರೆ.
4/ 8
ಭುಜಂಗಾಸನದಲ್ಲಿ ಕೈಗಳ ಸ್ಥಿರತೆಯನ್ನು ಪ್ರದರ್ಶಿಸಿರುವ ಬೇಬೋ ಭುಜಂಗಾಸನವನ್ನು ಸುಲಭವಾಗಿ ಹೇಗೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಬೇರೆ ಬೇರೆ ಯೋಗ ಭಂಗಿಗಳನ್ನು ಪ್ರದರ್ಶಿಸುತ್ತಾ ಕರೀನಾ ದೈನಂದಿನ ಯೋಗವನ್ನು ಆರಂಭಿಸುತ್ತಾರೆ.
5/ 8
ನೀವು ಉತ್ತಮ ದೇಹದಾರ್ಢ್ಯತೆಯನ್ನು ಪಡೆಯಬೇಕು ಎಂದಾದಲ್ಲಿ ಫಿಟ್ನೆಸ್ ಅನ್ನು ಅವಲಂಬಿಸಿರಬೇಕು ಎಂಬ ಸಂದೇಶವನ್ನು ಅವರು ನೀಡುತ್ತಿದ್ದಾರೆ. ಬೇರೆ ಬೇರೆ ಆಸನಗಳನ್ನು ಪ್ರದರ್ಶಿಸಿ ವ್ಯಾಯಾಮದ ಲಾಭಗಳನ್ನು ತಿಳಿಯಪಡಿಸುತ್ತಿದ್ದಾರೆ.
6/ 8
ಧನುರಾಸನ, ವಜ್ರಾಸನ, ಹನುಮಾನಾಸನ ಹೀಗೆ ಬೇರೆ ಬೇರೆ ಸರಳ ಆಸನಗಳನ್ನು ಮಾಡುವ ಬಾಲಿವುಡ್ ಬೇಬೋ ಯುವ ತಾಯಂದಿರಿಗೆ ಮಾದರಿ ಎನಿಸಿದ್ದಾರೆ.
7/ 8
Kareena Kapoor Khan is all smiles after a strenous yoga session on her terrace. (Image: Instagram)
8/ 8
ಗರ್ಭಾವಸ್ಥೆ ಸಮಯದಲ್ಲೂ ಯೋಗವನ್ನು ಸತತವಾಗಿ ಅಭ್ಯಾಸ ನಡೆಸಿರುವ ಕರೀನಾ ಗರ್ಭಿಣಿಯಾಗಿರುವಾಗ ಹೇಗೆ ಸುರಕ್ಷಿತವಾಗಿ ಯೋಗವನ್ನು ಅಭ್ಯಸಿಸುವುದು ಎಂಬುದನ್ನು ತಿಳಿಸಿ ಕೊಟ್ಟಿದ್ದರು.