ಮುಂಬೈನಲ್ಲಿ ಶನಿವಾರ ನಡೆದ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಅವರ ವಿವಾಹಕ್ಕೆ ವಿಶ್ವದ ನಾನಾ ಭಾಗಗಳಿಂದ ಗಣ್ಯರು ಬಂದಿದ್ದರು. ಈ ಜೋಡಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಬಾಲಿವುಡ್ ತಾರಾ ಸಾಗರವೂ ಹರಿದು ಬಂದಿತ್ತು. ಅದರಲ್ಲಿ ಕರೀನಾ ಕಪೂರ್, ಕರಿಷ್ಮಾ ಕಪೂರ್, ಅಲಿಯಾ ಭಟ್, ರೇಖಾ, ಕಾಜೋಲ್ ಸಹ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.