TV Stars Payment: ಒಂದು ಎಪಿಸೋಡ್ಗೆ ಲಕ್ಷಗಟ್ಟಲೆ ಚಾರ್ಜ್ ಮಾಡ್ತಾರೆ ಈ ಟಿವಿ ತಾರೆಯರು, ಯಾರು ಹೆಚ್ಚು ದುಬಾರಿ?
ಚಲನಚಿತ್ರ ತಾರೆಯರಿಗಿಂತ ಯಾವುದರಲ್ಲೂ ಕಡಿಮೆ ಇರುವುದಿಲ್ಲ ಈ ಟಿವಿ ತಾರೆಯರು. ಒಂದೊಂದು ಎಪಿಸೋಡ್ಗೇ ಲಕ್ಷಗಟ್ಟಲೆ ಸಂಭಾವನೆ ಪಡೆಯುವ ಇವರ ಆದಾಯ ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.
ಸುನಿಲ್ ಗ್ರೋವರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕಾಮಿಡಿ ನೈಟ್ಸ್ ಮತ್ತು ದಿ ಕಪಿಲ್ ಶರ್ಮಾ ಶೋ ಮೂಲಕ ಖ್ಯಾತಿಯ ಉತ್ತುಂಗಕ್ಕೇರಿದ ಈ ನಟ ಪ್ರತಿ ದಿನಕ್ಕೆ 10 ರಿಂದ 12 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರಂತೆ. ಇನ್ನು ಈತನನ್ನು ಯಾವುದಾದರೂ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆಯಬೇಕೆಂದರೂ ಅದಕ್ಕೂ ಲಕ್ಷಗಳಲ್ಲೇ ಖರ್ಚು ಮಾಡೋಕೆ ರೆಡಿ ಇರಬೇಕು.
2/ 8
'ಬನೂ ಮೇ ತೇರಿ ದುಲ್ಹನ್' ಎನ್ನುವ ಖ್ಯಾತ ಧಾರಾವಾಹಿಯ ನಾಯಕಿ ದಿವ್ಯಾಂಕಾ ತ್ರಿಪಾಠಿ. ಒಂದು ಎಪಿಸೋಡ್ ಗೆ ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ. ಈಕೆ ಸದ್ಯ ಟಿವಿ ದುನಿಯಾದ ಟಾಪ್ ಸ್ಟಾರ್. ಸದ್ಯ ಈಕೆ ಖತ್ರೋಂಕೆ ಖಿಲಾಡಿ ಫಿಯರ್ ಫ್ಯಾಕ್ಟರ್ 11ರಲ್ಲೂ ಕಾಣಿಸಿಕೊಳ್ತಿದ್ದಾರೆ.
3/ 8
ಕಪಿಲ್ ಶರ್ಮಾ ಕಿರುತೆರೆಯ ಅತ್ಯಂತ ಖ್ಯಾತ ಮತ್ತು ದುಬಾರಿ ಕಲಾವಿದ. ತನ್ನದೇ ಹೆಸರಿನ ಕಾಮಿಡಿ ಶೋ ಕಮಿಲ್ ಶರ್ಮಾ ಶೋ ನಲ್ಲಿ ಕಾಣಿಸಿಕೊಳ್ಳೋ ಇವರು ಒಂದು ಎಪಿಸೋಡ್ ಗೆ 50ರಿಂದ 60 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಇದಲ್ಲದೇ ಈತನಿಗೆ ಜಾಹೀರಾತು ದುನಿಯಾದಲ್ಲೂ ಭಾರೀ ಬೇಡಿಕೆ ಇದೆ, ಅದರ ಆದಾಯ ಬೇರೆ.
4/ 8
ಸುಂದರಿ ಜೆನಿಫರ್ ವಿಂಜೆಟ್ ಅನೇಕ ಯಶಸ್ವಿ ಧಾರಾವಾಹಿಗಳ ನಾಯಕಿ. ಸರಸ್ವತಿಚಂದ್ರ, ದಿಲ್ ಮಿಲ್ ಗಯೆ, ಬೇಹದ್, ಬೇಪನಾ ಮುಂತಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಎಪಿಸೋಡ್ ಗೆ ಒಂದರಿಂದ 1.25 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರಂತೆ.
5/ 8
ಕರಣ್ ಪಟೇಲ್ ನಾನಾ ಧಾರಾವಾಹಿಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದಾರೆ. ಕೆಲವು ಧಾರಾವಾಹಿಗಳಲ್ಲಿ ನಾಯಕನಾಗಿದ್ದರೆ ಮತ್ತೆ ಕೆಲವುಗಳಲ್ಲಿ ಖಳನಟನ ಪಾತ್ರ ನಿರ್ವಹಿಸಿದ್ದಾರೆ. ಎರಡರಲ್ಲೂ ಸೈ ಎನಿಸಿಕೊಂಡಿರುವ ಈ ಕಲಾವಿದ ಒಂದು ಎಪಿಸೋಡ್ ಗೆ 1.25 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರಂತೆ.
6/ 8
ದೇವೋಂಕೆ ದೇವ್ ಮಹಾದೇವ್ ಎನ್ನುವ ಸೀರಿಯಲ್ ನಲ್ಲಿ ಶಿವನ ಪಾತ್ರ ನಿರ್ವಹಿಸಿದ್ದ ಕಲಾವಿದ ಮೋಹಿತ್ ರೈನಾ. ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾದ ಮುಂಬೈ ಡೈರೀಸ್ ನಲ್ಲೂ ಇವ್ರು ಕಾಣಿಸಿಕೊಂಡಿದ್ದಾರೆ. ಒಂದು ಎಪಿಸೋಡಿಗೆ ಈತ 1 ರಿಂದ 1.18 ಲಕ್ಷ ರೂಪಾಯಿಗಳನ್ನು ಚಾರ್ಜ್ ಮಾಡುತ್ತಾರೆ.
7/ 8
ರೋನಿತ್ ರಾಯ್ ಕ್ಯೂಂಕಿ ಸಾಸ್ ಭಿ ಕಭೀ ಬಹು ಥಿಯ ಮಿಹಿರ್ ವಿರಾನಿ ಮತ್ತು ಕಸೌಟಿ ಜಿಂದಗಿ ಕೆ ಯ ಮಿಸ್ಟರ್ ಬಜಾಜ್ ಪಾತ್ರಗಳ ಮೂಲಕ ಮನೆಮಾತಾದವರು. ಅನೇಕ ಬಾಲಿವುಡ್ ಚಿತ್ರಗಳಲ್ಲೂ ಇವರು ನಟಿಸಿದ್ದಾರೆ. ಮೂಲಗಳ ಪ್ರಕಾರ ಒಂದು ದಿನಕ್ಕೆ ರೋನಿತ್ 1.25 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರಂತೆ.
8/ 8
ಕಹಾನಿ ಘರ್ ಘರ್ ಕಿ ಮತ್ತು ಬಡೆ ಅಚ್ಛೆ ಲಗತೆ ಹೇ ಧಾರಾವಾಹಿಗಳ ಖ್ಯಾತ ನಟಿ ಸಾಕ್ಷಿ ತನ್ವರ್ ಒಂದು ದಿನದ ಸಂಭಾವನೆ 1ರಿಂದ 1.25 ಲಕ್ಷ ರೂಪಾಯಿಗಳಷ್ಟಿದೆ.