Kantara Movie: ಕಾಂತಾರ ಶೂಟಿಂಗ್ಗಾಗಿ ನೀರು ಬಳಸಿ ಬಾವಿ ಪೂರ್ತಿ ಖಾಲಿ
ಕಾಂತಾರ ಸಿನಿಮಾ ಕ್ಲೈಮ್ಯಾಕ್ಸ್ ಬಗ್ಗೆ ಪ್ರತಿಯೊಬ್ಬರೂ ಮಾತನಾಡಿದ್ದಾರೆ. ಸಿನಿಮಾ ನೋಡಿದವರೆಲ್ಲ ಕ್ಲೈಮ್ಯಾಕ್ಸ್ ಬಗ್ಗೆ ಹೊಗಳಿದ್ದಾರೆ. ಆದರೆ ಆ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡಲು ಒಂದು ಬಾವಿಯ ನೀರೆಲ್ಲ ಖಾಲಿ ಮಾಡಿದ್ರು ಎನ್ನುವುದು ಗೊತ್ತೇ?
ಕಾಂತಾರ ಸಿನಿಮಾದಲ್ಲಿ ಬರುವ ಕೊನೆಯ 20 ನಿಮಿಷಗಳು ಪ್ರತಿ ಪ್ರೇಕ್ಷರಿಗೆ ಇಷ್ಟವಾಗಿದೆ. ಕಾಂತಾರದ ಕ್ಲೈಮ್ಯಾಕ್ಸ್ ಬಗ್ಗೆ ಟಾಪ್ ನಟರಿಂದ ಹಿಡಿದು ಜನಸಾಮಾನ್ಯರ ತನಕ ಎಲ್ಲರೂ ಮಾತನಾಡಿದ್ದಾರೆ.
2/ 7
ಈಗ ನಟ ರಿಷಬ್ ಶೆಟ್ಟಿ ಅವರು ಪ್ರೀ ಕ್ಲೈಮ್ಯಾಕ್ಸ್ ಬಗ್ಗೆ ಐಎಂಡಿಬಿ ಜೊತೆ ಮಾತನಾಡಿದ್ದಾರೆ. ಇದರಲ್ಲಿ ಪ್ರೀ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಂದರ್ಭದ ಸವಾಲುಗಳ ಬಗ್ಗೆ ರಿವೀಲ್ ಮಾಡಿದ್ದಾರೆ.
3/ 7
ಜೋರು ಮಳೆ, ರಾತ್ರಿಯಲ್ಲಿ ನಡೆಯುವ ಘಟನೆಗಳ ಶೂಟಿಂಗ್ ಬಗ್ಗೆ ರಿಷಬ್ ಮಾತನಾಡಿದ್ದು ಇಲ್ಲಿ ಪ್ರೀ ಕ್ಲೈಮ್ಯಾಕ್ಸ್ ರಾತ್ರಿ ಸೀನ್ 360 ಡಿಗ್ರಿ ಶಾಟ್ ತೆಗೆಯಲಾಗಿತ್ತು ಎಂದಿದ್ದಾರೆ.
4/ 7
ರಾತ್ರಿ ಮಳೆಯ ಎಫೆಕ್ಟ್ ಇರುವಂತೆ ಚಿತ್ರೀಕರಣ ಇತ್ತು. ಮಧ್ಯಾಹ್ನದಿಂದ ರಾತ್ರಿಯ ತನಕವೂ ಶೂಟಿಂಗ್ ರಿಹರ್ಸಲ್ ಕೂಡಾ ನಡೆದಿತ್ತು ಎಂದು ರಿವೀಲ್ ಮಾಡಿದ್ದಾರೆ.
5/ 7
ಸುಮಾರು 7 ದಿನಗಳ ಕಾಲ ನಿರಂತರ ಶೂಟಿಂಗ್ ಮಾಡಿದ್ದು ಅಲ್ಲಿ ಸಾಕಷ್ಟು ನೀರಿನ ಅವಶ್ಯಕತೆ ಇತ್ತು. ಅದಕ್ಕಾಗಿ ಹತ್ತಿರದಲ್ಲಿದ್ದ ಬಾವಿ ನೀರನ್ನು ಬಳಸಲು ನಿರ್ಧರಿಸಿದ್ದರು.
6/ 7
ಅಲ್ಲಿದ್ದ ಬಾವಿಯಿಂದಲೇ ನೀರು ತೆಗೆದುಕೊಂಡೆವು. 7 ದಿನ ನೀರು ತೆಗೆದೆವು. ಶೂಟ್ ಮುಗಿಯುವಾಗ ನೀರು ಕೂಡಾ ಖಾಲಿ ಆಗಿತ್ತು ಎಂದಿದ್ದಾರೆ ರಿಷಬ್ ಶೆಟ್ಟಿ.
7/ 7
ಮಳೆ ಹಾಗೂ ರಾತ್ರಿಯ ಸೀಕ್ವೆನ್ಸ್ ಶೂಟ್ ಮಾಡುವುದು ಸ್ವಲ್ಪ ಕಷ್ಟವಾಗಿತ್ತು. ಮಧ್ಯಾಹ್ನದಿಂದ ರಾತ್ರಿ ಪೂರಾ ಶೂಟಿಂಗ್ ಮಾಡುತ್ತಿದ್ದೆವು ಎಂದಿದ್ದಾರೆ ರಿಷಬ್ ಶೆಟ್ಟಿ.