ಕನ್ನಡದ 2022ರ ಟಾಪ್ ಸಿನಿಮಾ ಕಾಂತಾರ ತಂಡ ಆಸ್ಕರ್ಗೆ ಅರ್ಜಿ ಸಲ್ಲಿಸಿದ್ದು ಗೊತ್ತೇ ಇದೆ. ಈಗ ಈ ಸಂಬಂಧ ಹೊಸ ಅಪ್ಡೇಟ್ ಒಂದು ಹೊರಬಿದ್ದಿದೆ.
2/ 7
ತ್ರಿಬಲ್ ಆರ್ ಸೇರಿದಂತೆ ಭಾರತದಲ್ಲಿ ಹಲವು ಟಾಪ್ ಸಿನಿಮಾ ಆಸ್ಕರ್ಗೆ ಅರ್ಜಿ ಸಲ್ಲಿಸಿದೆ. ಕಾಂತಾರ ಸಿನಿಮಾ ಕಡೆಯಿಂದಲೂ ಅರ್ಜಿ ಸಲ್ಲಿಸಲಾಗಿದೆ ಎಂದು ಈ ಹಿಂದೆ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದರು.
3/ 7
ಇದೀಗ ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಹೊಸ ಅಪ್ಡೇಟ್ ಹಂಚಿಕೊಂಡಿದ್ದಾರೆ. ಆಸ್ಕರ್ ಹಾಗೂ ಕಾಂತಾರ ಸಂಬಂಧ ಗುಡ್ನ್ಯೂಸ್ ಕೊಟ್ಟಿದ್ದಾರೆ.
4/ 7
ಕಾಂತಾರ 2 ಆಸ್ಕರ್ ಕ್ವಾಲಿಫಿಕೇಷನ್ಗಳನ್ನು ಗಳಿಸಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಜರ್ನಿಯನ್ನು ಎದುರು ನೋಡುತ್ತಿದ್ದೇವೆ. ಆಸ್ಕರ್ನಲ್ಲಿ ಸಿನಿಮಾ ಶೈನ್ ಆಗುವುದನ್ನು ನೋಡಲು ಕಾಯುತ್ತಿದ್ದೇವೆ ಎಂದು ಬರೆದಿದ್ದಾರೆ.
5/ 7
ಟ್ವೀಟ್ ಮೂಲಕ ಹೊಂಬಾಳೆ ಫಿಲ್ಮ್ಸ್ ಖುಷಿ ಹಂಚಿಕೊಂಡ ತಕ್ಷಣ ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ. ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
6/ 7
ಕಾಂತಾರ ಸಿನಿಮಾಗೆ ರಿಷಬ್ ಶೆಟ್ಟಿ ಕತೆ ಬರೆದು ನಿರ್ದೇಶನ ಮಾಡಿದ್ದು ಶಿವ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಈಗಾಗಲೇ 450 ಕೋಟಿಗೂ ಹೆಚ್ಚು ಗಳಿಸಿದೆ.
7/ 7
ಸಿನಿಮಾದಲ್ಲಿ ರಿಷಬ್ ಜೊತೆ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಕುಮಾರ್, ಪ್ರಮೋದ್ ಶೆಟ್ಟಿ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.