Kantara Movie: ಕಾಂತಾರ-2 ಸಿನಿಮಾಗೆ ರೆಡಿಯಾಗಿದೆ ಪ್ಲಾನ್; ಹೊಂಬಾಳೆ ಫಿಲಂಸ್ ನಿರ್ಮಾಪಕರು ಕೊಟ್ರು ಬಿಗ್ ಅಪ್ಡೇಟ್
ಈ ವರ್ಷ ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ಸ್ ಯಶ್ ಅವರ ಕೆಜಿಎಫ್ 2 ಮತ್ತು ರಿಷಬ್ ಶೆಟ್ಟಿ ಅವರ ಕಾಂತಾರದಂತಹ ಯಶಸ್ವಿ ಸಿನಿಮಾ ನೀಡಿದೆ. ಇದೀಗ ಕಾಂತಾರ ಸೂಪರ್ ಹಿಟ್ ಆಗುತ್ತಿದ್ದಂತೆ, ಕಾಂತಾರ 2 ಸಿನಿಮಾ ಬಗ್ಗೆ ನಿರ್ಮಾಪಕರು ಸುಳಿವು ನೀಡಿದ್ದಾರೆ.
ಎಸ್ಎಸ್ ರಾಜಮೌಳಿಯವರ RRR ಸಿನಿಮಾ ನಂತರ ರಿಷಬ್ ಶೆಟ್ಟಿ ಅವರ ಆಕ್ಷನ್ ಥ್ರಿಲ್ಲರ್ ಕಾಂತಾರ ಸಿನಿಮಾವನ್ನು 2023 ರ ಆಸ್ಕರ್ ನಾಮಿನೇಷನ್ಗೆ ಕಳುಹಿಸಲಾಗಿದೆ ಎಂದು ವಿಜಯ್ ಕಿರಗಂದೂರು ಹೇಳಿದ್ರು.
2/ 8
ಇದೇ ವೇಳೆ ಮಾತಾಡಿದ ವಿಜಯ್ ಕಿರಗಂದೂರು, ಆಸ್ಕರ್ ನಾಮಿನೇಷನ್ಗೆ ಕಳುಹಿಸಲಾಗಿದೆ. ಜೊತೆಗೆ ಕಾಂತಾರ 2 ಪ್ರಾಜೆಕ್ಟ್ ಬಗ್ಗೆಯು ಚಿಂತನೆ ನಡೆಸಿರೋದಾಗಿ ಹೇಳಿದ್ದಾರೆ.
3/ 8
ಕಾಂತಾರ 2ಗಾಗಿ ಪ್ಲಾನ್ ಮಾಡ್ತಿದ್ದೇವೆ. ಆದ್ರೆ ಯಾವುದೇ ಟೈಮ್ ಲೈನ್ ಇಲ್ಲ ಎಂದು ಕಿರಗಂದೂರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
4/ 8
ಇಂಡಿಯಾ ಟುಡೆ ಜೊತೆಗೆ ಸಂದರ್ಶನದಲ್ಲಿ ಮಾತಾಡಿದ ವಿಜಯ್ ಕಿರಗಂದೂರು, ಕಾಂತಾರ ಸೀಕ್ವೆಲ್ ಮಾಡುವ ಬಗ್ಗೆ ಪ್ಲಾನ್ ಮಾಡಿರೋದಾಗಿ ಹೇಳಿದ್ದಾರೆ.
5/ 8
ನಾವು ಬೇರೆಯದೇ ಪ್ಲಾನ್ ಮಾಡಿದ್ದೇವೆ. ರಿಷಬ್ ಶೆಟ್ಟಿ ಸಹ 1 ತಿಂಗಳು ಬ್ರೇಕ್ ತೆಗೆದುಕೊಂಡಿದ್ದಾರೆ. ರಿಷಬ್ ವಿರಾಮದ ನಂತ್ರ ಮತ್ತೆ ತೀರ್ಮಾನ ತೆಗೆದುಕೊಳ್ತೀವಿ ಎಂದು ಹೇಳಿದ್ದಾರೆ.
6/ 8
ಕೆಜಿಎಫ್ ಮತ್ತು ಕಾಂತಾರ ಯಶಸ್ಸಿನ ಸೀಕ್ರೆಟ್ ಬಗ್ಗೆ ಮಾತಾಡಿದ ವಿಜಯ್ ಕಿರಗಂದೂರು, ನಾವು ಸಿನಿಮಾ ಮಾಡುವಾಗ ಕಥೆ ಮತ್ತು ಚಿತ್ರಕಥೆಯಲ್ಲಿ ಬಗ್ಗೆ ಹೆಚ್ಚು ಗಮನವಹಿಸುತ್ತೇವೆ ಎಂದು ಹೇಳಿದರು.
7/ 8
ನೀವು ನಮ್ಮ ಯಾವುದೇ ಸ್ಕ್ರಿಪ್ಟ್ಗಳನ್ನು ತೆಗೆದುಕೊಳ್ಳಿ ಉದಾಹರಣೆಗೆ, ಕೆಜಿಎಫ್ 1, ನಾವು ಸ್ಕ್ರಿಪ್ಟ್ಗಾಗಿ 3 ವರ್ಷ ಕಳೆದಿದ್ದೇವೆ ಮತ್ತು ಕಾಂತಾರಕ್ಕಾಗಿ ನಾವು ಸ್ಕ್ರಿಪ್ಟ್ ಮಟ್ಟದಲ್ಲಿ 6-8 ತಿಂಗಳುಗಳ ಕಾಲ ಕೆಲಸ ಮಾಡಿದ್ದೇವೆ ಎಂದು ಹೇಳಿದ್ರು.
8/ 8
ನಮಗೆ, ಒಳ್ಳೆಯ ಸ್ಕ್ರಿಪ್ಟ್ ಬರೆಯಲು ಸಮಯ ಬೇಕಿರುವ ಬರಹಗಾರರು ಮತ್ತು ನಿರ್ದೇಶಕರಿಗೆ ನಾವು ಯಾವಾಗಲೂ ಪ್ರಾಮುಖ್ಯತೆಯನ್ನು ನೀಡುತ್ತೇವೆ ಎಂದು ನಿರ್ಮಾಪಕರು ಹೇಳಿದ್ರು.