Kantara-Pushpa: ಪುಷ್ಪಾ ಕಲೆಕ್ಷನ್ ಮೀರಿಸಿದ ಕಾಂತಾರ! ಆದರೆ ಬಜೆಟ್ನಲ್ಲಿ ಭಾರೀ ವ್ಯತ್ಯಾಸ
ಕಾಂತಾರ ಸಿನಿಮಾ ಪುಷ್ಪಾ ಸಿನಿಮಾದ ಕಲೆಕ್ಷನ್ ಮೀರಿಸಿ ಮುನ್ನುಗ್ಗುತ್ತಿದೆ. ಆದರೆ ಈ ಎರಡೂ ಸಿನಿಮಾದ ಬಜೆಟ್ನಲ್ಲಿ ಎಷ್ಟು ವ್ಯತ್ಯಾಸವಿದೆ ಗೊತ್ತಾ? ನೆಟ್ಟಿಗರ ಬಾಯಲ್ಲಿ ಈಗ ಇದೇ ಚರ್ಚೆ.
ಕಾಂತಾರದ ಬಿಗ್ ಸಕ್ಸಸ್ ನಂತರ ಸಿನಿಮಾವನ್ನು ಬೇರೆ ಬೇರೆ ರೀತಿಯಲ್ಲಿ ಅದನ್ನು ಬೇರೆ ಸಿನಿಮಾಗಳಿಗೆ ಹೋಲಿಸಲಾಗುತ್ತಿದೆ. ಕಂಟೆಂಟ್, ಕಥೆ, ಬಜೆಟ್, ಸಿನಿಮಾ ವ್ಯಾಪ್ತಿ ಸೇರಿ ಎಲ್ಲಾ ಆಯಾಮಗಳಲ್ಲಿ ಸಿನಿಮಾವನ್ನು ಹೋಲಿಕೆ ಮಾಡಲಾಗುತ್ತಿದೆ.
2/ 7
ಕಾಂತಾರ ಸಿನಿಮಾ ಸುಮಾರು 14-16 ಕೋಟಿ ಬಜೆಟ್ನಲ್ಲಿ ಸಿದ್ಧವಾಗಿದೆ. ಇದಕ್ಕಿಂತಲೂ ಕಡಿಮೆ ಬಜೆಟ್ ಅನ್ನು ಈ ಸಿನಿಮಾಗೆ ನಿಗದಿ ಮಾಡಲಾಗಿತ್ತು. ಆದರೂ ಸ್ವಲ್ಪ ನಿಗದಿತ ಬಜೆಟ್ ಹೆಚ್ಚಾಗಿದೆ.
3/ 7
ಆದರೂ ಕಾಂತಾರಕ್ಕೆ ಬಂಡವಾಳ ಹೂಡಿದ ಹೊಂಬಾಳೆ ಫಿಲ್ಮ್ಸ್ಗೆ ಭರ್ಜರಿ ರಿಟರ್ನ್ಸ್ ಸಿಕ್ಕಿದೆ. 16 ಕೋಟಿಯ ಸಿನಿಮಾ ಈಗ 400 ಕೋಟಿಗೂ ಹೆಚ್ಚು ಗಳಿಸಿ ಮುನ್ನುಗ್ಗುತ್ತಿದೆ.
4/ 7
ಈಗ ನೆಟ್ಟಿಗರು ಪುಷ್ಪಾ ಸಿನಿಮಾದ ಬಜೆಟ್ ಹಾಗೂ ಕಲೆಕ್ಷನ್ ಅನ್ನು ಕಾಂತಾರ ಸಿನಿಮಾದ ಬಜೆಟ್ ಹಾಗೂ ಕಲೆಕ್ಷನ್ಗೆ ಹೋಲಿಕೆ ಮಾಡುತ್ತಿದ್ದಾರೆ.
5/ 7
ಸುಮಾರು 160ರಿಂದ 170 ಕೋಟಿ ಬಜೆಟ್ನಲ್ಲಿ ಸಿದ್ಧವಾದ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 350 ಕೋಟಿಯಷ್ಟು ಕಲೆಕ್ಷನ್ ಮಾಡಿದೆ.
6/ 7
ಆದರೆ ಬರೀ 16 ಕೋಟಿಯಲ್ಲಿ ರೆಡಿಯಾದ ಕಾಂತಾರ ಸಿನಿಮಾ 350 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಸಾಮಾನ್ಯ ಒಂದೇ ತೆರನಾಗಿದ್ದರೂ ಬಜೆಟ್ನಲ್ಲಿ ದೊಡ್ಡ ವ್ಯತ್ಯಾಸವಿದೆ.
7/ 7
ಇದೀಗ ನೆಟ್ಟಿಗರು ಎರಡೂ ಸಿನಿಮಾಗಳ ಬಜೆಟ್ ಹಾಗೂ ಬಾಕ್ಸ್ ಆಫೀಸ್ ಕಲೆಕ್ಷನ್ ಮೊತ್ತವನ್ನು ಹೋಲಿಕೆ ಮಾಡಿ ಆನ್ಲೈನ್ನಲ್ಲಿ ಪೋಸ್ಟ್ಗಳನ್ನು ಶೇರ್ ಮಾಡುತ್ತಿದ್ದಾರೆ.