Rishab Shetty-Manasi Sudhir: ಕಾಂತಾರದ ಹೀರೋ ಶಿವ-ಅಮ್ಮ ಕಮಲಕ್ಕನ ವಯಸ್ಸು ಸೇಮ್ ಸೇಮ್
ಕಾಂತಾರ ಸಿನಿಮಾದ ಹೀರೋ ಶಿವ ಅವರ ತಾಯಿ ಕಮಲಕ್ಕ ಜೊಡಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಶಿವ ಆಗಿ ನಟಿಸಿದ್ದ ರಿಷಬ್ ಹಾಗೂ ಅವರ ತಾಯಿಯಾಗಿ ನಟಿಸಿದ ಮಾನಸಿ ಸುಧೀರ್ ಅವರು ಒಂದೇ ವಯಸ್ಸಿನವರು ಎಂದರೆ ನೀವು ನಂಬ್ತೀರಾ? ರಿಷಬ್ ಅವರೇ ಈ ವಿಚಾರವನ್ನು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಕಾಂತಾರ ಕನ್ನಡ ಸಿನಿಮಾ ಸೂಪರ್ ಹಿಟ್ ಆಗಿದೆ. ಸ್ಯಾಂಡಲ್ವುಡ್ ಘಮವನ್ನು ಎಲ್ಲೆಡೆ ಪಸರಿಸಿರೋ ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.
2/ 7
ನಟ ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ನಟಿಸಿರುವ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದು ಇದೀಗ ಬೇರೆ ಭಾಷೆಗಳಲ್ಲಿಯೂ ರಿಲೀಸ್ ಆಗಿ ವ್ಯಾಪಕ ಮೆಚ್ಚುಗೆಯನ್ನು ಗಳಿಸುತ್ತಿದೆ.
3/ 7
ಇಲ್ಲೊಂದು ಇಂಟ್ರೆಸ್ಟಿಂಗ್ ವಿಚಾರ ಏನಪ್ಪಾ ಅಂದ್ರೆ ನಟ ರಿಷಬ್ ಶಿಟ್ಟಿ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅವರ ತಾಯಿಯಾಗಿ ನಟಿಸಿದ ಮಾನಸಿ ಸುಧೀರ್ ಅವರು ಸೇಮ್ ಏಜ್ನವರು. ಹೌದು ಒಂದೇ ವಯಸ್ಸಿನವರು ಕಮಲಕ್ಕ ಹಾಗೂ ಶಿವ.
4/ 7
ಇದನ್ನು ರಿಷಬ್ ಶೆಟ್ಟಿ ಅವರೇ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಮಾನಸಿ ಸುಧೀರ್ ಲಾಕ್ಡೌನ್ ಸಂದರ್ಭ ಅಭಿನಯ ಗೀತೆಗಳನ್ನು ಮಾಡಿ ಫೇಮಸ್ ಆದರು.
5/ 7
ಕಮಲಕ್ಕ ಎನ್ನುವ ಪಾತ್ರದಲ್ಲಿ ಮಾನಸಿ ಸುಧೀರ್ ಕಾಣಿಸಿಕೊಂಡಿದ್ದು ಇದರಲ್ಲಿ ವಿಧವೆಯಾಗಿ, ವಯಸ್ಸಾದ ಮಹಿಳೆಯಾಗಿ ನಟಿಸಿದ್ದಾರೆ.
6/ 7
ನಟ ರಿಷಬ್ ಶೆಟ್ಟಿ ಅವರಿಗೆ ಈಗ 39 ವರ್ಷ ವಯಸ್ಸು. ಮಾನಸಿ ಸುಧೀರ್ ಕೂಡಾ ಅದೇ ವಯಸ್ಸಿನವರು. ಕಲಾವಿದೆ, ಡ್ಯಾನ್ಸರ್, ಶಿಕ್ಷಕಿಯಾಗಿ ಗುರುತಿಸಿಕೊಂಡಿದ್ದಾರೆ.
7/ 7
ನಟ ರಿಷಬ್ ಶೆಟ್ಟಿ ಅವರ ಕಾಂತಾರ ಹವಾ ಅದ್ಭುತವಾಗಿದ್ದು ಎಲ್ಲೆಡೆ ಇದುವೇ ಚರ್ಚೆಯಾಗುತ್ತಿದೆ. ಸಿನಿಮಾದ ಹಾಡು, ಡಯಲಾಗ್ಗಳು ಸೂಪರ್ ಹಿಟ್ ಆಗಿವೆ.