ಕಾಂತಾರ ಸಿನಿಮಾ ಈಗಾಗಲೇ ಹಲವು ರೆಕಾರ್ಡ್ಗಳನ್ನು ಸೃಷ್ಟಿಸಿದೆ. ಎರಡನೇ ಸೋಮವಾರ ಕೆಜಿಎಫ್2ಗಿಂತ ಹೆಚ್ಚು ಗಳಿಸಿದ ಹಿರಿಮೆ ತನ್ನದಾಗಿಸಿದ ಸಿನಿಮಾ ಈಗ ಮತ್ತೊಂದು ಹೆಜ್ಜೆ ಇಟ್ಟಿದೆ.
2/ 7
ಭರ್ಜರಿ ಕಲೆಕ್ಷನ್ ಮಾಡಿದ ಕಾಂತಾರ ಸಿನಿಮಾ ಬೇರೆ ಭಾಷೆಗಳಲ್ಲಿಯೂ ಸಕ್ಸಸ್ಫುಲ್ ಆಗಿ ತೆರೆ ಕಂಡು ಚೆನ್ನಾಗಿಯೇ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
3/ 7
ಈಗ ಹೊಂಬಾಳೆ ಸಿನಿಮಾ ಟ್ವೀಟ್ ಮಾಡಿದ್ದು 16ನೇ ದಿನ ಅತ್ಯಧಿಕ ಕಲೆಕ್ಷನ್ ಮಾಡಿದೆ. ಭಾರತ ಹಾಗೂ ವಿದೇಶಗಳಲ್ಲಿ 16ನೇ ದಿನ ಅತ್ಯಧಿಕ ಕಲೆಕ್ಷನ್ ಮಾಡಿದ ಸಿನಿಮಾ ಎಂದು ಟ್ವೀಟ್ ಮಾಡಲಾಗಿದೆ.
4/ 7
ಕಾಂತಾರ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದು ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದಾರೆ. ಶಿವ ಎನ್ನುವ ಹೀರೋ ಪಾತ್ರದಲ್ಲಿ ರಿಷಬ್ ಅವರನ್ನು ಕಾಣಬಹುದು.
5/ 7
ಸಿನಿಮಾದ ಆರಂಭಿಕ ದೃಶ್ಯದಲ್ಲಿ ನಿಜವಾದ ಕಂಬಳ ಕೋಣಗಳನ್ನು ಓಡಿಸಿ ಅದ್ಭುತ ದೃಶ್ಯವನ್ನು ಕೊಡಲಾಗಿದ್ದು ಸಿನಿಮಾದಲ್ಲಿ ಸಪ್ತಮಿ ಗೌಡ ಹೀರೋಯಿನ್ ಆಗಿ ನಟಿಸಿದ್ದಾರೆ.
6/ 7
ಅಚ್ಯುತ್ ಕುಮಾರ್, ಮಾನಸಿ ಸುಧೀರ್. ಪ್ರಮೋದ್ ಶೆಟ್ಟಿ ಸೇರಿದಂತೆ ಅತ್ಯುತ್ತಮ ತಾರಾ ಬಳಗಳನ್ನು ಹೊಂದಿರುವ ಸಿನಿಮಾ ಸುಮಾರು 16 ಕೋಟಿಯಲ್ಲಿ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ.
7/ 7
ಈಗಾಗಲೇ 78 ಕೋಟಿಗೂ ಹೆಚ್ಚು ಗಳಿಕೆ ಮಾಡಿರುವ ಈ ಸಿನಿಮಾ 100 ಕೋಟಿಯತ್ತ ದಾಪುಗಾಲಿಡುತ್ತಿದೆ. ಪ್ರಭಾಸ್, ಕಿಚ್ಚ, ಧನುಷ್ ಸೇರಿದಂತೆ ಟಾಪ್ ನಟರು ಸಿನಿಮಾ ಮೆಚ್ಚಿ ಹೊಗಳಿದ್ದಾರೆ.