Rishab Shetty: ವಿಜಯ್ ದೇವರಕೊಂಡಗೆ ಆ್ಯಕ್ಷನ್ ಕಟ್ ಹೇಳ್ತಾರಾ ಕಾಂತಾರ ಹೀರೋ?

Vijay Devarakonda: ಲೈಗರ್ ಸಿನಿಮಾ ನಂತರ ವಿಜಯ್ ದೇವರಕೊಂಡ ಶಿವ ನಿರ್ವಾಣ ನಿರ್ದೇಶನದ ಖುಷಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಎರಡು ಶೆಡ್ಯೂಲ್‌ಗಳ ಶೂಟಿಂಗ್ ಮುಗಿಸಿದೆ. ಈ ಚಿತ್ರದ ನಂತರ ವಿಜಯ್ ಅವರು ಜರ್ಸಿ ಖ್ಯಾತಿಯ ಗೌತಮ್ ತಿನ್ನನೂರಿ ಅವರೊಂದಿಗೆ ಸ್ಪೈ ಥ್ರಿಲ್ಲರ್ ಮಾಡಲಿದ್ದಾರೆ. ಕನ್ನಡದ ನಟ ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ವಿಜಯ್ ಅದ್ಧೂರಿ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

First published:

 • 18

  Rishab Shetty: ವಿಜಯ್ ದೇವರಕೊಂಡಗೆ ಆ್ಯಕ್ಷನ್ ಕಟ್ ಹೇಳ್ತಾರಾ ಕಾಂತಾರ ಹೀರೋ?

  ಲೈಗರ್ ನಂತರ ವಿಜಯ್ ಸದ್ಯ ಖುಷಿ ಸಿನಿಮಾ ಮಾಡುತ್ತಿದ್ದಾರೆ. ಕಾಂತಾರ ಚಿತ್ರದ ಮೂಲಕ ಭರ್ಜರಿ ಯಶಸ್ಸು ಕಂಡಿರುವ ರಿಷಬ್ ಶೆಟ್ಟಿ ವಿಜಯ್ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ.

  MORE
  GALLERIES

 • 28

  Rishab Shetty: ವಿಜಯ್ ದೇವರಕೊಂಡಗೆ ಆ್ಯಕ್ಷನ್ ಕಟ್ ಹೇಳ್ತಾರಾ ಕಾಂತಾರ ಹೀರೋ?

  ಈಗಾಗಲೇ ಕಥೆಯ ಕುರಿತು ಚರ್ಚೆ ಮುಕ್ತಾಯವಾಗಿದೆ ಎನ್ನಲಾಗಿದೆ. ಸದ್ಯದಲ್ಲೇ ಈ ಸಿನಿಮಾದ ಘೋಷಣೆ ಹೊರಬೀಳಲಿದೆಯಂತೆ. ಸದ್ಯ ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಸೀಕ್ವೆಲ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಇದು ನಿಜವೇ ಆಗಿದ್ದರೆ ಕಾಂತಾರ 2 ಚಿತ್ರದ ನಂತರ ವಿಜಯ್ ಅವರ ಸಿನಿಮಾ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ.

  MORE
  GALLERIES

 • 38

  Rishab Shetty: ವಿಜಯ್ ದೇವರಕೊಂಡಗೆ ಆ್ಯಕ್ಷನ್ ಕಟ್ ಹೇಳ್ತಾರಾ ಕಾಂತಾರ ಹೀರೋ?

  ಸಮಂತಾ ಅನಾರೋಗ್ಯದ ಕಾರಣದಿಂದ ಖುಷಿ ಶೂಟಿಂಗ್ ನಿಲ್ಲಿಸಲಾಗಿತ್ತು. ಸದ್ಯ ಆಕೆಯ ಆರೋಗ್ಯ ಸುಧಾರಿಸಿದ್ದು, ಮಾರ್ಚ್ 8 ರಿಂದ ಈ ಚಿತ್ರದ ಹೊಸ ಶೆಡ್ಯೂಲ್ ಶುರುವಾಗಿದೆ.

  MORE
  GALLERIES

 • 48

  Rishab Shetty: ವಿಜಯ್ ದೇವರಕೊಂಡಗೆ ಆ್ಯಕ್ಷನ್ ಕಟ್ ಹೇಳ್ತಾರಾ ಕಾಂತಾರ ಹೀರೋ?

  ಈ ಶೆಡ್ಯೂಲ್ ನಂತರ ಚಿತ್ರತಂಡ ಬಿಡುಗಡೆ ದಿನಾಂಕವನ್ನೂ ಪ್ರಕಟಿಸಲಿದೆ. ಈ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಜಯರಾಮ್, ಸಚಿನ್ ಖಡೇಕರ್, ಅಲಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮಲಯಾಳಂ ಚಿತ್ರ ಹೃದಯಂ ಖ್ಯಾತಿಯ ಹಿಶಾಮ್ ಅಬ್ದುಲ್ ವಹಾಬ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

  MORE
  GALLERIES

 • 58

  Rishab Shetty: ವಿಜಯ್ ದೇವರಕೊಂಡಗೆ ಆ್ಯಕ್ಷನ್ ಕಟ್ ಹೇಳ್ತಾರಾ ಕಾಂತಾರ ಹೀರೋ?

  ಖುಷಿ ಸಿನಿಮಾ ಹೀಗಿರುವಾಗಲೇ ಜರ್ಸಿ ಖ್ಯಾತಿಯ ಗೌತಮ್ ತಿನ್ನನೂರಿ ನಿರ್ದೇಶನದಲ್ಲಿ ಹನ್ನೆರಡನೇ ಸಿನಿಮಾ ಮಾಡುವುದಾಗಿ ವಿಜಯ್ ಘೋಷಿಸಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಈ ಚಿತ್ರವನ್ನು ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಜಂಟಿಯಾಗಿ ನಿರ್ಮಿಸಿದೆ.

  MORE
  GALLERIES

 • 68

  Rishab Shetty: ವಿಜಯ್ ದೇವರಕೊಂಡಗೆ ಆ್ಯಕ್ಷನ್ ಕಟ್ ಹೇಳ್ತಾರಾ ಕಾಂತಾರ ಹೀರೋ?

  ಸದ್ಯದಲ್ಲೇ ಚಿತ್ರತಂಡ ಚಿತ್ರೀಕರಣ ನಡೆಸಲಿದೆ. ಚಿತ್ರದ ಘೋಷಣೆಯ ಸಂದರ್ಭದಲ್ಲಿ, ನಿರ್ಮಾಪಕರು ಪರಿಕಲ್ಪನೆಯ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು. ಸದ್ಯದಲ್ಲೇ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಅನಿರುದ್ಧ್ ಸಂಗೀತ ನೀಡಲಿದ್ದಾರೆ.

  MORE
  GALLERIES

 • 78

  Rishab Shetty: ವಿಜಯ್ ದೇವರಕೊಂಡಗೆ ಆ್ಯಕ್ಷನ್ ಕಟ್ ಹೇಳ್ತಾರಾ ಕಾಂತಾರ ಹೀರೋ?

  ವಿಜಯ್ ದೇವರಕೊಂಡ ಅವರಿಗೆ ತೆಲುಗು ಅಲ್ಲದೆ ಬೇರೆ ಭಾಷೆಯಲ್ಲೂ ಒಳ್ಳೆಯ ಕ್ರೇಜ್ ಇದೆ. ಈ ಹಿನ್ನಲೆಯಲ್ಲಿ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂನಲ್ಲಿ ಬರುತ್ತಿರುವ ವೃಷಭದಲ್ಲಿ ವಿಜಯ್ ನಟಿಸುತ್ತಿದ್ದಾರೆ.

  MORE
  GALLERIES

 • 88

  Rishab Shetty: ವಿಜಯ್ ದೇವರಕೊಂಡಗೆ ಆ್ಯಕ್ಷನ್ ಕಟ್ ಹೇಳ್ತಾರಾ ಕಾಂತಾರ ಹೀರೋ?

  ಈ ಸಿನಿಮಾದಲ್ಲಿ ವಿಜಯ್ ಮೋಹನ್ ಲಾಲ್ ಅವರ ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. ಅದರ ಭಾಗವಾಗಿ ಈಗಾಗಲೇ ಈ ಚಿತ್ರದ ನಿರ್ದೇಶಕ ನಂದ ಕಿಶೋರ್ ವಿಜಯ್ ಜೊತೆ ಮಾತುಕತೆ ನಡೆದಿದೆಯಂತೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ಈ ಸಿನಿಮಾ ತೆಲುಗು ಹಾಗೂ ಮಲಯಾಳಂನಲ್ಲಿ ತಯಾರಾಗಲಿದೆ ಎಂದು ವರದಿಯಾಗಿದೆ.

  MORE
  GALLERIES