ರಿಷಬ್ ಶೆಟ್ಟಿ ಅವರ ನಟನೆ, ನಿರ್ದೇಶನದ 'ಕಾಂತಾರ' ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಈ ಚಿತ್ರ ಇಂದು ತೆಲುಗಿನಲ್ಲಿ ಬಿಡುಗಡೆಯಾಗಿದೆ. ಎಲ್ಲಿ ನೋಡಿದರೂ ಕಾಂತಾರ ಚಿತ್ರದ ಬಗ್ಗೆಯೇ ಚರ್ಚೆ. ಇದು ಸಿನಿಮಾ ಅಲ್ಲ.. ಕನ್ನಡಿಗರ ಹೆಮ್ಮೆ ಎನ್ನುತ್ತಾರೆ ಪ್ರೇಕ್ಷಕರು.