ಕಾಂತಾರ ಎನ್ನುವ ಟೈಟಲ್ನಲ್ಲಿಯೇ ಒಂದು ಶಕ್ತಿ, ಆಕರ್ಷಣೆ ಇದೆ. ಸ್ಯಾಂಡಲ್ವುಡ್ ಪವರ್ ತೋರಿಸಿದ ರಿಷಬ್ ಸಿನಿಮಾ ಈಗ ಎಲ್ಲರ ಬಾಯಲ್ಲೂ ಚರ್ಚೆಯಾಗುತ್ತಿದೆ.
2/ 12
ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿದ ಈ ಕಾಂತಾರ ಸಿನಿಮಾ ಕನ್ನಡ ಭಾಷೆಯಲ್ಲಿಯೇ 78 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಸಿನಿಮಾ ಈಗ ಬೇರೆ ಭಾಷೆಗಳಲ್ಲಿಯೂ ರಿಲೀಸ್ ಆಗಿದೆ.
3/ 12
ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಬೇಡ ಎಂದು ಹೇಳಿ ಕನ್ನಡ ಭಾಷೆಯಲ್ಲಿಯೇ ವಿಶ್ವಾದ್ಯಂತ ಏಕಕಾಲಕ್ಕೆ ಬಿಡುಗಡೆ ಮಾಡಿದರೂ ದೇಶ ಮಾತ್ರ ಈ ಸಿನಿಮಾ ಪ್ಯಾನ್ ಇಂಡಿಯಾ ಆಗಬೇಕೆನ್ನುವ ಡಿಮ್ಯಾಂಡ್ ಮಾಡಿದೆ.
4/ 12
ಪ್ರೇಕ್ಷಕರು ತೋರಿಸಿದ ಪ್ರೀತಿಯಿಂದಲೇ ಈಗ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಆಗಿ ಬಿಡುಗಡೆಯಾಗಿದೆ. ಬೇರೆ ಭಾಷೆಗಳಲ್ಲಿಯೂ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
5/ 12
ಸಿನಿಮಾದ ಹಾಡುಗಳೂ ಕೂಡಾ ಸೂಪರ್ ಹಿಟ್ ಆಗಿದ್ದು ಸಿಂಗಾರ ಸಿರಿಯೇ ಹಾಗೂ ರವಾಹ ರೂಪಂ ಟ್ಯೂನ್ ಕ್ಲಾಸಿಯಾಗಿವೆ. ಈ ಬಗ್ಗೆ ಸ್ವಲ್ಪ ವಿವಾದ ಇದ್ದರೂ ಇವು ಬೇರೆ ಲೆವೆಲ್ನಲ್ಲಿ ಸೌಂಡ್ ಮಾಡುತ್ತಿದೆ.
6/ 12
ಅಚ್ಯುತ್ ಕುಮಾರ್, ಕಿಶೋರ್, ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್ ಸೇರಿ ಬಹಳಷ್ಟು ಪ್ರತಿಭಾನ್ವಿತ ಕಲಾವಿದರ ತಂಡ ಈ ಸಿನಿಮಾದಲ್ಲಿದೆ.
7/ 12
ಸಿನಿಮಾವನ್ನು ಕುಂದಾಪುರದಲ್ಲಿರುವ ರಿಷಬ್ ಊರಿನಲ್ಲಿಯೇ ಶೂಟ್ ಮಾಡಲಾಗಿದ್ದು ಸಖತ್ ಲೊಕೇಷನ್, ದೃಶ್ಯಗಳು ಪ್ರೇಕ್ಷಕರಿಗೆ ಸಿಗುತ್ತದೆ. ಕಾಡು, ನದಿ, ಗದ್ದೆಗಳ ಚಂದದ ನೋಟ ಕೂಡಾ ಸಿನಿಮಾದಲ್ಲಿ ಲಭ್ಯವಾಗುತ್ತದೆ.
8/ 12
ನಾವು ಈ ಹಿಂದೆಯೇ ಹೇಳಿದ್ದಂತೆ ಕಾಂತಾರ ಎಂದರೆ ಅಡವಿ, ಕಾಡು, ಅರಣ್ಯ ಎಂಬ ಅರ್ಥ. ಈ ಸಿನಿಮಾದಲ್ಲಿ ಕಾಡಿಗೂ ನಾಡಿಗೂ ದೊಡ್ಡ ನಂಟು ಇರುವುದನ್ನು ತೋರಿಸಲಾಗಿದೆ.
9/ 12
ಮೊದಲಿಗೆ ದೈವ ಕಾಡಿನಲ್ಲಿಯೇ ಹೋಗಿ ಕಾಣೆಯದರೆ, ರಾಜನಿಗೆ ನೆಮ್ಮದಿ ಕೊಡುವ ದೈವ ಕಾಣ ಸಿಗುವುದು ಕೂಡಾ ಕಾಡಿನಲ್ಲಿಯೇ. ಜನ ವಾಸಿಸುವುದು ಕೂಡಾ ಕಾಡಿನ ಸಮೀಪ. ಶಿವ ಮರಗಳನ್ನು ಕಡಿದು ಮಾರುವುದು ಕೂಡಾ ಕಾಡಿನಿಂದಲೇ. ಕೊನೆಗೆ ತಪ್ಪಿಸಿಕೊಂಡು ಅಡಗಿ ಕೊಳ್ಳುವುದು ಕೂಡಾ ಕಾಡಿನಲ್ಲಿಯೇ.
10/ 12
ಹಾಗಿದ್ದರೆ ಈ ಸಿನಿಮಾಗೆ ಟೈಟಲ್ ಕೊಟ್ಟಿದ್ದು ಯಾರು? ರಿಷಬ್ ಶೆಟ್ಟಿ ಅಲ್ವೇ ಅಲ್ಲ. ಟೈಟಲ್ ಹಿಂದಿರೋ ಮಾಸ್ಟರ್ ಮೈಂಡ್ ರಾಜ್ ಬಿ. ಶೆಟ್ಟಿ ಅವರದ್ದು. ಅದರ ಟ್ಯಾಗ್ ಲೈನ್ ರಕ್ಷಿತ್ ಶೆಟ್ಟಿ ಐಡಿಯಾ.
11/ 12
ರಿಷಬ್ ಶೆಟ್ಟಿ ಕಥೆಗೆ ಟೈಟಲ್ ಕೊಡುವಂತೆ ರಕ್ಷಿತ್ ಹಾಗೂ ರಾಜ್ ಬಿ ಶೆಟ್ಟಿಗೆ ಕೇಳಿದ್ದರು. ಆಗ ರಾಜ್ ಬಿ ಶೆಟ್ಟಿ ಕಾಂತಾರ ಹಾಗೂ ರಕ್ಷಿತ್ ಒಂದು ದಂತ ಕಥೆ ಎನ್ನುವ ಟೈಟಲ್ ಕೊಟ್ಟಿದ್ದರು.
12/ 12
ರಿಷಬ್ ಬಹಳ ದಿನ ಯೋಚಿಸಿ ಈ ಟೈಟಲ್ ಓಕೆ ಮಾಡಿದ್ದರು. ನಂತರ ಒಂದು ದಂತ ಕಥೆ ಎನ್ನುವುದನ್ನು ಟ್ಯಾಗ್ ಲೈನ್ ಆಗಿ ಬಳಸಲಾಯಿತು.