ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಪ್ರಸ್ತುತ ಮೂರನೇ ವಾರದಲ್ಲಿ ಬಾಕ್ಸ್ ಆಫೀಸ್ ಧೂಳೀಪಟ ಮಾಡುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಭಾರೀ ಹಿಟ್ ಆಗಿರೋ ಸಿನಿಮಾ ಕೆಲಕ್ಷನ್ ಒಂಚೂರೂ ಕಡಿಮೆಯಾಗಿಲ್ಲ.
2/ 8
ವಾಸ್ತವವಾಗಿ ರೆಕಾರ್ಡ್ ಮಾಡುವ ಬಾಕ್ಸ್ ಆಫೀಸ್ ನಂಬರ್ ಈಗ ಬರಲು ಶುರುವಾಗಿದೆ. ಈಗ ವಿಶ್ವಾದ್ಯಂತ ಕಾಂತಾರ ದಾಖಲೆಯ ಕಲೆಕ್ಷನ್ ಮಾಡುತ್ತಿದೆ.
3/ 8
ಆರಂಭದಲ್ಲಿ, ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾ ಕೇವಲ ಕನ್ನಡ ಭಾಷೆಯಲ್ಲಿ ರಿಲೀಸ್ ಆಯಿತು, ಆದರೆ ಅಸಾಧಾರಣ ಸಿನಿಮಾ ವಿಮರ್ಶೆ, ಜನರ ಬಾಯಿ ಮಾತಿನ ಮೆಚ್ಚುಗೆಯೇ ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಿದೆ.
4/ 8
ಚಿತ್ರವನ್ನು ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಿಗೆ ಡಬ್ ಮಾಡಬೇಕಾಯಿತು. ಈ ಹಿಂದೆ, ಕನ್ನಡ ಆವೃತ್ತಿಯು ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು. ಈಗ, ಇತರ ಆವೃತ್ತಿಗಳು ಸಹ ಉತ್ತಮವಾಗಿ ಬಾಕ್ಸ್ ಆಫೀಸ್ನಲ್ಲಿ ಓಡುತ್ತಿದೆ.
5/ 8
ಈಗ ರಿಷಬ್ ಸಿನಿಮಾ 150 ಕೋಟಿ ಗಡಿ ದಾಟಿದೆ ಎಂದು koimoi ವರದಿ ಮಾಡಿದೆ. 18 ದಿನಗಳ ಥಿಯೇಟ್ರಿಕಲ್ ರನ್ನ ಕೊನೆಯಲ್ಲಿ ಎಲ್ಲಾ ಭಾಷೆ ಸೇರಿ ಕಾಂತಾರ ಭಾರತದಲ್ಲಿ 121 ಕೋಟಿ ನಿವ್ವಳ ಲಾಭ ಗಳಿಸಿದೆ.
6/ 8
ಒಟ್ಟು 142.78 ಕೋಟಿ ಗಳಿಸಿದೆ. ವಿದೇಶದಲ್ಲಿ ಈ ಚಿತ್ರವು ಇಲ್ಲಿಯವರೆಗೆ 10.50 ಕೋಟಿ ಗಳಿಸಿದೆ. ಒಟ್ಟಾರೆಯಾಗಿ 153.28 ಕೋಟಿಗಳನ್ನು ಗಳಿಸಿದೆ.
7/ 8
20 ಕೋಟಿ ಬಜೆಟ್ನಲ್ಲಿ ತಯಾರಾದ ಚಿತ್ರಕ್ಕೆ ಇದೊಂದು ಅಪೂರ್ವ ಸಾಧನೆ. ವೀಕ್ ಡೇಸ್ನಲ್ಲಿಯು ಈ ಟ್ರೆಂಡ್ ಸಖತ್ ಆಗಿ ಮುಂದುವರಿದಿದ್ದು ಇನ್ನಷ್ಟು ಕಲೆಕ್ಷನ್ ಆಗುವ ಸಾಧ್ಯತೆ ಇದೆ.
8/ 8
ಸಿನಿಮಾ ಬಗ್ಗೆ ವ್ಯಾಪಕ ವಿಮರ್ಶೆ ವ್ಯಕ್ತವಾಗಿದ್ದು ಸಿನಿಮಾ ಕುರಿತು ಎಲ್ಲಾ ಸುದ್ದಿಗಳೂ ವೈರಲ್ ಆಗುತ್ತಿವೆ. ರಿಷಬ್ ಅವರ ಪತ್ನಿಯೂ ಈ ಸಿನಿಮಾದಲ್ಲಿ ನಟಿಸಿದ್ದಾರೆ.