Kantara-Saptami Gowda: ಕಾಂತಾರದಲ್ಲಿ ಸಪ್ತಮಿಗೆ ಯಾವ ಸೀನ್ ಇಷ್ಟ? 'ಲೀಲಾ' ಹೇಳಿದ 'ಕಾಂತಾರ'ದ ಕಥೆ ಇಲ್ಲಿದೆ
ಭಾರತೀಯ ಚಿತ್ರರಂಗದಲ್ಲೇ ದಾಖಲೆ ಮೇಲೆ ದಾಖಲೆ ಬರೆದ 'ಕಾಂತಾರ' ಚಿತ್ರ ಸಂಕ್ರಾಂತಿ ಹಬ್ಬದಂದು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ. ತೆರೆ ಹಿಂದಿನ ಕಥೆಯಲ್ಲಿ ಸಪ್ತಮಿ ಗೌಡ ತಮಗೆ ಇಷ್ಟವಾದ ಸೀನ್ ಬಗ್ಗೆ ಹೇಳಿದ್ದಾರೆ.
ದೇಶಕ್ಕೆ ದೇಶವೇ ಹೆಮ್ಮೆ ಪಟ್ಟ ಕಾಂತಾರ ಚಿತ್ರ ಸಂಕ್ರಾಂತಿ ಹಬ್ಬದಂದು ಅಂದ್ರೆ ಜನವರಿ 15 ರಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ.
2/ 8
ಕಾಂತಾರ ಕನ್ನಡದಲ್ಲಿ ಮಾತ್ರವಲ್ಲ, ಬೇರೆ ಬೇರೆ ಭಾಷೆಯಲ್ಲೂ ಮೋಡಿ ಮಾಡಿತ್ತು. ಕಾಂತಾರ ನೋಡಿ ಮೆಚ್ಚದವರಿಲ್ಲ. ಎಲ್ಲರೂ ರಿಷಬ್ ಶೆಟ್ಟಿ ಅದ್ಭುತ ನಟನೆ ಹಾಡಿ ಹೊಗಳಿದ್ದರು. ಆ ಸಿನಿಮಾ ಸಂಕ್ರಾಂತಿ ಹಬ್ಬದಂದು ಕಿರುತೆರೆಯಲ್ಲಿ ಮಿಂಚಲಿದೆ.
3/ 8
ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರವೂ ಎಲ್ಲರ ಗಮನ ಸೆಳೆದಿತ್ತು. ನಟಿ ಸಪ್ತಮಿ ಗೌಡ ಅಭಿನಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಅವರು ತಮಗೆ ಯಾವ ದೃಶ್ಯ ಇಷ್ಟ ಎಂದು ಹೇಳಿದ್ದಾರೆ.
4/ 8
ಲೀಲಾ ಕೆಲಸಕ್ಕೆ ಸೇರಿದ ಮೊದಲ ದಿನ ಅವರ ಏರಿಯಾ ಬಳಿ ಗುಂಡಿ ಅಗೆದಿರುತ್ತಾರೆ. ಆ ಜಾಗದಲ್ಲಿ ನಾನು ನಡೆದುಕೊಂಡು ಹೋಗುವ ದೃಶ್ಯ ನನಗೆ ಇಷ್ಟ ಎಂದು ಸಪ್ತಮಿ ಅವರು ಹೇಳಿದ್ದಾರೆ.
5/ 8
ಲೀಲಾ ಪಾತ್ರ ಮಾಡಿದ್ದ ಸಪ್ತಮಿ ಗೌಡ ಅವರು ಆ ಚಿತ್ರದ ಮೂಲಕ ಖ್ಯಾತಿ ಹೊಂದಿದ್ದಾರೆ. ಇನ್ನುಷ್ಟು ಕನ್ನಡ ಸಿನಿಮಾಗಳನ್ನು ಮಾಡಲು ಒಪ್ಪಿಕೊಂಡಿದ್ದಾರೆ.
6/ 8
ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಕಾಂತಾರ ಹಲವು ದಾಖಲೆಯನ್ನು ಬ್ರೇಕ್ ಮಾಡಿದೆ. ರಿಷಬ್ ಶೆಟ್ಟಿ ನಿರ್ದೇಶನ, ಸಿನಿಮಾ ಮೇಕಿಂಗ್, ನಟನೆ ಬಗ್ಗೆ ವಿವಿಧ ಸಿನಿಮಾ ರಂಗಗಳ ಗಣ್ಯರು ಪ್ರತಿಕ್ರಿಯೆ ನೀಡಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದರು.
7/ 8
ಸೆಪ್ಟೆಂಬರ್ 30 ರಂದು ಕನ್ನಡ, ಅಕ್ಟೋಬರ್ 14 ರಂದು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಹಲವು ದಾಖಲೆಗಳನ್ನು ನಿರ್ಮಿಸಿತ್ತು. ಅದರಲ್ಲೂ ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಣ ಸಂಸ್ಥೆ ಹೆಂಬಾಳೆ ಫಿಲ್ಮ್ಸ್ ಭಾರೀ ಹೆಸರನ್ನು ತಂದುಕೊಟ್ಟಿದೆ.
8/ 8
ಜನವರಿ 15ರಂದು ಕಾಂತಾರ ಸಿನಿಮಾವೂ ಸ್ಟಾರ್ ಸುವರ್ಣದಲ್ಲಿ ಬರಲಿದೆ. ನಿಮ್ಮ ಸಂಕ್ರಾಂತಿ ಸಂಭ್ರಮ ಇನ್ನಷ್ಟು ದುಪ್ಪಟ್ಟಗಲಿದೆ. ಕಾಂತಾರ ನೋಡಿ ಎಂಜಾಯ್ ಮಾಡಿ.