Kantara In Tv: ಸಂಕ್ರಾಂತಿಗೆ ಕಾಂತಾರ ಸಿನಿಮಾ, ಸ್ಟಾರ್ ಸುವರ್ಣದಲ್ಲಿ ಸಂಭ್ರಮ!
ದೇಶಕ್ಕೆ ದೇಶವೇ ಹೆಮ್ಮೆ ಪಟ್ಟ ಕಾಂತಾರ ಚಿತ್ರ ಸಂಕ್ರಾಂತಿ ಹಬ್ಬದಂದು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ. ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡವರು ಟಿವಿಯಲ್ಲಿ ಸಿನಿಮಾ ನೋಡಬಹುದು.
ದೇಶಕ್ಕೆ ದೇಶವೇ ಹೆಮ್ಮೆ ಪಟ್ಟ ಕಾಂತಾರ ಚಿತ್ರ ಸಂಕ್ರಾಂತಿ ಹಬ್ಬದಂದು ಅಂದ್ರೆ ಜನವರಿ 15 ರಂದು ಸಂಜೆ 6ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ. ಮಿಸ್ ಮಾಡ್ದೆ ನೋಡಿ.
2/ 8
ಕಾಂತಾರ ಕನ್ನಡಿಗರು ಮಾತ್ರ ಅಲ್ಲ, ಬೇರೆ ಬೇರೆ ಭಾಷೆಯಲ್ಲೂ ಮೋಡಿ ಮಾಡಿತ್ತು. ಕಾಂತಾರ ನೋಡಿ ಮೆಚ್ಚದವರಿಲ್ಲ. ಎಲ್ಲರೂ ರಿಷಬ್ ಶೆಟ್ಟಿ ಅದ್ಭುತ ನಟನೆ ಹಾಡಿ ಹೊಗಳಿದ್ದರು. ಆ ಸಿನಿಮಾ ಸಂಕ್ರಾಂತಿ ಹಬ್ಬದಂದು ಕಿರುತೆರೆಯಲ್ಲಿ ಮಿಂಚಲಿದೆ.
3/ 8
ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಕಾಂತಾರ ಹಲವು ದಾಖಲೆಯನ್ನು ಬ್ರೇಕ್ ಮಾಡಿದೆ. ರಿಷಬ್ ಶೆಟ್ಟಿ ನಿರ್ದೇಶನ, ಸಿನಿಮಾ ಮೇಕಿಂಗ್, ನಟನೆ ಬಗ್ಗೆ ವಿವಿಧ ಸಿನಿಮಾ ರಂಗಗಳ ಗಣ್ಯರು ಪ್ರತಿಕ್ರಿಯೆ ನೀಡಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದರು.
4/ 8
ಸೆಪ್ಟೆಂಬರ್ 30 ರಂದು ಕನ್ನಡ, ಅಕ್ಟೋಬರ್ 14 ರಂದು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಹಲವು ದಾಖಲೆಗಳನ್ನು ನಿರ್ಮಿಸಿತ್ತು. ಅದರಲ್ಲೂ ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಣ ಸಂಸ್ಥೆ ಹೆಂಬಾಳೆ ಫಿಲ್ಮ್ಸ್ ಭಾರೀ ಹೆಸರನ್ನು ತಂದುಕೊಟ್ಟಿದೆ.
5/ 8
ಹಿಂದಿಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಹಲವು ಬಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆದು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿತ್ತು. ಹಲವು ಸಿನಿಮಾ ವಿಮರ್ಶಕರು ಸಿನಿಮಾ ಬಗ್ಗೆ ನಿರಂತರವಾಗಿ ಮೆಚ್ಚುಗೆ ಸೂಚಿಸಿದ್ದರು.
6/ 8
ಕಾಂತಾರ ಸಿನಿಮಾ ಕುರಿತಂತೆ ಸಂದರ್ಶನವೊಂದರಲ್ಲಿ ರಾಜಮೌಳಿ ಮಾತನಾಡಿದ್ದು, ಬಿಗ್ ಬಜೆಟ್ ಸಿನಿಮಾಗಳ ನಡುವೆ ಏಕಾಏಕಿ ಮುನ್ನುಗ್ಗಿ ಬಂದ ಕಾಂತಾರ ಸಿನಿಮಾ ಉತ್ತಮ ನಂಬರ್ಗಳನ್ನು ಪಡೆದುಕೊಳ್ತು. ಇದು ದೊಡ್ಡ ನಂಬರ್ಗಳನ್ನು ಗಳಿಸಲು ಬಿಗ್ ಸ್ಕೇಲ್ ಸಿನಿಮಾಗಳ ಅಗತ್ಯವಿಲ್ಲ ಎಂದು ಹೇಳಿದ್ರು.
7/ 8
ಕಾಂತಾರ ನೋಡಿ ತುಂಬಾ ಕಲಿತೆ. ರಿಷಬ್ ಶೆಟ್ಟಿ ಅವರ ಕನ್ವಿಕ್ಷನ್ ಚಲನಚಿತ್ರವು ಅಸಾಮಾನ್ಯವಾಗಿಸುತ್ತದೆ. ಉನ್ನತ ದರ್ಜೆಯ ಕಥೆ ಹೇಳುವಿಕೆ, ನಿರ್ದೇಶನ ಮತ್ತು ನಟನೆ. ಪೀಕ್ ಕ್ಲೈಮ್ಯಾಕ್ಸ್ ರೂಪಾಂತರವು ನನಗೆ ಗೂಸ್ಬಂಪ್ಸ್ ತಂತು ಎಂದು ಹೃತಿಕ್ ರೋಷನ್ ಹೇಳಿದ್ದರು.
8/ 8
ಜನವರಿ 15ರಂದು ಕಾಂತಾರ ಸಿನಿಮಾವೂ ಸ್ಟಾರ್ ಸುವರ್ಣದಲ್ಲಿ ಬರಲಿದೆ. ನಿಮ್ಮ ಸಂಕ್ರಾಂತಿ ಸಂಭ್ರಮ ಇನ್ನಷ್ಟು ದುಪ್ಪಟ್ಟಗಲಿದೆ. ಕಾಂತಾರ ನೋಡಿ ಎಂಜಾಯ್ ಮಾಡಿ.