Kantara: 'ಓ' ಎನ್ನುವ ದೈವದ ಕೂಗು ಬಂದಿದ್ದು ಎಲ್ಲಿಂದ? 'ಕಾಂತಾರ' ಸೀಕ್ರೆಟ್ ಹೇಳಿದ ಅಜನೀಶ್
'ಕಾಂತಾರ'ದಲ್ಲಿ 'ಓ' ಎನ್ನುವ ದೈವದ ಕೂಗು ಇರಬಹುದು, ದೈವದ ಒಡವೆ ಸದ್ದು, ಚಿಕ್ಕ ಚಿಕ್ಕ ಮಣಿಗಳ ಸೌಂಡ್, ಗಗ್ಗರದ ಶಬ್ಧ ಇರಬಹುದು. ಅದು ಕಂಪ್ಯೂಟರ್ನಿಂದ ಜನರೇಟ್ ಮಾಡಿದ್ದು ಅಲ್ಲ ಎಂದು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹೇಳಿದ್ದಾರೆ.
ಕಾಂತಾರ ಸಿನಿಮಾ ವಿಶ್ವದಾದ್ಯಂತ ಎಲ್ಲೆಡೆ ಭಾರೀ ಸೌಂಡ್ ಮಾಡಿತ್ತು. ಸಿನಿಮಾ ನೋಡಿ ಮೆಚ್ಚದವರಿಲ್ಲ. ಅದರಲ್ಲಿರುವ ದೈವದ ಕೂಗು ಎಲ್ಲರನ್ನೂ ಸೆಳೆದಿತ್ತು. ಆ ಸೌಂಡ್ ಹೇಗೆ ರೆಕಾರ್ಡ್ ಆಯ್ತು ಕೇಳಿ.
2/ 8
ಸ್ಟಾರ್ ಸುವರ್ಣದಲ್ಲಿ ಜನವರಿ 15 ರಂದು ಸಂಜೆ 6 ಗಂಟೆಗೆ ಕಾಂತಾರ ಸಿನಿಮಾ ಪ್ರಸಾರವಾಗಲಿದೆ. ಅದಕ್ಕೆ ತೆರೆ ಹಿಂದಿನ ಕಥೆಗಳನ್ನು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹೇಳಿದ್ದಾರೆ.
3/ 8
ಆ ದೈವದ ಕೂಗು ಇರಬಹುದು. ಆ ದೈವದ ಒಡವೆ ಸುತ್ತೋದು ಇರಬಹುದು. ಚಿಕ್ಕ ಚಿಕ್ಕ ಮಣಿಗಳು ಸೌಂಡ್ ಇರಬಹುದು. ಗಗ್ಗರದ ಶಬ್ಧ ಇರಬಹುದು. ಅದು ಕಂಪ್ಯೂಟರ್ ನಿಂದ ಜನರೇಟ್ ಮಾಡಿದ್ದು ಅಲ್ಲ ಎಂದು ಅಜನೀಶ್ ಅವರು ಹೇಳಿದ್ದಾರೆ.
4/ 8
ಪ್ರತಿಯೊಂದು ಸೌಂಡನ್ನು ನಾವು ಅಲ್ಲಿಗೆ ಹೋಗಿ ಮಾಡಿದ್ದು. ನಾವು ಡಿಟಿಎಸ್ ಮಾಡಬೇಕಾದ್ರೆ, ನಮಗೆ ಇನ್ನೂ ಚೆನ್ನಾಗಿ ಸೌಂಡ್ ಬೇಕು ಅಂತ ಹೇಳಿ, ನಮ್ಮ ಸೌಂಡ್ ಮಿಕ್ಸರ್ ರಾಜ ಕೃಷ್ಣ ಅವರು ಇಲ್ಲಿಂದ ಒಂದು ಟೀಮ್ ಕಳಿಸಿದ್ದರು ಎಂದು ಅಜನೀಶ್ ಅವರು ಹೇಳಿದ್ದಾರೆ.
5/ 8
ನಮ್ಮ ಟೀಂ ಹೋಗಿ ಆ ಗಗ್ಗರದ ಸೌಂಡ್ ಅನ್ನು ಮತ್ತೊಮ್ಮೆ ರೆಕಾರ್ಡ್ ಮಾಡಿ, ಸನ್ನಿವೇಶಕ್ಕೆ ಹೆಂಗೆ ಬೇಕೋ ಆ ರೀತಿ ಸೌಂಡ್ ರೆಕಾರ್ಡ್ ಮಾಡಿದ್ದಾರೆ. ಅದರಿಂದ ದೈವದ ಕೂಗು ಅಷ್ಟೊಂದು ಚೆನ್ನಾಗಿ ಬಂದಿದೆ ಎಂದು ಅಜನೀಶ್ ಅವರು ತೆರೆಯ ಹಿಂದಿನ ಕಥೆ ಹೇಳಿದ್ದಾರೆ.
6/ 8
ಕಾಂತಾರ ಸಿನಿಮಾದಲ್ಲಿ ದೈವದ ಪಾತ್ರವೇ ಹೆಚ್ಚು ಗಮನ ಸೆಳೆದಿತ್ತು. ಆ ಸೌಂಡ್ ಸಹ ಎಲ್ಲರಿಗೂ ಇಷ್ಟ ಆಗಿತ್ತು. ಅದನ್ನು ಕಂಪ್ಯೂಟರ್ ಮೂಲಕ ಮಾಡಲಾಗಿಲ್ಲ. ಬದಲಿಗೆ ಒಂದು ಟೀಂ ಹೋಗಿ ಮಾಡಿದೆ.
7/ 8
ಸೆಪ್ಟೆಂಬರ್ 30 ರಂದು ಕನ್ನಡ, ಅಕ್ಟೋಬರ್ 14 ರಂದು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಹಲವು ದಾಖಲೆಗಳನ್ನು ನಿರ್ಮಿಸಿತ್ತು. ಅದರಲ್ಲೂ ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಭಾರೀ ಹೆಸರನ್ನು ತಂದುಕೊಟ್ಟಿದೆ.
8/ 8
ಹಿಂದಿಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಹಲವು ಬಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆದು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿತ್ತು. ಹಲವು ಸಿನಿಮಾ ವಿಮರ್ಶಕರು ಸಿನಿಮಾ ಬಗ್ಗೆ ನಿರಂತರವಾಗಿ ಮೆಚ್ಚುಗೆ ಸೂಚಿಸಿದ್ದರು.