Manasi Sudhir: ಕಾಂತಾರದ ಕಮಲ ಭರ್ಜರಿ ಫೋಟೋಶೂಟ್! ಸೀರೆಯಲ್ಲಿ ಲುಕ್ ಹೇಗಿದೆ ನೋಡಿ
ಕಾಂತಾರ ಸಿನಿಮಾದಲ್ಲಿ ಶಿವನ ಅಮ್ಮನ ಪಾತ್ರದಲ್ಲಿ ನಟಿಸಿದ್ದ ನಟಿ ಮಾನಸಿ ಸುಧೀರ್ ಸುಂದರವಾದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಫೋಟೋಗಳು ಇಲ್ಲಿವೆ, ನೋಡಿ.
1/ 9
ಕಾಂತಾರ ಸಿನಿಮಾದಲ್ಲಿ ಕಮಲ ಪಾತ್ರವನ್ನು ಮಾಡಿದ್ದ ಮಾನಸಿ ಸುಧೀರ್ ಅವರು ಈಗ ಹಸಿರು ಬಣ್ಣದ ಸೀರೆ ಉಟ್ಟುಕೊಂಡು ಫೋಟೋಶೂಟ್ ಮಾಡಿದ್ದಾರೆ.
2/ 9
ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಸಿರು ಬಣ್ಣಸ ಸುಂದರವಾದ ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
3/ 9
ಹಸಿರು ಬಣ್ಣದ ಸೀರೆ ಉಟ್ಟು ಕೆಂಪು ಬಣ್ಣದ ಬಿಂದಿ ಇಟ್ಟುಕೊಂಡು ಕ್ಯೂಟ್ ಆಗಿ ಕಾಣಿಸಿದ್ದಾರೆ ಮಾನಸಿ. ಇದರಲ್ಲಿ ಅವರ ಸೀರೆ ಬ್ಲೌಸ್ ಡಿಸೈನ್ ಕೂಡಾ ಹೈಲೈಟ್ ಆಗಿದೆ.
4/ 9
ಸುಂದರವಾದ ಆಭರಣಗಳನ್ನು ಧರಿಸಿಕೊಂಡು ಮಾನಸಿ ಅವರು ಪೋಸ್ ಕೊಟ್ಟಿದ್ದು ಸೀರೆಗೆ ಮ್ಯಾಚ್ ಆಗುವ ಹರಳಿನ ನೆಕ್ಲೆಸ್ ಕೂಡಾ ಧರಿಸಿದ್ದರು.
5/ 9
ಮುತ್ತಿನ ಹಾರ ಜೊತೆಗೆ ಸೊಂಟಪಟ್ಟಿಯನ್ನೂ ಧರಿಸಿ ಗ್ರ್ಯಾಂಡ್ ಆಗಿ ಬ್ರೈಡಲ್ ಲುಕ್ನಲ್ಲಿ ಕಾಣಿಸಿದ್ದಾರೆ. ಹಸಿರು ಬಣ್ಣದ ಸೀರೆ ಅವರಿಗೆ ಚೆನ್ನಾಗಿ ಒಪ್ಪುತ್ತಿತ್ತು.
6/ 9
ಕಾಂತಾರ ಸಿನಿಮಾದಲ್ಲಿ ಮಾನಸಿ ಅವರು ರಿಷಬ್ ಅವರ ತಾಯಿಯ ಪಾತ್ರವನ್ನು ಮಾಡಿದ್ದರೂ ಅಸಲಿಗೆ ಅವರೂ ಕೂಡಾ ರಿಷಬ್ ಶೆಟ್ಟಿ ಅವರ ವಯಸ್ಸಿನವರೇ.
7/ 9
ಮಾನಸಿ ಸುಧೀರ್ ಅಭಿನಯ ಗೀತೆಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ. ನೃತ್ಯಗಾತಿಯಾಗಿಯೂ ಗುರುತಿಸಿಕೊಂಡಿರುವ ಮಾನಸಿ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
8/ 9
ಆದರೆ ಮಾನಸಿ ಅವರಿಗೆ ಬ್ರೇಕ್ ಕೊಟ್ಟ ಸಿನಿಮಾ ರಿಷಬ್ ಶೆಟ್ಟಿ ಅವರ ಕಾಂತಾರ. ಇದರಲ್ಲಿ ಅವರ ಕಮಲ ಪಾತ್ರ ಭರ್ಜರಿ ರೆಸ್ಪಾನ್ಸ್ ಗಳಿಸಿದೆ.
9/ 9
ತಲೆಮಾರು ಯಾವುದಾದರೇನು? ನೀರೆಯ ಸೀರೆಪ್ರೀತಿ ಅಳಿಯುವುದೇನು? ಎಂದು ಮಾನಸಿ ಅವರು ತಮ್ಮ ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.
First published: