ಕಾಂತಾರ (Kantara) ಸಿನಿಮಾದ ನಿರ್ದೇಶಕ (Director), ನಟ ರಿಷಬ್ ಶೆಟ್ಟಿ (Rishab Shetty) ಅವರು ಮಂಗಳೂರಿನ (Mangaluru) ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿಕೊಟ್ಟಿದ್ದಾರೆ.
2/ 9
ಕಾಂತಾರ ಹೀರೋ ಕಟೀಲಿಗೆ ಭೇಟಿ ಕೊಟ್ಟಿದ್ದು ದೇವರ ದರ್ಶನ ಪಡೆದಿದ್ದಾರೆ. ಕಾಂತಾರ ನಿನಿಮಾ ಯಶಸ್ಸಿನ ಬಳಿಕ ಮೊದಲ ಬಾರಿಗೆ ಕಟೀಲಿಗೆ ಭೇಟಿಕೊಟ್ಟಿರುವ ನಟ ರಿಷಬ್ ಇತ್ತೀಚೆಗಷ್ಟೇ ಆನೆಗುಡ್ಡೆ ಗಣಪತಿ ದೇವಸ್ಥಾನಕ್ಕೂ ಭೇಟಿಕೊಟ್ಟಿದ್ದರು.
3/ 9
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿರುವ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನಟ ಭೇಟಿ ಕೊಟ್ಟಿದ್ದಾರೆ.
4/ 9
ಪತ್ನಿ ಪ್ರಗತಿ ಜೊತೆ ಆಗಮಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ದೇವರ ಆಶೀರ್ವಾದ ಪಡೆದಿದ್ದಾರೆ.
5/ 9
ದೇವಳದ ವತಿಯಿಂದ ರಿಷಬ್ ಶೆಟ್ಟಿಗೆ ಆತ್ಮೀಯ ಗೌರವವನ್ನು ನೀಡಲಾಗಿತ್ತು. ದೇವರ ಶೇಷ ವಸ್ತ್ರ, ಪ್ರಸಾದ ನೀಡಿ ಆಡಳಿತ ಮಂಡಳಿ ನಟನನ್ನು ಗೌರವಿಸಿದೆ.
6/ 9
ನಟ ರಿಷಬ್ ಶೆಟ್ಟಿ ಅವರು ಮೆರೂನ್ ಕಲರ್ ಶರ್ಟ್ ಧರಿಸಿ ವೈಟ್ ಪಂಚೆಯನ್ನು ಧರಿಸಿದ್ದರು.
7/ 9
ಕಟೀಲಿಗೆ ರಿಷಬ್ ಶೆಟ್ಟಿ ಬಂದ ವಿಚಾರ ತಿಳಿಯುತ್ತಲೇ ಜನರು ನೆಚ್ಚಿನ ನಟನ ಜೊತೆ ಸೆಲ್ಪಿಗಾಗಿ ಮುಗಿಬಿದ್ದಿದ್ದಾರೆ.
8/ 9
ಕಾಂತಾರ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲು ಜಮಾಯಿಸಿದ್ದರು. ದೇವಸ್ಥಾನದ ಮುಂಭಾಗ ಸೆಲ್ಪಿ ಕ್ಲಿಕ್ಕಿಸಲು ಮುಗಿಬಿದ್ದ ಅಭಿಮಾನಿಗಳು ನಟನ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ.
9/ 9
ದೇವಸ್ಥಾನದ ಅಂಗಣದಲ್ಲಿ ಪ್ರದಕ್ಷಿಣೆ ಬರುತ್ತಿರುವ ಕಾಂತಾರ ಹೀರೋ.