Kantara Film: ಕಾಂತಾರ ಮುಡಿಗೆ ಮತ್ತೆ 4 ಪ್ರಶಸ್ತಿ, ನಟ ರಿಷಬ್ ಶೆಟ್ಟಿ ಹೇಳಿದ್ದೇನು?

ಕಾಂತಾರ ಸಿನಿಮಾ ಚಂದನವನ ಚಲನಚಿತ್ರ ವಿಮರ್ಶಕರ ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ಆಕ್ಷನ್ ಮತ್ತು ಅತ್ಯುತ್ತಮ ಸಂಗೀತ ಪ್ರಶಸ್ತಿಯನ್ನು ಪಡೆದಿದೆ.

First published:

  • 18

    Kantara Film: ಕಾಂತಾರ ಮುಡಿಗೆ ಮತ್ತೆ 4 ಪ್ರಶಸ್ತಿ, ನಟ ರಿಷಬ್ ಶೆಟ್ಟಿ ಹೇಳಿದ್ದೇನು?

    ನಿರ್ದೇಶಕ, ನಟ ರಿಷಬ್ ಶೆಟ್ಟಿಯವರ ಕಾಂತಾರ ಸಿನಿಮಾ ಪ್ರಶಸ್ತಿಗಳ ಮೇಲೆ ಪ್ರಶಸ್ತಿಗಳನ್ನು ಬಾಚುತ್ತಿದೆ. ಈಗ ಮತ್ತೆ 4 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

    MORE
    GALLERIES

  • 28

    Kantara Film: ಕಾಂತಾರ ಮುಡಿಗೆ ಮತ್ತೆ 4 ಪ್ರಶಸ್ತಿ, ನಟ ರಿಷಬ್ ಶೆಟ್ಟಿ ಹೇಳಿದ್ದೇನು?

    ಕಾಂತಾರ ಸಿನಿಮಾ,ಚಂದನವನ ಚಲನಚಿತ್ರ ವಿಮರ್ಶಕರ ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ಆಕ್ಷನ್ ಮತ್ತು ಅತ್ಯುತ್ತಮ ಸಂಗೀತ ಪ್ರಶಸ್ತಿಯನ್ನು ಪಡೆದಿದೆ ಎಂದು ಘೋಷಿಸಲು ನನಗೆ ಅಪಾರ ಸಂತೋಷವಾಗಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

    MORE
    GALLERIES

  • 38

    Kantara Film: ಕಾಂತಾರ ಮುಡಿಗೆ ಮತ್ತೆ 4 ಪ್ರಶಸ್ತಿ, ನಟ ರಿಷಬ್ ಶೆಟ್ಟಿ ಹೇಳಿದ್ದೇನು?

    ಅಲ್ಲದೇ ಚಂದನವನ ತಂಡಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ. ಅತ್ಯುತ್ತಮವಾದುದನ್ನು ನೀಡಿದ ನಮ್ಮ ಕಾಂತಾರ ತಂಡಕ್ಕೆ ಸದಾ ಚಿರಋಣಿ ಎಂದು ರಿಷಬ್ ಶೆಟ್ಟಿ ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 48

    Kantara Film: ಕಾಂತಾರ ಮುಡಿಗೆ ಮತ್ತೆ 4 ಪ್ರಶಸ್ತಿ, ನಟ ರಿಷಬ್ ಶೆಟ್ಟಿ ಹೇಳಿದ್ದೇನು?

    ಕಾಂತಾರ ಸಿನಿಮಾ ಈ ಪ್ರಶಸ್ತಿ ಪಡೆದಿದ್ದಕ್ಕೆ ಹಲವಾರು ಅಭಿಮಾನಿಗಳು ವಿಶ್ ಮಾಡಿದ್ದಾರೆ. ಈ ಸಿನಿಮಾ ಎಲ್ಲಾ ಪ್ರಶಸ್ತಿಗೂ ಅರ್ಹ ಎಂದು ಹೇಳಿದ್ದಾರೆ.

    MORE
    GALLERIES

  • 58

    Kantara Film: ಕಾಂತಾರ ಮುಡಿಗೆ ಮತ್ತೆ 4 ಪ್ರಶಸ್ತಿ, ನಟ ರಿಷಬ್ ಶೆಟ್ಟಿ ಹೇಳಿದ್ದೇನು?

    ದೇಶಕ್ಕೆ ದೇಶವೇ ಹೆಮ್ಮೆ ಪಟ್ಟ ಕಾಂತಾರ ಕನ್ನಡ ಮಾತ್ರ ಅಲ್ಲ, ಬೇರೆ ಬೇರೆ ಭಾಷೆಯಲ್ಲೂ ಮೋಡಿ ಮಾಡಿತ್ತು. ಕಾಂತಾರ ನೋಡಿ ಮೆಚ್ಚದವರಿಲ್ಲ. ಎಲ್ಲರೂ ರಿಷಬ್ ಶೆಟ್ಟಿಯ ಅದ್ಭುತ ನಟನೆಯನ್ನು ಹೊಗಳಿದ್ದರು.

    MORE
    GALLERIES

  • 68

    Kantara Film: ಕಾಂತಾರ ಮುಡಿಗೆ ಮತ್ತೆ 4 ಪ್ರಶಸ್ತಿ, ನಟ ರಿಷಬ್ ಶೆಟ್ಟಿ ಹೇಳಿದ್ದೇನು?

    ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಕಾಂತಾರ ಹಲವು ದಾಖಲೆಯನ್ನು ಬ್ರೇಕ್ ಮಾಡಿದೆ. ರಿಷಬ್ ಶೆಟ್ಟಿ ನಿರ್ದೇಶನ, ಸಿನಿಮಾ ಮೇಕಿಂಗ್, ನಟನೆ ಬಗ್ಗೆ ವಿವಿಧ ಸಿನಿಮಾ  ನಾಯಕರು ಮೆಚ್ಚುಗೆ ಸೂಚಿಸಿದ್ದರು.

    MORE
    GALLERIES

  • 78

    Kantara Film: ಕಾಂತಾರ ಮುಡಿಗೆ ಮತ್ತೆ 4 ಪ್ರಶಸ್ತಿ, ನಟ ರಿಷಬ್ ಶೆಟ್ಟಿ ಹೇಳಿದ್ದೇನು?

    ಸೆಪ್ಟೆಂಬರ್ 30 ರಂದು ಕನ್ನಡ, ಅಕ್ಟೋಬರ್ 14 ರಂದು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಹಲವು ದಾಖಲೆಗಳನ್ನು ನಿರ್ಮಿಸಿತ್ತು. ಅದರಲ್ಲೂ ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​​ಗೆ ಭಾರೀ ಹೆಸರನ್ನು ತಂದುಕೊಟ್ಟಿದೆ.

    MORE
    GALLERIES

  • 88

    Kantara Film: ಕಾಂತಾರ ಮುಡಿಗೆ ಮತ್ತೆ 4 ಪ್ರಶಸ್ತಿ, ನಟ ರಿಷಬ್ ಶೆಟ್ಟಿ ಹೇಳಿದ್ದೇನು?

    ಕಾಂತಾರ 2 ಯಾವಾಗ ಬರುತ್ತೆ ಎಂದು ಎಲ್ಲರೂ ಕೇಳುತ್ತಿದ್ದರು. ಅದಕ್ಕೆ ರಿಷಬ್ ಅವರು ನೀವು ನೋಡಿದ್ದು ಕಾಂತಾರ 2. ಮುಂದೆ ಬರುವುದು ಕಾಂತಾರ ಪಾರ್ಟ್ 1 ಎಂದು ಹೇಳಿದ್ದರು.

    MORE
    GALLERIES