ರಿಷಬ್ ಶೆಟ್ಟಿಯವರ ಕಾಂತಾರ ಚಿತ್ರದ ಇತ್ತೀಚಿನ ಅಂಕಿಅಂಶಗಳು ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ಕನ್ನಡ ಚಿತ್ರರಂಗದ ಇತ್ತೀಚಿನ ಹಿಟ್ ವಿಶ್ವಾದ್ಯಂತ ₹100 ಕೋಟಿ ದಾಟಿದ ಆರನೇ ಚಿತ್ರವಾಗಿದೆ.
2/ 7
ಭಾರೀ ವಿಮರ್ಶೆಗಳಿಂದಾಗಿ ಬಾಕ್ಸ್ ಆಫೀಸ್ನಲ್ಲಿ ಚೆನ್ನಾಗಿ ಕಲೆಕ್ಷನ್ ಮಾಡುವಲ್ಲಿ ಕಾಂತಾರ ಸಕ್ಸಸ್ ಆಗಿದೆ. ಈ ಸಿನಿಮಾ ಕೆಜಿಎಫ್ 2, ವಿಕ್ರಾಂತ್ ರೋಣಗಳಂತ ಸಿನಿಮಾಗಳ ಸಾಲು ಸೇರಿದೆ
3/ 7
ವಿಶ್ವಾದ್ಯಂತ ₹1207 ಕೋಟಿ ಗಳಿಸುವ ಮೂಲಕ ಯಶ್ ಅವರ ಕೆಜಿಎಫ್ 2 ಈ ಲಿಸ್ಟ್ನಲ್ಲಿ ವಿಶೇಷ ಸ್ಥಾನ ಪಡೆದಿದೆ. ಕೆಜಿಎಫ್ 1 ₹ 250 ಕೋಟಿ ಸಂಗ್ರಹದೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
4/ 7
ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ₹ 159 ಕೋಟಿ, ಜೇಮ್ಸ್ (₹ 151 ಕೋಟಿ) ಮತ್ತು 777 ಚಾರ್ಲಿ ( ₹ 105 ಕೋಟಿ) ನಂತರದ ಸ್ಥಾನದಲ್ಲಿದೆ.
5/ 7
ಇನ್ನೂ ಕೂಡಾ ಥಿಯೇಟರ್ ಹೌಸ್ ಫುಲ್ ಆಗಿದ್ದು ಜೊತೆಗೆ ಹಿಂದಿ, ತೆಲುಗು ಮತ್ತು ತಮಿಳು ಡಬ್ಬಿಂಗ್ ಆವೃತ್ತಿಗಳು ರಿಲೀಸ್ ಆಗಿರುವ ಕಾರಣ ಕಾಂತಾರ ಸಿನಿಮಾ ಈ ಲಿಸ್ಟ್ನಲ್ಲಿ ಮತ್ತಷ್ಟು ಮೇಲಕ್ಕೇರುವ ಎಲ್ಲಾ ಸಾಧ್ಯತೆಗಳಿವೆ.
6/ 7
ಚಿತ್ರದ ಹಿಂದಿ ಆವೃತ್ತಿಯನ್ನು ಭಾರತದಾದ್ಯಂತ 800 ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರತಂಡ ಈಗಾಗಲೇ ತಿಳಿಸಿದೆ.
7/ 7
ನಟ-ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ ಅವರು ತಮ್ಮ ಬ್ಯಾನರ್ ಪೃಥ್ವಿರಾಜ್ ಪ್ರೊಡಕ್ಷನ್ಸ್ ಮೂಲಕ ಶೀಘ್ರದಲ್ಲೇ ಕಾಂತಾರದ ಮಲಯಾಳಂ ಆವೃತ್ತಿಯನ್ನು ಕೇರಳದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದರು.