ಅದರ ಸೊಗಸು ಏನೆಂದರೆ ಚಪ್ಪಲಿ ಬಿಟ್ಟು ಮಡಿವಂತರನ್ನು ಮೆಚ್ಚಿಸುತ್ತಾ ಅವರನ್ನೂ ಒಳಗೊಳ್ಳುತ್ತಲೇ ಭಕ್ತಿ ಪ್ರೀತಿಯ ನಿಯಮಗಳ ಮುರಿದು ಅವುಗಳ ನಿಜಾರ್ಥ ಹಾಡಿ ಮೆರೆಯುವರು, ಮಡಿವಂತರಲ್ಲೂ ಭಾವ ಬಿಂಬಿಸುವರು. ಹಾಗಾಗಿ ಅಣ್ಣ ಬಿಟ್ಟಿದ್ದು ಚಪ್ಪಲಿಯಲ್ಲ, ಢಂಬಾಚಾರವನ್ನು. ಇದನ್ನೇ ನಾವು ಜಾಣಪದ ಪ್ರತಿಭೆ ಎನ್ನುವುದು. ಅಣ್ಣನೇ ಕಣ್ ಹೊಡೆದಂತೆ ಎಂದು ಕಣ್ ಹೊಡೆಯುವ ಎಮೋಜಿಯನ್ನು ಹಾಕಿದ್ದಾರೆ ಕಿಶೋರ್.