ಕಾಂತಾರ ನಟ ಕಿಶೋರ್ ಅವರು ನೇರ ನುಡಿಯ ಸ್ವಭಾವದವರು. ಎಲ್ಲವನ್ನೂ ನೆರವಾಗಿ ಹೇಳುವ, ಸ್ಪಷ್ಟ ಮಾತಿನ ನಟ. ಈಗ ಅವರು ಕೆಜಿಎಫ್ ಸಿನಿಮಾ ಬಗ್ಗೆ ನೀಡಿರುವ ಹೇಳಿಕೆಯೊಂದು ಸುದ್ದಿಯಾಗಿದೆ.
2/ 7
ಕೆಜಿಎಫ್2 ಸಿನಿಮಾ ನೋಡದವರಿದ್ದಾರಾ? ಎಲ್ಲರೂ ಹಲವು ಬಾರಿ ಥಿಯೇಟರ್ಗೆ ಹೋಗಿ ಸಿನಿಮಾ ನೋಡಿ ಬಂದಿದ್ದಾರೆ. ಆದರೆ ಕಿಶೋರ್ ಇದುವೆಗೂ ಕೆಜಿಎಫ್ ಸಿನಿಮಾ ನೋಡಿಯೇ ಇಲ್ಲವಂತೆ.
3/ 7
ಇದೇ ವಿಚಾರವನ್ನು ಸ್ವತಃ ರಿವೀಲ್ ಮಾಡಿರುವ ಬಹುಭಾಷಾ ನಟ ಕಿಶೋರ್ ಅವರು ಖಾಸಗಿ ಚಾನೆಲ್ ಜೊತೆಗಿನ ಸಂದರ್ಶನದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ. ಅಲ್ಲಿ ಕೆಜಿಎಫ್ ಬಗ್ಗೆಯೂ ಮಾತನಾಡಿದ್ದಾರೆ.
4/ 7
ಇದು ಸರಿಯೋ ತಪ್ಪೋ ಗೊತ್ತಿಲ್ಲ. ನಾನು ಕೆಜಿಎಫ್ 2 ಸಿನಿಮಾ ನೋಡಿಲ್ಲ. ನಾನು ಇಷ್ಟಪಡೋ ರೀತಿಯ ಸಿನಿಮಾ ಅಲ್ಲ ಇದು. ಇದು ನನ್ನ ವೈಯಕ್ತಿಕ ಆಯ್ಕೆ ವಿಚಾರ ಎಂದಿದ್ದಾರೆ.
5/ 7
ಹಿಟ್ ಆಗದ ಸಣ್ಣ ಸಣ್ಣ ಸಿನಿಮಾ ನೋಡಲು ನನಗೆ ಇಷ್ಟ. ಬುದ್ಧಿ ಇಲ್ಲದ ಚಿತ್ರಗಳಿಗಿಂತ ಕೆಲವು ಗಂಭೀರ ವಿಚಾರವನ್ನು ತಿಳಿಸೋ ಸಿನಿಮಾ ನೋಡೋಕೆ ಇಷ್ಟಪಡುತ್ತೇನೆ ಎಂದಿದ್ದಾರೆ.
6/ 7
ಹಿಟ್ ಆಗದ ಸಣ್ಣ ಸಣ್ಣ ಸಿನಿಮಾ ನೋಡಲು ನನಗೆ ಇಷ್ಟ. ಬುದ್ಧಿ ಇಲ್ಲದ ಚಿತ್ರಗಳಿಗಿಂತ ಕೆಲವು ಗಂಭೀರ ವಿಚಾರವನ್ನು ತಿಳಿಸೋ ಸಿನಿಮಾ ನೋಡೋಕೆ ಇಷ್ಟಪಡುತ್ತೇನೆ ಎಂದಿದ್ದಾರೆ.
7/ 7
ಕಿಶೋರ್ ಅವರು ಸೌತ್ನ ಪ್ರಮುಖ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರಿಗೆ ಎಲ್ಲಾ ಭಾಷೆಗಳಲ್ಲಿಯೂ ಅಭಿಮಾನಿಗಳಿರುವುದು ವಿಶೇಷ. ಚಿಕ್ಕ ಪಾತ್ರಗಳನ್ನು ಮಾಡಿದರೂ ನಟ ಸಿನಿಪ್ರೇಕ್ಷಕರ ಮಧ್ಯೆ ಸಖತ್ ಫೇಮಸ್ ಇದ್ದಾರೆ.