ಕಾಂತಾರ 2 ಯಾವಾಗ ಬರುತ್ತೆ ಎಂದು ಎಲ್ಲರೂ ಕೇಳುತ್ತಿದ್ದಾರೆ. ಸಿನಿಮಾ ನೋಡಲು ಕಾಯ್ತಾ ಇದ್ದಾರೆ. ಆದ್ರೆ ನೀವು ನೋಡಿದ್ದು ಕಾಂತಾರ 2. ಮುಂದೆ ಬರುವುದು ಕಾಂತಾರ ಪಾರ್ಟ್ 1 ಎಂದು ಹೇಳಿದ್ರು. ಶೀಘ್ರದಲ್ಲೇ ಕಾಂತಾರ ಪಾರ್ಟ್ 1 ಸಿನಿಮಾ ಕೆಲಸ ಶುರು ಮಾಡುತ್ತೇವೆ ಎಂದು ಹೇಳಿದ್ದಾರೆ. ರಿಷಬ್ ಶೆಟ್ಟಿ ಮಾತು ಕೇಳಿ ಎಲ್ಲರೂ ಅಚ್ಚರಿಗೊಂಡರು. ರಿಷಬ್ ಶೆಟ್ಟಿ ಅವರು ಇಲ್ಲೂ ವಿಭಿನ್ನವಾಗಿ ಯೋಚನೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.