ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯಲ್ಲಿ ಈ ಮೊದಲು ಸಾನಿಯಾ ಪಾತ್ರ ಮಾಡ್ತಿದ್ದ ರಮೋಲಾ ಇದ್ದಕ್ಕಿದ್ದ ಹಾಗೇ ಧಾರಾವಾಹಿಯಿಂದ ಹೊರ ನಡೆದಿದ್ದರು. ನಂತರ ಆ ಪಾತ್ರಕ್ಕೆ ಬೇರೆಯವರು ಬಂದರು.
2/ 8
ಹಳೇ ಸಾನಿಯಾ ಧಾರಾವಾಹಿಯಲ್ಲಿ ವಿಲನ್ ಆಗಿದ್ರೂ, ಜನರ ಮನಸ್ಸು ಕದ್ದಿದ್ರು. ನೋಡೋಕೆ ಕ್ಯೂಟ್ ಆಗಿದ್ದ ರಮೋಲಾ ಅಭಿನಯವನ್ನು ಅದ್ಭುತವಾಗಿ ಮಾಡ್ತಾ ಇದ್ರು.
3/ 8
ರಮೋಲಾ ಅವರು ಈಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ರಿಚ್ಚಿ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೂವೀ ಮೇಕರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗ್ತಿದೆ. ಸದ್ಯದಲ್ಲಿ ಚಿತ್ರ ಬಿಡುಗಡೆಯಾಗಲಿದೆ.
4/ 8
ರಿಚ್ಚಿ ಚಿತ್ರದ ಚಿತ್ರೀಕರಣ ಮುಗಿದಿದೆ. ಬೆಂಗಳೂರು, ಮಡಿಕೇರಿ, ಮೈಸೂರು, ಮಂಗಳೂರಿನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ
5/ 8
ರಿಚ್ಚಿ ಎನ್ನುವ ನಿರ್ದೇಶಕರೇ ಈ ಸಿನಿಮಾ ಮಾಡಿದ್ದು, ಸಿನಿಮಾಗೆ ಅದೇ ಹೆಸರು ಇಟ್ಟಿದ್ದಾರೆ. ಅಲ್ಲದೇ ಇವರೇ ನಾಯಕ ಕೂಡ. ಜೊತೆಗೆ ಈ ಚಿತ್ರವನ್ನು ಇವರೇ ನಿರ್ಮಾಣ ಮಾಡಿದ್ದಾರೆ.
6/ 8
ಲವ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ರಿಚ್ಚಿ ಒಳಗೊಂಡಿದೆ. ಅಲ್ಲದೇ ಈ ಚಿತ್ರವು ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಾಣವಾಗಿದೆ. ಸಿನಿಮಾ ಬಿಡುಗಡೆಗೆ ಎಲ್ಲಾ ಸಿದ್ಧತೆ ಆಗಿದೆ.
7/ 8
ಈ ಚಿತ್ರದಲ್ಲಿ ರಿಚ್ಚಿಗೆ ರಮೋಲಾ, ಮಜಾಭಾರತ ಖ್ಯಾತಿ ಚಂದ್ರಪ್ರಭಾ, ಕಾಮಿಡಿ ಕಿಲಾಡಿಗಳ ರಾಘವೇಂದ್ರ ಸಾಥ್ ನೀಡಿದ್ದಾರೆ. ಅಗಸ್ತ್ಯ ಸಂತೋಷ್ ಸಂಗೀತ ಸಂಯೋಜನೆ ಮಾಡಿದ್ದಾರೆ.
8/ 8
ರಿಚ್ಚಿ ಚಿತ್ರಕ್ಕೆ ಅರ್ಜುನ್ ಕಿಟ್ಟು ಸಂಕಲನ ಮಾಡಿದ್ದು, ವೀರೇಶ್ ಛಾಯಾಗ್ರಹಣ ಮಾಡಿದ್ದಾರೆ. ನೆಗೆಟಿವ್ ಶೇಡ್ ನಲ್ಲಿದ್ದ ಸಾನಿಯಾ ನಾಯಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ.