ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕನ್ನಡತಿ ಸೀರಿಯಲ್ ಮುಕ್ತಾಯವಾಗಿದೆ. ಕಲಾವಿದರೆಲ್ಲಾ ಮುಂದೆ ಏನ್ ಮಾಡ್ತಾರೆ ಎನ್ನುವ ಪ್ರಶ್ನೆಗಳು ಸಹಜವಾಗಿ ಮೂಡಿವೆ.
2/ 8
ಕನ್ನಡತಿ ಧಾರಾವಾಹಿಯಲ್ಲಿ ಎಲ್ಲಾ ಪಾತ್ರಗಳು ಜನರ ಗಮನ ಸೆಳೆದಿವೆ. ಹರ್ಷನ ಪಾತ್ರ ಮಾಡಿದ್ದ ಕಿರಣ್ ರಾಜ್ ಸಹ ಜನರಿಗೆ ತುಂಬಾ ಇಷ್ಟ ಆಗಿದ್ದಾರೆ.
3/ 8
ಕಿರಣ್ ರಾಜ್ ಸಹ ಆ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದರು. ಅಮ್ಮಮ್ಮನ ಮುದ್ದಿನ ಮಗನಾಗಿ, ಭುವಿಯ ಪ್ರೀತಿಯ ಗಂಡನಾಗಿ, ಸ್ವಲ್ಪ ಕೋಪಿಷ್ಠ. ತುಂಬಾ ಕೇರ್ ಮಾಡುವ ವ್ಯಕ್ತಿ ಆಗಿದ್ದರು.
4/ 8
ಜೀವನವು ಅನೇಕ ಆಯ್ಕೆಗಳನ್ನು ಒದಗಿಸುತ್ತದೆ, ನಾವು ಮಾಡುವ ಆಯ್ಕೆಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಕಿರಣ್ ರಾಜ್ ಕೆಲ ದಿನಗಳ ಹಿಂದೆ ಪೋಸ್ಟ್ ಹಾಕಿಕೊಂಡಿದ್ದರು.
5/ 8
ಕಿರಣ್ ರಾಜ್ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಹಲವು ಅವಕಾಶಗಳು ಹುಡುಕಿಕೊಂಡು ಬಂದಿದ್ವು. ಈಗ ಪೂರ್ತಿ ತಮ್ಮ ಸಮಯವನ್ನು ಸಿನಿಮಾಗೆ ಮೀಸಲಿಡಲಿದ್ದಾರೆ.
6/ 8
ಕಿರಣ್ ರಾಜ್ ಅವರು ತಮ್ಮದೇ ಬಟ್ಟೆ ಬ್ರ್ಯಾಂಡ್ ಹೊಂದಿದ್ದಾರೆ. ಅಲ್ದೇ ಬಿರಿಯಾನಿ ರೆಸ್ಟೋರೆಂಟ್ ಕೂಡ ಇದೆ. ಕಿರಣ್ ರಾಜ್ ಫೌಂಡೇಶನ್ ಮೂಲಕ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡ್ತಿದ್ದಾರೆ.
7/ 8
ಕಿರಣ್ ರಾಜ್ ಅಭಿನಯಿಸಿರುವ ಭರ್ಜರಿ ಗಂಡು, ಶೇರ್ ಸಿನಿಮಾಗಳು ಶೀಘ್ರದಲ್ಲೇ ತೆರೆಗೆ ಬರಲಿವೆ. ಧಾರಾವಾಹಿಯಲ್ಲಿ ಹರ್ಷನನ್ನು ಮೆಚ್ಚಿಕೊಂಡ ಜನ, ಸಿನಿಮಾದಲ್ಲೂ ಮೆಚ್ಚುತ್ತಾರಾ ನೋಡಬೇಕು.
8/ 8
ಇನ್ನು ಕಿರಣ್ ರಾಜ್ ಅವರು ಇದೇ ತಿಂಗಳು ಹೊಸ ಸಿನಿಮಾ ಕೂಡ ಅನೌನ್ಸ್ ಮಾಡುತ್ತಿದ್ದಾರೆ. ಯಾವುದು ಎಂದು ಅಭಿಮಾನಿಗಳು ಕಾಯ್ತಾ ಇದ್ದಾರೆ. ಕಿರಣ್ ರಾಜ್ ಅವರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.