ಕನ್ನಡತಿ ಧಾರವಾಹಿಯಲ್ಲಿ ಭುವಿ ಹಾಗೂ ಹರ್ಷನ ಮದುವೆಯಾಗಿದೆ. ಸೀರಿಯಲ್ ಜೊತೆಗೆ ಭುವಿಯ ಬ್ರೈಡಲ್ ಲುಕ್ ಕೂಡಾ ಸಖತ್ ವೈರಲ್ ಆಗ್ತಿದೆ. ನೀವು ಮದುವೆ ಸಿದ್ಧತೆಯಲ್ಲಿದ್ದರೆ ರಂಜನಿ ಫೊಟೋಗಳು ನಿಮಗೆ ಸೀರೆ, ಆಭರಣ ಆರಿಸಿಕೊಳ್ಳಲು ಸಹಾಯ ಮಾಡೋದು ಖಂಡಿತಾ. ಸೀರಿಯಲ್ನಲ್ಲಿ ಆರಂಭದಿಂದಲೂ ಸೀರೆಯಲ್ಲಿಯೇ ಕಾಣಿಸಿಕೊಂಡ ಭುವಿ ಇನ್ನು ಮದುವೆ ಅಂದ್ರೆ ಕೇಳಬೇಕಾ? ಸೀರೆಯೇ ಹೈಲೈಟ್ ಮದುವೆಗೆ ಭುವಿ ಗೋಲ್ಡನ್ ಬಣ್ಣದ ಕೆಂಪು ಝರಿಯ ಸೀರೆ ಉಟ್ಟಿದ್ದರು. ಗೋಲ್ಡನ್ ಸೀರೆಯ ಮೇಲೆ ಕಂಡೂ ಕಾಣದ ಪ್ರಿಂಟ್ ಈ ಸೀರೆಯ ವಿಶೇಷ ಆಕರ್ಷಣೆ ಸ್ವಲ್ಪ ಹೆವಿ ಎನಿಸಿದರೂ ಸೀರೆಗೆ ಸೂಪರ್ ಮ್ಯಾಚಿಂಗ್ ಆಗುವಂತಹ ಟೆಂಪಲ್ ಜ್ಯುವೆಲ್ಲರಿ ಹಾಗೂ ಗಾಜಿನ ಬಳೆಗಳು ಸೀರೆಯ ಲುಕ್ ಕಂಪ್ಲೀಟ್ ಮಾಡಿವೆ ಬಲೂನ್ ಸ್ಟೈಲ್ ಬ್ಲೌಸ್ ಇನ್ನೊಂದು ಪ್ರಮುಖ ಆಕರ್ಷಣೆ. ನೆತ್ತಿ ಬೈತಲೆ, ಡಾಬು ಕೂಡಾ ಮಿಸ್ ಮಾಡಿಲ್ಲ ತೂಗಿ ಆಡುವ ಝುಮುಕಿ, ಹದವಾಗಿ ಮುಡಿಸಿರುವ ಹೂ, ಸಿಂಪಲ್ ಮೇಕಪ್ ಭುವಿಗೆ ಕಂಪ್ಲೀಟ್ ಮಾಡರ್ನ್ ಬ್ರೈಡ್ ಲುಕ್ ಕೊಟ್ಟಿದೆ.