ದೊಡ್ಮನೆ ಯುವರಾಜ್ ಕುಮಾರ್ ಸ್ವಾಗತಕ್ಕೆ ಸಮಸ್ತ ರಾಜವಂಶದ ಬಳಗ ರೆಡಿ ಆಗಿದೆ. ಮಾರ್ಚ್-3 ರಂದು ಯುವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ.
2/ 9
ಸಂತೋಷ್ ಆನಂದರಾಮ್ ನಿರ್ದೇಶನದ ಈ ಚಿತ್ರಕ್ಕೆ ಕೆಜಿಎಫ್ ಮತ್ತು ಕಾಂತಾರ ಚಿತ್ರ ನಿರ್ಮಿಸಿರೋ ಹೊಂಬಾಳೆ ಸಂಸ್ಥೆ ಯುವರಾಜ್ ಕುಮಾರ್ ಚಿತ್ರವನ್ನ ನಿರ್ಮಿಸುತ್ತಿದೆ.
3/ 9
ಯುವರಾಜ್ ಕುಮಾರ್ ಅಭಿನಯದ ಈ ಚಿತ್ರದ ಟೀಸರ್ ಶೂಟಿಂಗ್ ಈಗಾಗಲೆ ಶುರು ಆಗಿದೆ. ಆದರೆ ಈ ಒಂದು ಟೀಸರ್ನ್ನ ವಿಶೇಷವಾಗಿಯೇ ರಿಲೀಸ್ ಮಾಡಲಾಗುತ್ತಿದೆ.
4/ 9
ಮಾರ್ಚ್-3 ರಂದು ಬೆಂಗಳೂರಿನ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಸಂಜೆ 6.30ಕ್ಕೆ ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗುತ್ತಿದೆ.
5/ 9
ರಾಜವಂಶದ ಅಭಿಮಾನಿಗಳು ಈ ಒಂದು ಟೀಸರ್ ರಿಲೀಸ್ ಸಂಭ್ರಮವನ್ನ ಹಬ್ಬದ ರೀತಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಈ ಒಂದು ವಿಶೇಷ ಸಂದರ್ಭದಲ್ಲಿ ಯುವರಾಜ್ ಕುಮಾರ್ ಸಹ ಆಗಮಿಸುತ್ತಿದ್ದಾರೆ.
6/ 9
ದೊಡ್ಡಮಟ್ಟದಲ್ಲಿಯೇ ಯುವರಾಜ್ ಕುಮಾರ್ ಈ ಚಿತ್ರದ ಮೂಲಕ ಎಂಟ್ರಿ ಕೊಡ್ತಾಯಿದ್ದಾರೆ. ಮೊದಲ ಸಿನಿಮಾ ಅಂದ್ಮೇಲೆ ದೊಡ್ಡ ತಯಾರಿನೂ ಮಾಡಿಕೊಂಡಿದ್ದಾರೆ. ಭಾರೀ ತಯಾರಿಯೊಂದಿಗೆ ಚಿತ್ರ ಸೆಟ್ಟೇರುತ್ತಿದೆ.
7/ 9
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನ ಯುವರಾಜ್ ಕುಮಾರ್ ಅವರಲ್ಲಿ ಅಪ್ಪು ಅಭಿಮಾನಿಗಳು ಈಗ ನೋಡುತ್ತಿದ್ದಾರೆ. ಹಾಗಾಗಿಯೇ ಯುವರಾಜ್ ಕುಮಾರ್ ಅವರನ್ನ ಜೂನಿಯರ್ ಪವರ್ ಸ್ಟಾರ್ ಯುವರಾಜ್ ಕುಮಾರ್ ಅಂತಲೂ ಕರೆಯುತ್ತಿದ್ದಾರೆ.
8/ 9
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜನ್ಮ ದಿನದಂದು ಈ ಚಿತ್ರದ ಟೀಸರ್ ರಿಲೀಸ್ ಆಗುತ್ತದೆ ಅಂತ ಹೇಳಲಾಗಿತ್ತು. ಆದರೆ ಈಗ ಮಾರ್ಚ್-03 ರಂದು ಚಿತ್ರದ ಟೈಟಲ್ ಮತ್ತು ಟೀಸರ್ ರಿಲೀಸ್ ಆಗುತ್ತಿದೆ.
9/ 9
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜನ್ಮ ದಿನ ಮಾರ್ಚ್-17 ರಂದು ಯುವರಾಜ್ ಕುಮಾರ್ ಚಿತ್ರ ಸೆಟ್ಟೇರುತ್ತದೆ. ಈ ದಿನವೇ ಶೂಟಿಂಗ್ ಶುರು ಆಗುತ್ತದೆ ಅನ್ನುವ ಮಾಹಿತಿ ಇದೆ.