Akarsh Vajramuni: ನಟ ಭಯಂಕರ ವಜ್ರಮುನಿ ಮೊಮ್ಮಗ ಆಕರ್ಶ್ ವಜ್ರಮುನಿ; ಫೋಟೋಸ್​

ಆಕರ್ಶ್ ವಜ್ರಮುನಿ ಅಭಿನಯದ ಆಸಕ್ತಿಯನ್ನ ಕೂಡ ಬೆಳಸಿಕೊಂಡಿದ್ದಾನೆ. ಬಿಂಬ ಮತ್ತು ಮಾಲತೇಶ್ ಬಡಿಗೇರ್ ತಂಡದಲ್ಲಿ ಆಕರ್ಶ್ ಬಾಲನಟನಾಗಿ ಅಭಿನಯಿಸಿದ್ದಾನೆ. ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾನೆ.

  • News18 Kannada
  • |
  •   | Bangalore [Bangalore], India
First published:

  • 19

    Akarsh Vajramuni: ನಟ ಭಯಂಕರ ವಜ್ರಮುನಿ ಮೊಮ್ಮಗ ಆಕರ್ಶ್ ವಜ್ರಮುನಿ; ಫೋಟೋಸ್​

    ಕನ್ನಡ ಚಿತ್ರರಂಗ ಕಂಡ ಮಹಾನ್ ಖಳನಾಯಕ ನಟ ವಜ್ರಮುನಿ ಅವರ ಫ್ಯಾಮಿಲಿಯಿಂದ ಇಲ್ಲಿವರೆಗೂ ಯಾರೂ ಬಣ್ಣದ ಲೋಕಕ್ಕೆ ಕಾಲಿಟ್ಟಿರಲಿಲ್ಲ. ಆದರೆ ಇದೀಗ ಅವರ ಮೊಮ್ಮಗ ಆಕರ್ಶ್ ವಜ್ರಮುನಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದಾನೆ.

    MORE
    GALLERIES

  • 29

    Akarsh Vajramuni: ನಟ ಭಯಂಕರ ವಜ್ರಮುನಿ ಮೊಮ್ಮಗ ಆಕರ್ಶ್ ವಜ್ರಮುನಿ; ಫೋಟೋಸ್​

    ವಜ್ರಮುನಿ ಅವರ ಮೊಮ್ಮಗ ಆಕರ್ಶ್ ವಜ್ರಮುನಿ ಬಾಲನಟನಾಗಿಯೇ ಇಂಡಸ್ಟ್ರೀಗೆ ಕಾಲಿಟ್ಟಿದ್ದಾರೆ. ಅಜ್ಜ ಸಿನಿಮಾಗಳಲ್ಲಿ ಯಲಾಕುನ್ನಿ ಅಂತಲೇ ಡೈಲಾಗ್ ಹೊಡೆಯುತ್ತಿದ್ದರು. ಅದೇ ಡೈಲಾಗ್‌ನ ಟೈಟಲ್ ಇರೋ ಚಿತ್ರದಲ್ಲಿ ಆಕರ್ಶ್ ಅಭಿನಯಿಸುತ್ತಿದ್ದಾರೆ.

    MORE
    GALLERIES

  • 39

    Akarsh Vajramuni: ನಟ ಭಯಂಕರ ವಜ್ರಮುನಿ ಮೊಮ್ಮಗ ಆಕರ್ಶ್ ವಜ್ರಮುನಿ; ಫೋಟೋಸ್​

    ಆಕರ್ಶ್‌ ವಜ್ರಮುನಿ ತುಂಬಾ ಆ್ಯಕ್ಟೀವ್ ಆಗಿಯೇ ಇದ್ದಾನೆ. ಶಾಲೆಯಲ್ಲೂ ಚೂಟಿ ಹುಡುಗನಾಗಿದ್ದಾನೆ. ಕ್ರೀಡೆಯಲ್ಲಿ ತುಂಬಾ ಆಸಕ್ತಿಯಿದೆ. ಸ್ವಿಮಿಂಗ್, ವಾಲಿಬಾಲ್ ಹೀಗೆ ಎಲ್ಲದರಲ್ಲೂ ಆಕರ್ಶ್ ಆಕ್ಟೀವ್ ಆಗಿಯೇ ಇದ್ದಾನೆ.

    MORE
    GALLERIES

  • 49

    Akarsh Vajramuni: ನಟ ಭಯಂಕರ ವಜ್ರಮುನಿ ಮೊಮ್ಮಗ ಆಕರ್ಶ್ ವಜ್ರಮುನಿ; ಫೋಟೋಸ್​

    ಆಕರ್ಶ್ ವಜ್ರಮುನಿ ಇಲ್ಲಿಯ ಕುಮಾರನ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದಾನೆ. ಓದಿನ ಜೊತೆಗೆ ನಟನೆಯ ಆಕಸ್ತಿಯನ್ನೂ ಬೆಳಸಿಕೊಂಡಿದ್ದಾನೆ. ತಾತನ ಪ್ರಚಂಡ ರಾವಣ ನಾಟಕದ ಡೈಲಾಗ್‌ಗಳನ್ನ ಅದ್ಭುತವಾಗಿಯೇ ಆಕರ್ಶ್‌ ಹೇಳುತ್ತಾನೆ.

    MORE
    GALLERIES

  • 59

    Akarsh Vajramuni: ನಟ ಭಯಂಕರ ವಜ್ರಮುನಿ ಮೊಮ್ಮಗ ಆಕರ್ಶ್ ವಜ್ರಮುನಿ; ಫೋಟೋಸ್​

    ಆಕರ್ಶ್ ವಜ್ರಮುನಿ ಅಭಿನಯದ ಆಸಕ್ತಿಯನ್ನ ಕೂಡ ಬೆಳಸಿಕೊಂಡಿದ್ದಾನೆ. ಬಿಂಬ ಮತ್ತು ಮಾಲತೇಶ್ ಬಡಿಗೇರ್ ತಂಡದಲ್ಲಿ ಆಕರ್ಶ್ ಬಾಲನಟನಾಗಿ ಅಭಿನಯಿಸಿದ್ದಾನೆ. ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾನೆ.

    MORE
    GALLERIES

  • 69

    Akarsh Vajramuni: ನಟ ಭಯಂಕರ ವಜ್ರಮುನಿ ಮೊಮ್ಮಗ ಆಕರ್ಶ್ ವಜ್ರಮುನಿ; ಫೋಟೋಸ್​

    ಯಲಾಕುನ್ನಿ ಮೇರಾ ನಾಮ್ ವಜ್ರಮುನಿ ಚಿತ್ರದ ಅವಕಾಶ ಆಕರ್ಶ್‌ನನ್ನ ಹುಡುಕಿಕೊಂಡು ಬಂದಿದೆ. ಒಳ್ಳೆ ಪಾತ್ರ ಅಂತಲೇ ಆಕರ್ಶ್ ತಂದೆ ಜಗದೀಶ್ ವಜ್ರಮುನಿ ಓಕೆ ಅಂದಿದ್ದಾರೆ. ಈ ಬಗ್ಗೆ ನ್ಯೂಸ್‌-18 ಕನ್ನಡ ಡಿಜಿಟಲ್‌ಗೂ ವಜ್ರಮುನಿ ಅವರ ಕಿರಿಯ ಪುತ್ರ ಜಗದೀಶ್ ಹೇಳಿಕೊಂಡಿದ್ದಾರೆ.

    MORE
    GALLERIES

  • 79

    Akarsh Vajramuni: ನಟ ಭಯಂಕರ ವಜ್ರಮುನಿ ಮೊಮ್ಮಗ ಆಕರ್ಶ್ ವಜ್ರಮುನಿ; ಫೋಟೋಸ್​

    ಯಲಾಕುನ್ನಿ ಚಿತ್ರದಲ್ಲಿ ಒಂದು ಒಳ್ಳೆ ಪಾತ್ರ ಇತ್ತು. ಹಾಗಾಗಿಯೇ ನಮ್ಮ ಪುತ್ರನಿಗೆ ಅಭಿನಯಿಸೋಕೆ ಓಕೆ ಅಂತಲೇ ಹೇಳಿದೆ. ಅದರಲ್ಲೂ ತಂದೆಯ ಹೆಸರಿನ ಸಿನಿಮಾ ತಂದೆಯ ಪಾತ್ರ ಇರೋ ಚಿತ್ರ ಇದಾಗಿತ್ತು. ಈ ಕಾರಣಕ್ಕೆ ಒಪ್ಪಿದೆ ಅನ್ನೋ ಅರ್ಥದಲ್ಲಿಯೇ ಮಗ ಸಿನಿಮಾ ಎಂಟ್ರಿಯ ಹಿನ್ನೆಲೆಯನ್ನ ವಿವರಿಸಿದ್ದಾರೆ.

    MORE
    GALLERIES

  • 89

    Akarsh Vajramuni: ನಟ ಭಯಂಕರ ವಜ್ರಮುನಿ ಮೊಮ್ಮಗ ಆಕರ್ಶ್ ವಜ್ರಮುನಿ; ಫೋಟೋಸ್​

    ಯಲಾಕುನ್ನಿ ಚಿತ್ರದಲ್ಲಿ ಆಕರ್ಶ್ ವಜ್ರಮುನಿ ಮಗನ ಪಾತ್ರ ಮಾಡಿದ್ದಾರೆ. ಕೋಮಲ್ ಪುತ್ರನಾಗಿ ಇಲ್ಲಿ ಅಭಿನಯಿಸುತ್ತಿದ್ದಾರೆ. ಕೋಮಲ್ ಸಿನಿಮಾದಲ್ಲಿ ಡಬಲ್ ರೋಲ್ ಮಾಡುತ್ತಿದ್ದಾರೆ. ಒಂದು ರೋಲ್‌ಲ್ಲಿ ವಜ್ರಮುನಿ ಅವರ ಪಾತ್ರವನ್ನ ಕೋಮಲ್ ನಿರ್ವಹಿಸುತ್ತಿದ್ದಾರೆ.

    MORE
    GALLERIES

  • 99

    Akarsh Vajramuni: ನಟ ಭಯಂಕರ ವಜ್ರಮುನಿ ಮೊಮ್ಮಗ ಆಕರ್ಶ್ ವಜ್ರಮುನಿ; ಫೋಟೋಸ್​

    ಪ್ರದೀಪ್ ಈ ಚಿತ್ರದ ಮೂಲಕ ಡೈರೆಕ್ಟರ್ ಆಗುತ್ತಿದ್ದಾರೆ. ಏಪ್ರಿಲ್ ತಿಂಗಳಿನಿಂದ ಸಿನಿಮಾ ಶೂಟಿಂಗ್ ಶುರು ಆಗುತ್ತಿದೆ. ನವ ನಟಿ ನಿಸರ್ಗ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇನ್ನು ಹಲವು ಪಾತ್ರಗಳೂ ಈ ಚಿತ್ರದಲ್ಲಿ ಇವೆ.

    MORE
    GALLERIES