ಭಕ್ತ ಕುಂಬಾರ: ಭಾರತೀಯ ಭಕ್ತಿ ಪರಂಪರೆಯನ್ನು ಅದರಲ್ಲೂ ಪಂಡರಾಪುರ ವಿಟ್ಠಲನ ಭಕ್ತ ಪ್ರೇಮವನ್ನು ಮತ್ತು ಭಕ್ತರ ಪರಮಾತ್ಮನ ಸಂಬಂಧಗಳನ್ನು ಅಚ್ಚುಕಟ್ಟಾಗಿ ಕಟ್ಟಿ ಕೊಟ್ಟಿರುವ ಚಿತ್ರ ಇದು. 1974 ರಲ್ಲಿ ಕನ್ನಡ ಭಾಷೆಯಲ್ಲಿ ತೆರೆ ಕಂಡ ಈ ಚಿತ್ರ ನಿರ್ದೇಶಿಸಿದ್ದು ಹುಣಸೂರು ಕೃಷ್ಣಮೂರ್ತಿ. ಭಕ್ತಿ ಪರವಶನಾಗಿ ಡಾ. ರಾಜ್ ಅಭಿನಯಿಸಿದ್ದರೆ ಅವರಿಗೆ ಪೈಪೋಟಿ ನೀಡುವಂತೆ ಅಭಿನಯಿಸಿದ್ದು ಹಿರಿಯ ನಟಿ ಲೀಲಾವತಿ.
ಕಸ್ತೂರಿ ನಿವಾಸ: ಈ ಸಿನಿಮಾ 1971ರಲ್ಲಿ ರಿಲೀಸ್ ಆಯ್ತು, ಜಿ. ಬಾಲಸುಬ್ರಮಣ್ಯಂ ಅವರ ಈ ಕತೆಯನ್ನು ಮೊದಲು ತಮಿಳಿನ ಖ್ಯಾತ ನಟ ಶಿವಾಜಿ ಗಣೇಶನ್ ಅವರಿಗೆ ಹೇಳಲಾಗಿತ್ತು. ಆದರೆ ಕೊನೆಯಲ್ಲಿ ನಾಯಕ ಸಾಯುವ ಈ ಕತೆಯನ್ನು ಚಿತ್ರ ಮಾಡಿದರೆ ಅದು ಓಡಲ್ಲ ಎಂದು ಹೇಳಿ ಅವರು ನಿರಾಕರಿಸಿದ್ದರಂತೆ. ನಂತರ ಅದೇ ಕತೆಯನ್ನು ದೊರೆ-ಭಗವಾನ್ ಜೋಡಿ ಕನ್ನಡದಲ್ಲಿ ಡಾ. ರಾಜ್ಕುಮಾರ್ ಅವರನ್ನು ನಾಯಕರನ್ನಾಗಿ ಹಾಕಿಕೊಂಡು ಚಿತ್ರೀಕರಿಸಿದರು. ಅಂದು ಈ ಚಿತ್ರಕ್ಕೆ ಸುಮಾರು ನಾಲ್ಕು ಲಕ್ಷ ರೂಪಾಯಿ ಮಾತ್ರ ವೆಚ್ಚವಾಗಿತ್ತು ಎಂದು ಹೇಳಲಾಗಿದೆ. ಬಿಡುಗಡೆಯಾದ ನಂತರ 16 ಚಿತ್ರಮಂದಿರಗಳಲ್ಲಿ ಅಮೋಘ ನೂರು ದಿನ ಪೂರೈಸಿತು. ಇದನ್ನು ತಿಳಿದ ಶಿವಾಜಿ ಗಣೇಶನ್ ಬಂದು ರಾಜ್ ಅಭಿನಯವನ್ನು ನೋಡಿ ಕಣ್ಣೀರಾದರಂತೆ. ಬಳಿಕ ತಮಿಳಿನಲ್ಲಿ ಅವರ ಅಭಿನಯದಲ್ಲೇ ಸಿನಿಮಾ ಮೂಡಿಬಂದು, ಅಲ್ಲೂ ಹಿಟ್ ಆಯ್ತು.
ಬಬ್ರುವಾಹನ: ನಟ ಸಾರ್ವಭೌಮ, ಕನ್ನಡದ ಕಂಠೀರವ ಡಾ. ರಾಜಕುಮಾರ್ ಅವರ ನಟನೆಯ ಅದ್ಭುತ ಚಲನಚಿತ್ರ ‘ಬಭ್ರುವಾಹನ’. ಇಂದಿಗೂ ಕೂಡ ‘ಬಭ್ರುವಾಹನ’ ಚಲನಚಿತ್ರ ಜನಮಾನಸದಲ್ಲಿ ಬೆರೆತಿ್ದು, ಅಚ್ಚಳಿಯದೇ ಹಾಗೇ ಉಳಿದಿದೆ. ಡಾ. ರಾಜ್ ಕುಮಾರ್ ಅವರ ನಟನೆಯ ಸಿನಿಮಾಗಳಲ್ಲಿ ‘ಬಭ್ರುವಾಹನ’ ಸಾಕಷ್ಟು ಜನಮನ್ನಣೆ ಗಳಿಸಿತ್ತು. 1977ರ ಫೆಬ್ರವರಿ 16ರಂದು ಬಿಡುಗಡೆಯಾದ ‘ಬಭ್ರುವಾಹನ’ ಚಲನಚಿತ್ರಕ್ಕೆ ಈಗ 45 ವರುಷದ ಹರುಷ. ಚಿತ್ರ 45 ವಸಂತಗಳನ್ನು ಪೂರೈಸಿದೆ.
ಶಬ್ದವೇದಿ: 2000ನೇ ಇಸವಿಯಲ್ಲಿ ಬಿಡುಗಡೆಯಾದ ಶಬ್ದವೇದಿ ಡಾ.ರಾಜ್ಕುಮಾರ್ ಅವರು ಅಭಿನಯಿಸಿದ ಕೊನೆಯ ಸಿನಿಮಾ. ಇದರ ನಿರ್ದೇಶಕ ಎಸ್ ನಾರಾಯಣ್. ಜಯಪ್ರದಾ, ಅಶ್ವತ್ಥ್, ಉಮೇಶ್, ಸಾಹುಕಾರ್ ಜಾನಕಿ, ಉಮಾಶ್ರೀ ಮುಂತಾದವರು ಇದರಲ್ಲಿ ಅಭಿನಯಿಸಿದ್ದಾರೆ. ಈ ಚಲನಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಹಂಸಲೇಖ ನೀಡಿದ್ದಾರೆ. ಈ ಚಲನಚಿತ್ರವು ಒಳ್ಳೆಯ ಯಶಸ್ಸನ್ನು ಪಡೆದು ರಜತಮಹೋತ್ಸವವನ್ನು ಆಚರಿಸಿತು
ಸಂಪತ್ತಿಗೆ ಸವಾಲ್ 1974ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಇದರ ನಿರ್ದೇಶಕರು ಎ.ವಿ.ಶೇಷಗಿರಿ ರಾವ್. ಎ,ಎನ್ ಮೂರ್ತಿ ಇದನ್ನು ನಿರ್ಮಿಸಿದರು. ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆದ ಈ ಚಿತ್ರವು ಕನ್ನಡ ಸಿನಿ ವೀಕ್ಷಕರು ಮತ್ತೆ ಮತ್ತೆ ನೋಡಲು ಬಯಸುವ ಚಿತ್ರಗಳಲ್ಲಿ ಒಂದು, ಹಾಗಾಗಿ ಇದು ಎವರ್ ಗ್ರೀನ್ ಚಿತ್ರವೆಂದು ಇದು ಉತ್ತರ ಕರ್ನಾಟಕದಲ್ಲಿ ಆಡಲಾಗುತ್ತಿದ್ದ ಒಂದು ಕಂಪನಿ ನಾಟಕದ ಕತೆಯನ್ನು ಹೊಂದಿದೆ. ಬಿ.ಪಿ.ದುತ್ತರಗಿಯವರು ರಚಿಸಿದ ಈ ನಾಟಕದ ಸಂಭಾಷಣೆಗಳ ನೆಲೆಯಲ್ಲಿಯೇ, ಚಿ.ಉದಯಶಂಕರ್ ರಚಿಸಿದ ಈ ಚಿತ್ರದ ಸಂಭಾಷಣೆಗಳು ಯಾವ ಮಟ್ಟಕ್ಕೆ ಜನಪ್ರಿಯಗೊಂಡವೆಂದರೆ, ಈ ಚಿತ್ರದ ಹಾಡುಗಳ ಧ್ವನಿ ಸುರುಳಿಗಿಂತ ಸಂಭಾಷಣೆಗಳ ಧ್ವನಿ ಸುರುಳಿಯೇ ಪ್ರಸಿದ್ಧಿಯನ್ನು ಪಡೆಯಿತು. ಡಾ.ರಾಜ್ ಈ ಚಲನಚಿತ್ರದ ಮೂಲಕ ಹಿನ್ನಲೆ ಗಾಯಕರಾಗಿ ಜನಪ್ರಿಯಗೊಂಡರು.