ಕನ್ನಡತಿ ಸೀರಿಯಲ್ನ ಭುವಿ ಅಂದ್ರೆ ರಂಜನಿ ರಾಘವನ್ ಅವರು ಕರ್ನಾಟಕದಲ್ಲಿ ಮನೆ ಮನೆ ಮಾತಾಗಿದ್ದಾರೆ. ಅಲ್ಲದೇ ಮಂಗಳಗೌರಿ ಧಾರಾವಾಹಿಯಿಂದಲೂ ಪರಿಚಯ. ಇವರು ಮಲಯಾಳಂ ಧಾರಾವಾಹಿ ಪೌರ್ಣಮಿ ತಿಂಗಳ್ ನಲ್ಲೂ ನಟಿಸಿ ಅಲ್ಲಿಯ ಜನರ ಮನಸ್ಸು ಗೆದ್ದಿದ್ದರು.
2/ 8
ಗಟ್ಟಿಮೇಳ ಧಾರಾವಾಹಿ ಅಮೂಲ್ಯ ಅಂದ್ರೆ ನಿಶಾ ರವಿಕೃಷ್ಣನ್, ತೆಲುಗಿನ ಅಮ್ಮಾಯಿಗಾರು, ಮುತ್ಯಾಮಂತ ಮುತ್ತು ಸೀರಿಯಲ್ ನಲ್ಲೂ ನಟಿಸಿದ್ದಾರೆ. ತೆಲುಗು ಮಂದಿಗೂ ಇಷ್ಟ ಈ ರೌಡಿಬೇಬಿ.
3/ 8
ಲಕ್ಷ್ಮಿ ಬಾರಮ್ಮ, ರಾಧಾ ಕಲ್ಯಾಣ ಧಾರಾವಾಹಿ ಖ್ಯಾತಿಯ ಚಂದನ್ ಕುಮಾರ್ ಸಾವಿತ್ರಮ್ಮಗಾರು ಅಬ್ಬಾಯಿ, ಶ್ರೀಮತಿ ಶ್ರೀನಿವಾಸ್ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ.
4/ 8
ಕಿನ್ನರಿ ಧಾರಾವಾಹಿ ಮೂಲಕ ಮಣಿ ಎನ್ನುವ ಪಾತ್ರದ ಮೂಲಕ ಭೂಮಿ ಶೆಟ್ಟಿ ತಮ್ಮ ಸಿನಿ ಪಯಣ ಶುರು ಮಾಡಿದ್ದಾರೆ. ತೆಲುಗು ಧಾರಾವಾಹಿ ನಿನ್ನೆ ಪೆಲ್ಲಡುಥಾದಲ್ಲಿ ನಟಿಸುತ್ತಿದ್ದಾರೆ
5/ 8
ಕನ್ಯಾಕುಮಾರಿಯ ಚರಣ್ ಯಶ್ವಂತ್ ಗೌಡ ತೆಲುಗಿನ ಅಮ್ಮಾಯಿಗಾರು ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ನಿಶಾ ಅವರಿಗೆ ಜೋಡಿ ಆಗಿದ್ದಾರೆ.
6/ 8
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ದೊರೆಸಾನಿ ಧಾರಾವಾಹಿ ನಟ ಪೃಥ್ವಿ ರಾಜ್ ಕಲರ್ಸ್ ತಮಿಳಿನ ಉಲ್ಲಾತೈಅಲ್ಲಿತಾ ಎಂಬ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ.
7/ 8
ಲಕ್ಷ್ಮೀ ಬಾರಮ್ಮ ಸೀರಿಯಲ್ ನ ಲಚ್ಚಿ, ರಶ್ಮಿ ಪ್ರಭಾಕರ್ ತಮಿಳಿನ ಅರುಂಧತಿ, ತೆಲುಗಿನ ಪೌರ್ಣಮಿ ಸೀರಿಯಲ್ ನಲ್ಲಿ ನಟಿಸುತ್ತಿದ್ದರು. ಇದೀಗ ಕಾವ್ಯಾಂಜಲಿ, ಕಣೈ ಕಲೈಮಾನೆ ಸೀರಿಯಲ್ ಗಳಲ್ಲೂ ಸಹ ನಟಿಸುತ್ತಿದ್ದಾರೆ.
8/ 8
ನಮ್ಮನೆ ಯುವರಾಣಿಯ ಸಾಕೇತ್ ಅಂದ್ರೆ ರಘು ತೆಲುಗಿನ ಚಿರಂಜೀವಿ ಲಕ್ಷ್ಮೀ ಸೌಭಾಗ್ಯವತಿ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಎಲ್ಲರೂ ಇವರ ನಟನೆಯನ್ನು ಮೆಚ್ಚಿಕೊಂಡಿದ್ದಾರೆ.