ಕಲರ್ಸ್ ಕನ್ನಡದಲ್ಲಿ ಹೆಸರಾಂತ ಧಾರಾವಾಹಿಗಳು ಮುಕ್ತಾವಾಗಿವೆ. ಅದು ಬಿಗ್ ಬಾಸ್ಗಾಗಿ. 3000 ಸಾವಿರಕ್ಕೂ ಹೆಚ್ಚು ಸಂಚಿಕೆ ಪೂರೈಸಿದ್ದ ಮಂಗಳಗೌರಿ ಧಾರಾವಾಹಿ ಮುಕ್ತಾಯವಾಗಿದೆ. ಎಷ್ಟೋ ಮಂದಿ ಈ ಧಾರಾವಾಹಿಯನ್ನು ಮಿಸ್ ಮಾಡ್ದೇ ನೋಡ್ತಾ ಇದ್ರು.
2/ 8
ಇನ್ನು ಸಂಜೆ 5.30ಕ್ಕೆ ಪ್ರಸಾರವಾಗುತ್ತಿದ್ದ ನಮ್ಮನೆ ಯುವರಾಣಿ ಧಾರಾವಾಹಿಯೂ ಸಹ ಮುಗಿದಿದೆ. ಬಿಗ್ ಬಾಸ್ ಶುರು ಮಾಡಲು ಈ ಸೀರಿಯಲ್ ಸಹ ಮುಕ್ತಾಯವಾಗಿದೆ.
3/ 8
2020ರಿಂದ ಪ್ರಸಾರವಾಗುತ್ತಿದ್ದ ನನ್ನರಸಿ ರಾಧೆ ಧಾರಾವಾಹಿಯೂ ಮುಕ್ತಾಯವಾಗಿದೆ. ಸಿಹಿಕಹಿ ಚಂದ್ರು, ಕೌಸ್ತುಭ ಮಣಿ, ಅಭಿನವ್ ವಿಶ್ವನಾಥನ್, ವೀಣಾ ರಾವ್, ವಿಜಯಲಕ್ಷ್ಮೀ ಕಾಶಿ ಈ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯೂ ರಾತ್ರಿ 10 ಗಂಟೆಗೆ ಪ್ರಸಾರ ಆಗ್ತಾ ಇತ್ತು.
4/ 8
ಸಂಜೆ 5 ಗಂಟೆಗೆ ಪ್ರಸಾರವಾಗುತ್ತಿದ್ದ ಕನ್ಯಾಕುಮಾರಿ ಧಾರಾವಾಹಿ ಸಹ ಮುಕ್ತಾಯವಾಗಿದೆ. ರಘುಚರಣ್ ತಿಪಟೂರು ನಿರ್ದೇಶನದ 'ಕನ್ಯಾಕುಮಾರಿ' ಧಾರಾವಾಹಿ ಬಿಗ್ ಬಾಸ್ಗಾಗಿ ಮುಕ್ತಾಯವಾಗಿದೆ.
5/ 8
ಇನ್ನು ಸಂಜೆ 6.30ಕ್ಕೆ ಪ್ರಸಾರವಾಗ್ತಿದ್ದ ದೊರೆಸಾನಿ ಧಾರಾವಾಹಿ ಕೂಡ ಮುಕ್ತಾಯವಾಗಿದೆ. ಬಂದು ಕೆಲವೇ ದಿನಗಳಲ್ಲಿ ಸೀರಿಯಲ್ ಎಂಡ್ ಆಗಿದೆ.
6/ 8
ಕಲರ್ಸ್ ಕನ್ನಡದಲ್ಲಿ ನನ್ನರಸಿ ರಾಧೆ, ನಮ್ಮನೆ ಯುವರಾಣಿ, ಮಂಗಳಗೌರಿ ಮದುವೆ, ಕನ್ಯಾಕುಮಾರಿ ಧಾರಾವಾಹಿಗಳು ಒಟ್ಟಿಗೆ ಮುಗಿದವು. ನಂತರ ದೊರೆಸಾನಿ ಧಾರಾವಾಹಿ ಮುಕ್ತಾಯ ಆಯ್ತು.
7/ 8
ಇನ್ನು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಕಮಲಿ ಸಹ ಈ ವರ್ಷ ಮುಕ್ತಾಯವಾಗಿದೆ. ನಟಿ ಅಮೂಲ್ಯ ಗೌಡ ಬಿಗ್ ಬಾಸ್ಗೆ ಬಂದಿದ್ದಾರೆ.
8/ 8
2022 ರಲ್ಲಿ ಈ ಎಲ್ಲಾ ಧಾರಾವಾಹಿಗಳು ಮುಕ್ತಾಯವಾಗಿವೆ. ಇನ್ನು ಹೊಸ ಹೊಸ ಧಾರಾವಾಹಿಗಳು ಜನರನ್ನು ಮನರಂಜಿಸಲು ಬಂದಿವೆ.