ಜೀ ಕನ್ನಡದಲ್ಲಿ ಎಲ್ಲಾ ಧಾರಾವಾಹಿಗಳು ಸೂಪರ್ ಆಗಿ ಮೂಡಿ ಬರುತ್ತಿವೆ. ಈ ಬಾರಿ ಟಿವಿಆರ್ ಟಾಪ್ ಮೊದಲನೇ ಸ್ಥಾನದಲ್ಲಿ ಗಟ್ಟಿಮೇಳ ಧಾರಾವಾಹಿ ಇದೆ. 10.4 ಟಿವಿಆರ್ ಪಡೆದಿದೆ.
2/ 8
ಸಂಜೆ 7.30ಕ್ಕೆ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ 2 ನೇ ಸ್ಥಾನದಲ್ಲಿ. 9.9 ಟಿವಿಆರ್ ಪಡೆದಿದೆ. ಧಾರಾವಾಹಿಯಲ್ಲಿ ಪುಟ್ಟಕ್ಕನ ಮಗಳು ಸಹನಾ ಮದುವೆ ಸಂಭ್ರಮ ನಡೆಯುತ್ತಿದೆ.
3/ 8
ಇನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ಶ್ರಿರಸ್ತು, ಶುಭಮಸ್ತು ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. 8.8 ಟಿವಿಆರ್ ಪಡೆದಿದೆ. ಸುಧಾರಾಣಿ ಅಭಿನಯವನ್ನು ಜನ ಮೆಚ್ಚಿಕೊಂಡಿದ್ದಾರೆ.
4/ 8
ಕಲರ್ಸ್ ಕನ್ನಡದಲ್ಲಿ ಸಂಜೆ 7 ಗಂಟೆಗೆ ಪ್ರಸಾರವಾಗುವ ಗಟ್ಟಿಮೇಳ ಧಾರಾವಾಹಿ 7.0 ಟಿವಿಆರ್ ಪಡೆದಿದೆ. ಅಕ್ಕ-ತಂಗಿಯ ಪ್ರೀತಿಯ ಆಧಾರಿತ ಕಥೆ ಇದಾಗಿದೆ.
5/ 8
ಇನ್ನೂ ವೀಕೆಂಡ್ ನಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ಸ್ 11.2 ಟಿವಿಆರ್ ಪಡೆದಿದೆ. ಮಕ್ಕಳ ಹಾಡು ಜನರನ್ನು ಬೆರಗುಗೊಳಿಸಿದೆ. ನಾದಮಯವಾದ ಸಂಗೀತ ಎಲ್ಲರನ್ನು ಗಮನ ಸೆಳೆಯುತ್ತಿದೆ.
6/ 8
ಅಲ್ಲದೇ ಜೀ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ 8.7 ಟಿವಿಆರ್ ಪಡೆದಿದೆ. ಕಲಾವಿದರು ಜನರನ್ನು ನಗಿಸುವಲ್ಲಿ ಯಶ್ವಿಸಿಯಾಗಿದ್ದಾರೆ.
7/ 8
ಜೀ ಕನ್ನಡದಲ್ಲಿ ಈ ಬಾರಿ ಶುರುವಾಗಿರುವ ಸೂಪರ್ ಕ್ವೀನ್ ಕಾರ್ಯಕ್ರಮ 5.0 ಟಿವಿಆರ್ ಪಡೆದಿದೆ. ಸೂಪರ್ ಕ್ವೀನ್ ಕಾರ್ಯಕ್ರಮವನ್ನು ಹೆಣ್ಣು ಮಕ್ಕಳಿಗಾಗಿ ಮಾಡಲಾಗಿದೆ.
8/ 8
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 02 ಕಾರ್ಯಕ್ರಮ 3.2 ಟಿವಿಆರ್ ಪಡೆದಿದೆ. ಈ ಕಾರ್ಯಕ್ರಮ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ.